Skip to product information
1 of 2

Rangaswamy Mookanahalli,

ಈ ಹಣಕಾಸು ತಪ್ಪುಗಳನ್ನು ನೀವು ಮಾಡಬೇಡಿ !

ಈ ಹಣಕಾಸು ತಪ್ಪುಗಳನ್ನು ನೀವು ಮಾಡಬೇಡಿ !

Publisher - ಸಾವಣ್ಣ ಪ್ರಕಾಶನ

Regular price Rs. 325.00
Regular price Rs. 325.00 Sale price Rs. 325.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 232

Type - Paperback

Gift Wrap
Gift Wrap Rs. 15.00

ರಂಗಸ್ವಾಮಿ ಮೂಕನಹಳ್ಳಿ

ಈ ಹಣಕಾಸು ತಪ್ಪುಗಳನ್ನು ನೀವು ಮಾಡಬೇಡಿ!

ದಿನನಿತ್ಯ ಸಮಾಜದಲ್ಲಿನ ತರಹಾವರಿ ಜನರನ್ನು ಭೇಟಿಯಾಗುವ ಸುಯೋಗ ನನ್ನದು. ಗೊತ್ತಿದ್ದೂ, ಗೊತ್ತಿಲದೆಯೂ ಜನರು ಮಾಡುವ ಸಾಮಾನ್ಯ ತಪ್ಪುಗಳನ್ನು ಪಟ್ಟಿ ಮಾಡಿದರೆ ಅದೊಂದು ರೆಫರೆನ್ಸ್ ಪಾಯಿಂಟ್ ಆಗಿ ಉಳಿದುಕೊಳ್ಳುತ್ತದೆ ಎನ್ನುವುದು ಈ ಪುಸ್ತಕ ಬರೆಯಲು ಪ್ರಮುಖ ಕಾರಣ.

ಇಲ್ಲಿ ಹತ್ತು ಅಧ್ಯಾಯಗಳಿವೆ. ಒಟ್ಟಾರೆ ಸಾಮಾನ್ಯವಾಗಿ ನಾವೆಲ್ಲಾ ಹಣಕಾಸಿನ ವಿಷಯದಲ್ಲಿ ಮಾಡುವ ನೂರು ತಪ್ಪುಗಳನ್ನು ಇಲ್ಲಿ ದಾಖಲಿಸಿದ್ದೇನೆ. ಅಂದ ಮಾತ್ರಕ್ಕೆ ಇದನ್ನು ಬಿಟ್ಟು ಬೇರೆ ತಪ್ಪುಗಳಿಲ್ಲವೇ? ಜನರು ಬೇರೆ ತಪ್ಪುಗಳನ್ನು ಮಾಡುವುದಿಲ್ಲವೇ? ಎನ್ನುವ ಪ್ರಶ್ನೆ ಯಾರಿಗಾದರೂ ಉದ್ಭವವಾದರೆ, ಗಮನಿಸಿ ಇವು ಸಾಮಾನ್ಯ ತಪ್ಪುಗಳು. ಯಾರೂ ಬೇಕಾದರೂ ಮಾಡಬಹುದಾದ ತಪ್ಪುಗಳು. ಇವೆಷ್ಟು ಸಣ್ಣ ತಪ್ಪುಗಳು ಎಂದರೆ, ಇವು ತಪ್ಪು ಎಂದು ತಪ್ಪು ಮಾಡಿದವರಿಗೆ ಅನ್ನಿಸುವುದೇ ಇಲ್ಲ ಅಂತಹ ತಪ್ಪುಗಳು. ಆದರೆ ಅವುಗಳು ಬೀರುವ ಪ್ರಭಾವ ದೊಡ್ಡದು. ಸಣ್ಣ ಕಿಡಿ ಎಂದು ನಿರ್ಲಕ್ಷ ಮಾಡಿದರೆ ಆ ಸಣ್ಣ ಕಿಡಿ ಮನೆಯನ್ನು, ಊರನ್ನು ಸುಡುವ ಕ್ಷಮತೆಯನ್ನು ಹೊಂದಿರುತ್ತದೆ. ಇಲ್ಲಿನ ತಪ್ಪುಗಳು ಸಹ ಅದೇ ರೀತಿಯವು. ಮೇಲ್ನೋಟಕ್ಕೆ ಸಣ್ಣವು, ಬೀರುವ ಪ್ರಭಾವ ದೊಡ್ಡದು.

ಈ ತಪ್ಪುಗಳನ್ನು ಸಾಧ್ಯವಾದಷ್ಟೂ ಮಾಡದಿರುವುದು ಒಳ್ಳೆಯದು. ಆದರೆ ನಾವೆಲ್ಲರೂ ಇಲ್ಲಿನ ನೂರು ಸಾಮಾನ್ಯ ತಪ್ಪುಗಳಲ್ಲಿ ಒಂದಲ್ಲ ಒಂದನ್ನು ಮಾಡಿಯೇ ಇರುತ್ತೇವೆ. ಇಂದಿಗೂ ಮಾಡುತ್ತಿರುತ್ತೇವೆ. ಅವುಗಳನ್ನು ನಿಲ್ಲಿಸುವುದು, ಅದರಿಂದ ಹೊರಬರುವ ಅಂಶಗಳ ಬಗ್ಗೆ ಕೂಡ ಒಂದೆರೆಡು ಸಾಲಿನಲ್ಲಿ ತಿಳಿಸುವ ಪ್ರಯತ್ನ ಇಲ್ಲಿದೆ

View full details