Title : Girmitt, A collection of humorous writings, Author : Prashant Adur, Publisher : Manohara Grantha Mala.

ಗಿರ್‌ಮಿಟ್

Rs. 250.00
Skip to product information
Title : Girmitt, A collection of humorous writings, Author : Prashant Adur, Publisher : Manohara Grantha Mala.
ಗಿರ್‌ಮಿಟ್
Prashantha Adur
Publisher - ಮನೋಹರ ಗ್ರಂಥಮಾಲಾ
Type - Paperback
Pages - 176
- Free Shipping Above ₹400

- Cash on Delivery (COD) Available*
Rs. 250.00
Shipping calculated at checkout.

Pickup available at Harivu Books New Shop

Usually ready in 24 hours

View store information

ಗಿರ್‌ಮಿಟ್

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಹಾಸ್ಯ ಎಂದರೆ ಹೆಂಡತಿಯನ್ನು ಆಡಿಕೊಳ್ಳುವುದು. ದಾಂಪತ್ಯವನ್ನು ಗೇಲಿ ಮಾಡುವುದು. ಸಂಸಾರದ ಸಂಗತಿಗಳನ್ನು ನಗೆಪಾಟಲು ಮಾಡುವುದು ಅಂತ ಬಹಳ ಕಾಲ ನಮ್ಮನ್ನು ಅನೇಕ ಹಾಸ್ಯಲೇಖಕರು ನಂಬಿಸಿದ್ದರು. ಹೆಣ್ಣನ್ನು ಗೇಲಿ ಮಾಡದೇ ಹಾಸ್ಯಹುಟ್ಟುವುದೇ ಇಲ್ಲ ಎಂದು ನಂಬಿದವರಿದ್ದರು. ಇವತ್ತಿಗೂ ಕನ್ನಡ ಸ್ಟಾಂಡಪ್ ಕಾಮಿಡಿಗಳಲ್ಲಿ ಹೆಂಡತಿ ಮತ್ತು ಮನೆ ಬೇಕೆ ಬೇಕು, ಸ್ವಂತದ್ದಾದಷ್ಟೂ ಒಳ್ಳೆಯದು ಎಂಬ ಹಳಸಲು ತಮಾಷೆಯನ್ನು ನಾಚಿಕೆಯಿಲ್ಲದೇ ಹೇಳುತ್ತಿರುತ್ತಾರೆ.

ಪ್ರಶಾಂತ ಆಡೂರ ಅವರ ಹಾಸ್ಯದಲ್ಲಿ ಇಂಥ Misogyny ಇಲ್ಲ. ಎಲ್ಲ ಒಳ್ಳೆಯ ಹಾಸ್ಯಪಟುಗಳಂತೆ ಅವರು ತನ್ನನ್ನು ತಾನೇ ಗೇಲಿಮಾಡಿಕೊಳ್ಳಬಲ್ಲವರು. ಸಂಸಾರದ ಸಂಕಟಗಳಲ್ಲಿ ಹುಟ್ಟುವ ಅವಿಸ್ಮರಣೀಯ ಕ್ಷಣಗಳನ್ನು ತಿಳಿನಗೆಯ ಬಟ್ಟಲಲ್ಲಿಟ್ಟು ಕುಡಿಸುವವರು. ಬದುಕಿನಲ್ಲಿ ಅತ್ಯಂತ ಕಷ್ಟದ ಮತ್ತು ಪರಂಪರಾನುಗತ ಸಂಗತಿ ಏನೆಂದರೆ ಕುಕ್ಕರಿನ ಸೀಟಿಯ ಲೆಕ್ಕ ಇಡುವುದು ಎಂದು ಹೇಳುತ್ತಾ ಆಧುನಿಕ ಬದುಕಿಗೊಂದು ಹಾಸ್ಯದ ರೂಪಕ ಕೊಡಬಲ್ಲವರು.

ಕನ್ನಡದ ಪ್ರತಿಯೊಂದು ಆಡುಭಾಷೆಗೂ ಅದರಲ್ಲೇ ಆದ್ದ ವಿನ್ಯಾಸವಿದೆ. ಭಾಷೆಯನ್ನು ಕೊಂಚ ಬಳುಕಿಸಿದರೆ ತುಟಿಯೂ ಕೊಂಕುವಂತೆ ಮಾಡುತ್ತದೆ. ಇಲ್ಲಿರುವ ಪ್ರಸಂಗಗಳಲ್ಲಿ ನಿರೂಪಕರೂ ಅವರ ಗೆಳೆಯರೂ ಸೇರಿ ಆಡುವ ಮಾತು. ಆಟ. ಪ್ರಸಂಗಗಳೆಲ್ಲ ಓದುಗನನ್ನು ನಗಿಸುತ್ತವೆ. ಸಪ್ಪೆ ದೈನಿಕದ ನಡುವೆಯೂ ನಗೆಮಿಂಚು ಸಾಧ್ಯ ಅನ್ನುವುದನ್ನು ತೋರಿಸುತ್ತವೆ.

ನಾನು ಹಾಸ್ಯದ ವಿಚಾರಕ್ಕೆ ಬಂದರೆ ಜಾರ್ಜ್ ಮೈಕ್ ಅಭಿಮಾನಿ. ಇಂಗ್ಲಿಷಿನಲ್ಲಿ ಆತ ಬರೆಯುತ್ತಿದ್ದ ಪ್ರಸಂಗಗಳು ನನ್ನನ್ನು ಅನೇಕ ವರ್ಷಗಳ ಕಾಲ ಹಿತಾನುಭವದಲ್ಲಿ ಸುಖವಾಗಿಟ್ಟಿದ್ದವು. ಪ್ರಶಾಂತ ಆಡೂರ ಕೂಡ ನನ್ನಿಷ್ಟದ ಹಾಸ್ಯ ಬರಹಗಾರರು. ಅವರ 'ಕುಟ್ಟವಲಕ್ಕಿ', 'ಗೊಜ್ಜವಲಕ್ಕಿ', 'ಅಳ್ಳಿಟ್ಟು', 'ತಂಬಿಟ್ಟ'ನ್ನು ತುಂಬಿಕೊಂಡು ಖುಷಿಯಾಗಿರುವ ನನಗೆ ಅವರೀಗ 'ಗಿರ್ಮಿಟ್' ಅನ್ನು ಕೊಟ್ಟಿದ್ದಾರೆ.

-ಜೋಗಿ

You may also like

Subscribe to our emails

Be the first to know about new collections and special offers.