Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ದಿನಬೆಳಗಾದರೆ ಪತ್ರಿಕೆಗಳಲ್ಲಿ "ಯಾರೋ ಅಷ್ಟು ಲಕ್ಷ ಕಳೆದುಕೊಂಡರು, ಇಷ್ಟು ಕೋಟಿ ಕಳೆದುಕೊಂಡರು," ಎಂಬ ಸುದ್ದಿ ಓದಿ ನಮಗೆ ಆಶ್ಚರ್ಯವಾಗುತ್ತದೆ. "ಛೇ! ಇದು ಹೇಗೆ ಸಾಧ್ಯ?" ಎಂದು ಹುಬ್ಬೇರಿಸುತ್ತೇವೆ. 'ನಾನಂತೂ ಈ ಬಲೆಯಲ್ಲಿ ಬೀಳಲ್ಲಪ್ಪ' ಎಂದು ಬೆನ್ನು ತಟ್ಟಿಕೊಳ್ಳುತ್ತೇವೆ.
ಆದರೆ ಸ್ವಲ್ಪ ಆಳಕ್ಕಿಳಿದು ನೋಡಿದರೆ ಬೆಚ್ಚಿಬೀಳಿಸುವ ಸತ್ಯವೊಂದು ಎದುರಾಗುತ್ತದೆ. ಇಲ್ಲಿ ವಂಚನೆಗೆ ಒಳಗಾದ ಯಾರೂ ದಡ್ಡರಲ್ಲ; ಇವರಲ್ಲಿ ಅನೇಕರು ಸಾಫ್ಟ್ವೇರ್ ಎಂಜಿನಿಯರ್ಗಳು, ಬ್ಯಾಂಕ್ ಮ್ಯಾನೇಜರ್ಗಳು ಅಥವಾ ನಿವೃತ್ತ ಅಧಿಕಾರಿಗಳು!
ಹೋಗಲಿ, ಆ ಕಡೆ ಫೋನಿನಲ್ಲಿರುವ ವಂಚಕ ಇವರಿಗಿಂತ ಬುದ್ಧಿವಂತನೇ? ಅದೂ ಇಲ್ಲ. ಅವನಿಗೆ ಸರಿಯಾಗಿ ಇಂಗ್ಲಿಷ್ ಮಾತನಾಡಲು ಸಹ ಬರುತ್ತಿರುವುದಿಲ್ಲ. ಆದರೂ ತನಗಿಂತ ಹೆಚ್ಚು ತಿಳಿದವರನ್ನು ಖೆಡ್ಡಾಗೆ ಕೆಡವುತ್ತಾನಲ್ಲ, ಹೇಗೆ?
ಇದಕ್ಕೆ ಉತ್ತರ ನಿಮ್ಮ 'ಬುದ್ಧಿವಂತಿಕೆ'ಯಲ್ಲಿ ಇಲ್ಲ; ಅದು ಆ ಕ್ಷಣದ ನಿಮ್ಮ 'ಮನೋಸ್ಥಿತಿ'ಯಲ್ಲಿದೆ. ವಂಚಕರು ಹ್ಯಾಕ್ ಮಾಡುವುದು ನಿಮ್ಮ ಫೋನನ್ನಲ್ಲ, ನಿಮ್ಮ ಮೆದುಳನ್ನು, ಚೆನ್ನಾಗಿ, ಜವಾಬ್ದಾರಿಯಿಂದ ಡೈವಿಂಗ್ ಮಾಡುವವನೂ ಸಹ ಕೆಲವೊಮ್ಮೆ ಯಾಮಾರಿ ಅಪಘಾತ ಮಾಡಿಕೊಂಡಂತೆ.
ಈ ನಿಟ್ಟಿನಲ್ಲಿ ನೀವು ಸದಾ ಜಾಗೃತರಾಗಿರಲು, ನಿಮ್ಮ ಸುಪ್ತಪ್ರಜ್ಞೆಯನ್ನು ತರಬೇತಿಗೊಳಿಸಲು ಸ್ವಲ್ಪ ವಿಜ್ಞಾನ, ಸ್ವಲ್ಪ ಮನೋವಿಜ್ಞಾನ, ಸ್ವಲ್ಪ ತತ್ವಜ್ಞಾನ, ಸ್ವಲ್ಪ ತಂತ್ರಜ್ಞಾನ, ಅದರೊಂದಿಗೆ ತುಸು ಕಾನೂನಿನ ಅರಿವು-ಹೀಗೆ ಸುರಕ್ಷಿತ ಬದುಕಿಗೆ ಬೇಕಾದ ಎಲ್ಲವನ್ನೂ ಒಳಗೊಂಡ ಒಂದು ಪುಟ್ಟ ಕೈಪಿಡಿ ಈ ಪುಸ್ತಕ.
Be the first to know about new collections and special offers.