Skip to product information
1 of 1

Chethana Tirthahalli

ಕಾಕ್‌ಟೇಲ್

ಕಾಕ್‌ಟೇಲ್

Publisher - ಸಾವಣ್ಣ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಇಲ್ಲಿ ಪ್ರೇಮವಿದೆ, ಅಧ್ಯಾತ್ಮವಿದೆ, ಪರಿಚಯ ಕಥನಗಳಿವೆ. ಶ್ಲೋಕಗಳಿವೆ, ದೋಹೆಗಳಿವೆ, ಪದ್ಯಗಳೂ ಇವೆ. ಬುದ್ಧ ಇದ್ದಾನೆ, ಸೂಫಿಗಳಿದ್ದಾರೆ, ಝನ್ ಇದೆ, ವೇದಗಳ ಉಲ್ಲೇಖವಂತೂ ಇದ್ದೇ ಇವೆ. ಇದರ ಉದ್ದೇಶ ಇಷ್ಟೇ, ಯಾರಿಗೆ ಏನು ಬೇಕೋ ಅದನ್ನು ಓದಬಹುದು. ಮತ್ತು ಈ ಪುಸ್ತಕದಲ್ಲಿ ಅವೆಲ್ಲದರ ಒಂದೊಂದು ಚಮಚೆ ರುಚಿ ನೋಡಿ ವಿಶಾಲ ಅಕ್ಷರ ಜಗತ್ತಿನಲ್ಲಿ ಹೆಚ್ಚಿನ ಓದಿಗೆ ಕೈಹಚ್ಚಬಹುದು. ಇಲ್ಲಿ ಏನನ್ನಾದರೂ ಓದಿ ''ಅರೆ, ಇದನ್ನು ಮತ್ತಷ್ಟು ತಿಳಿಯಬೇಕಲ್ಲ'' ಅನ್ನುತ್ತ ನೀವು ಹುಡುಕಾಟ ಹೊರಟರೆ ಈ ಪುಸ್ತಕ ಸಾರ್ಥಕ.

ಎಲ್ಲ ಯಾಕೆ ಗುಡ್ಡೆ ಹಾಕಿ ಚಿತ್ರಾನ್ನ ಮಾಡಿದ್ದಾರೆ, ಒಂದೋ ಕಥೆಗಳು, ಒಂದೋ ಲೇಖನಗಳು ಹೀಗೆ ಮಾಡಬಹುದಿತ್ತಲ್ಲ ಅಂತ ಯಾರಾದರೂ ಕೇಳಬಹುದು. ಕಾರಣ ಇಷ್ಟೇ, 'ಲೋಕೋ ಭಿನ್ನ ರುರ್ಚಿ'. ಎಲ್ಲರ ಓದಿನ ರುಚಿ ಮತ್ತು ಆಸಕ್ತಿಯೂ ಒಂದೇ ಥರ ಇರುವುದಿಲ್ಲ. ಒಂದೇ ವಿಷಯವನ್ನು ಕಥೆಯ ರೂಪದಲ್ಲೂ ಹೇಳಬಹುದು, ಪ್ರಬಂಧವಾಗಿಯೂ, ಲೇಖನವಾಗಿಯೂ. ಈ ಪುಸ್ತಕದ ಒಟ್ಟಾರೆ ಆಶಯ ಒಂದೇ, ಅದನ್ನು ಹೇಳಲು ಬಳಸಿದ ಬಗೆ ಬೇರೆ ಬೇರೆ ಅಷ್ಟೇ. ಆದ್ದರಿಂದಲೇ ಇದು ಹಲವು ಮಿಶ್ರಣಗಳ  ಕಾಕ್‌ಟೇಲ್


View full details