Shashi Tareekere
ಡುಮಿಂಗ
ಡುಮಿಂಗ
Publisher - ಛಂದ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 91
Type - Paperback
Couldn't load pickup availability
ಈ ಕತೆಗಳನ್ನು ಬರೆಯುವ ಮುಖೇನ ಈ ಜೀವಿಗಳಿಗೆ ತಾನು ನ್ಯಾಯ ಕೊಡಿಸುವೆನೆಂಬ ಹಮ್ಮು ಶಶಿಯವರ ಕತೆಗಳಲ್ಲಿಲ್ಲ. ಕನಿಷ್ಠ ಆ ಲೋಕದಲ್ಲಿ ಬದಲಾವಣೆಯ ಸಾಧ್ಯತೆ ಇದೆ ಎನ್ನುವ ಸೋಗಿನೊಂದು ಉಪಸಂಹಾರದ ಸಾಲನ್ನೂ ಕತೆಗಾರನು ಆ ಪಾತ್ರಗಳಿಗೆ ಸೂಚಿಸುವುದಿಲ್ಲ. ಇಂತಹ ಬದುಕುಗಳನ್ನು ಓದುಗರ ಮುಖಕ್ಕೆ ಹಿಡಿದು ಅವರ ಆತ್ಮಗಳನ್ನು ಕೋರ್ಟ್ ಮಾರ್ಷಲಿಗೊಳಪಡಿಸುವ ಅಹಂಭಾವವೂ ಇಲ್ಲಿಲ್ಲ. ಅಥವಾ ನಿರ್ಲಿಪ್ತದ ಹೆಸರಿನಡಿ ಆ ಬದುಕುಗಳನ್ನು ತಮಾಷೆಯಾಗಿ ನೋಡುವ ಕಣ್ ದೃಷ್ಟಿಯನ್ನೂ ಭಾಷಾಸೃಷ್ಟಿಯನ್ನೂ ಅವರು ಅಪೇಕ್ಷಿಸುತ್ತಿಲ್ಲ. ಇದು ಹೀಗಿದೆ ಎನ್ನುವ ವರದಿಗಾರತ್ವದ ಚಪ್ಪಟಿತನದಿಂದ ಪಾರಾಗುವ ಜಾಣ್ಮೆಯೂ ಅವರಿಗಿದೆ. ಈ ವಿಕ್ಷಿಪ್ತ ಮನೋಭಾವಗಳಿಗೆ ಕಾರಣವಾದ ಪಾತ್ರಗಳ ಗತದಲ್ಲೂ ಅವರು ಪಕ್ಷ ಸಾಧಿಸುವುದಿಲ್ಲ. ಎಲ್ಲಾ ಪಾರ್ಶ್ವಗಳನ್ನು ತೆರೆದಿಡುವ ವಿವರಣಾತ್ಮಕ ಶೈಲಿಗೆ ತಾವೇ ಬಹಿಷ್ಕಾರ ಘೋಷಿಸಿಕೊಂಡಿದ್ದಾರೆ. ಬಹಳ ಯೋಚಿಸಿಯೇ ಬರೆದ ಕತೆಗಳಿವು. ಎಲ್ಲರೂ ಯೋಚಿಸಿಯೇ ಬರೆಯುವುದು. ಆದರೆ ಬಹಳ ಸಲ ಆ ಪ್ರಜ್ಞಾಬಳಕೆಯ ಕ್ಷೇತ್ರಕಾರ್ಯವೇನಿದೆ ಅದು ಕತೆಗಳಲ್ಲಿ ಮುನ್ನೆಲೆಗೆ ಬಂದುಬಿಡುವ ಮುಠ್ಠಾಲತನವನ್ನು ನಿವಾರಿಸಿಕೊಳ್ಳಲು ಸೋಲುತ್ತೇವೆ. ಶಶಿ ತರೀಕೆರೆ ಗೆದ್ದಿದ್ದಾರೆ.
-ಲಲಿತಾ ಸಿದ್ದಬಸವಯ್ಯ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.