Dr. A. O. Avala Murthy
ದೇವರು ವಿಜ್ಞಾನ ಮತ್ತು ವಿಜ್ಞಾನಿಗಳು
ದೇವರು ವಿಜ್ಞಾನ ಮತ್ತು ವಿಜ್ಞಾನಿಗಳು
Publisher - ಅಂಕಿತ ಪುಸ್ತಕ
- Free Shipping Above ₹400
- Cash on Delivery (COD) Available*
Pages -
Type - Paperback
Couldn't load pickup availability
ದೇವರಿಗೆ ಸಾವಿರಾರು ವರ್ಷಗಳ ಪ್ರಾಯ. ವಿಜ್ಞಾನಕ್ಕೆ ಕೇವಲ 300 ವರ್ಷಗಳ ಪ್ರಾಯ. ವಿಜ್ಞಾನ ಸತ್ಯಗಳು ದೇವರ ಬಗೆಗಿನ ಸಾಂಪ್ರದಾಯಿಕ ತಿಳಿವಿನೊಂದಿಗೆ ಸಂಘರ್ಷಕ್ಕೆ ಇಳಿಯುವುದೆಂದರೆ ಎಳೆ ಕೂಸೊಂದು ಕಟ್ಟುಮಸ್ತಾಗಿ ಬೆಳೆದ ಯುವಕನೊಂದಿಗೆ ಸ್ಪರ್ಧೆಗೆ ಇಳಿದಂತೆ. ಹೋರಾಟ ಬಲು ಕಷ್ಟದ್ದು. ಆದರೆ ಮುಂದೊಂದು ದಿನ ಪರಿಸ್ಥಿತಿ ಅದಲುಬದಲಾಗಬಹುದು. ದೇವರಿಗೆ ವಯಸ್ಸಾಗಿ ದುರ್ಬಲವಾಗಬಹುದು; ವಿಜ್ಞಾನ ಬೆಳೆದು ಪ್ರಾಯಕ್ಕೆ ಬಂದು ಬಲಿಷ್ಠವಾಗಬಹುದು. ಆಗ ವಿಜ್ಞಾನಕ್ಕೆ ಸಂಪೂರ್ಣ ಜಯ ಲಭಿಸಬಹುದು. ವಿಜ್ಞಾನ ಸೂರ್ಯ ಜಗತ್ತನ್ನೇ ಬೆಳಗಬಹುದು. ಅದು ಯಾವಾಗ ಆಗಬಹುದು?
***
ನಾವು ಇವತ್ತು ಏನನ್ನು 'ದೇವರು' ಎಂದು ಅರ್ಥ ಮಾಡಿಕೊಂಡಿದ್ದೇವೆಯೋ ಅದರ ಮೂಲ ಪರಿಕಲ್ಪನೆಯು ನಿಖರವಾಗಿ ಯಾವಾಗ ಹೊರಹೊಮ್ಮಿತು ಎಂಬುದನ್ನು ಗುರುತಿಸುವುದು ಕಷ್ಟ ಒಂದು ಅಂದಾಜಿನ ಪ್ರಕಾರ, ದೇವರನ್ನು ಕುರಿತ ಅತ್ಯಂತ ಒರಟಾದ ಮತ್ತು ಅಸ್ಪಷ್ಟ ಪರಿಕಲ್ಪನೆ ಮೊತ್ತಮೊದಲಿಗೆ ಶಿಲಾಯುಗದ ಕೊನೆಕೊನೆಯಲ್ಲಿ, ಅಂದರೆ, ಇಂದಿಗೆ ಸುಮಾರು 40,000 ವರ್ಷಗಳ ಹಿಂದೆ, ಹುಟ್ಟಿಕೊಂಡಿತು ಎಂದು ಗುರುತಿಸಲಾಗಿದೆ.
***
ತಮಗಿಂತ ಶಕ್ತಿಯುತವಾದದ್ದು ಏನೋ ಇದೆ ಎಂಬ ಅವರ ಆರಂಭಿಕ ಭಾವನೆ, ಮುಂದೆ ದೇವತೆಗಳು ಮತ್ತು ದೇವರುಗಳ ಪರಿಕಲ್ಪನೆಯೆಡೆಗೆ ಕೊಂಡೊಯ್ದಿತು ಎಂದು ಹೇಳಲಾಗುತ್ತಿದೆ. ಮುಂದೆ ಇದು ಎಷ್ಟು ಬಲಿಷ್ಠವಾಗಿ ಮತ್ತು ವ್ಯಾಪಕವಾಗಿ ಬೆಳೆಯಿತು ಎಂಬುದನ್ನು ಗಣನೆಗೆ ತೆಗೆದುಕೊಂಡು ಹೇಳುವುದಾದರೆ ಅದೊಂದು ಮನುಷ್ಯನ ಅತ್ಯಂತ ದೊಡ್ಡ ಕ್ರಾಂತಿಕಾರಿ ಆವಿಷ್ಕಾರ ಎನ್ನಬಹುದು. ಅದಕ್ಕಿಂತ ದೊಡ್ಡದಾದ, ಅದರಷ್ಟು ಪ್ರಭಾವಶಾಲಿಯಾದ, ಶಕ್ತಿಶಾಲಿಯಾದ ಬೇರಾವ ಆವಿಷ್ಕಾರವೂ ಈವರೆಗೆ ಆಗಿಲ್ಲ!.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.