Ananta Shandreya, Ragahavendra Mayakonda, and Shashank Sogal
ಡೇರ್ ಡೆವಿಲ್ ಮುಸ್ತಾಫಾ
ಡೇರ್ ಡೆವಿಲ್ ಮುಸ್ತಾಫಾ
Publisher - ಕಾನ್‌ಕೇವ್ ಮೀಡಿಯಾ
- Free Shipping Above ₹350
- Cash on Delivery (COD) Available
Pages - 300
Type - Paperback
Couldn't load pickup availability
ಸಂಪತ್ ಕುಮಾರ
ಕ್ಯಾಪ್ಟನ್ ಆಗ್ಬಿಟ್ರೆ ಕೂತ್ಕೊಳಕ್ಕೂ ನಿಂತ್ಕಳಕ್ಕೂ ನಿನ್ ಪರ್ಮಿಷನ್ ಕೇಳಕ್ಕಾಗತ್ತ? ಸುಮ್ನೆ ಹಿರಿತನ ಎಲ್ಲ ತೋರ್ಸ್ಬೇಡ.. ಲೋ ಮುಸ್ತಾಫ ಬಾಲ್ ಹಾಕೋ.
ದೂರದಲ್ಲಿ ಕೈಯಲ್ಲಿ ಚೆಂಡು ಹಿಡಿದಿರುವ ಮುಸ್ತಾಫಾನಿಗೂ, ಶೀನನಿಗೂ ಇವರ ಈ ಕೋಳಿ ಜಗಳ ಗೊಂದಲ ಹುಟ್ಟಿಸಿದೆ. ಏನು ಮಾಡುವುದೆಂದು ತಿಳಿಯದೇ ಸುಮ್ಮನೆ ನಿಂತಿದ್ದಾರೆ. ಇತ್ತ ಜಗಳ ಮು೦ದುವರೆದಿದೆ.
ರಾಮಾನುಜ ಅಯ್ಯಂಗಾರಿ
(ಕುಮಾರನಿಗೆ) ಏಯ್ ಹೇತ್ಲಾಂಡಿ. ನಿನ್ನನ್ನ ಯಾವನೋ ಕೇಳ್ದೋನು? (ಮುಸ್ತಾಫಾನಿಗೆ) ಏಯ್ ಹಾಕ್ಷೇಡ ಸುಮ್ಮಿರೋ. ಅವನೇನ್ ನಿಮ್ಮ ಮನೆ ಆಳೆನೊ?
ಶಂಕರ ಶೆಟ್ಟಿ
ಹೌದೋ ಮುಸ್ತಾಫಾ ನಾನ್ ಸಂಬಳ ಕೊಟ್ಟು ಇಡ್ಕೊಂಡ್ ಇರೋ ಆಳೆನೇ. ಏನಿವಾಗ? ಏಯ್ ಮುಸ್ತಾಫಾ, ಬಾಲ್ ಎಸಿಯೋ, ಇಲ್ಲ ಅಂದ್ರೆ ತಿಂತೀಯ ನೋಡು ಒದೇನ!
ಪುಲಕೇಶಿ
ಓಹ್..ಮುಸ್ತಾಫಾನ ಮೈ ಮುಟ್ಟೋ ಅಷ್ಟು ದೊಡ್ಡವನಾಗ್ಬಿಟ್ಟ ನೀನು?
ರಾಮಾನುಜ ಅಯ್ಯಂಗಾರಿ
ಈ ಫೀಲ್ಡಿಗೆ ಕ್ಯಾಪ್ಟನ್ ನಾನು. ನಾನ್ ಹೇಳಿದಂಗ್ ಕೇಳು
ಶಂಕರ ಶೆಟ್ಟಿ
ಇದೇನ್ ಏನ್ ನಿಮ್ಮಪ್ಪಂದೇನೋ?
ರಾಮಾನುಜ ಅಯ್ಯಂಗಾರಿ
ಅಪ್ಪನ ಸುದ್ದಿಗ್ ಬಂದ್ರೆ ಚಪ್ಪಲಿ ಏಟು. ಗಿವ್ ರೆಸ್ಪೆಕ್ಟ್ ಅಂಡ್
ಟೇಕ್ ರೆಸ್ಪೆಕ್ಟ್
ಶಂಕರ ಶೆಟ್ಟಿ
ಹೋಗೊ ಹೋಗೋ. ಜಗಳದಲ್ಲಿ ರೆಸ್ಪೆಕ್ಟ್ ಕೊಶ್ಚನ್ನೇ ಬರೋದಿಲ್ಲ.
ಶಂಕರನಿಗೆ ಈಗ ಕೋಪ ತಡೆಯಲಾಗದೇ ಮುಸ್ತಾಫನಿಗೆ ರೇಗುತ್ತಾ ಅವನ ಬಳಿ ಓಡಿ ಹೋಗ್ತಾನೆ. ಉಳಿದವರೂ ಅವನನ್ನ ಹಿಂಬಾಲಿಸುತ್ತಾರೆ.
Share


Subscribe to our emails
Subscribe to our mailing list for insider news, product launches, and more.