N. S. Chidambararao
ಬೆಂಕಿಯ ನೆರಳು
ಬೆಂಕಿಯ ನೆರಳು
Publisher -
- Free Shipping Above ₹400
- Cash on Delivery (COD) Available*
Pages - 136
Type - Paperback
Couldn't load pickup availability
ಪ್ರಸ್ತುತ ಕಾಲಘಟ್ಟದಲ್ಲಿ ಕೂಡ ಇಂತಹ ವಸ್ತುವನ್ನಿಟ್ಟುಕೊಂಡು ಕಾದಂಬರಿ ಬರೆಯುವುದು ಕಷ್ಟಸಾಧ್ಯವೇ.
ಗಂಡು ಹೆಣ್ಣು ಮದುವೆಯಾಗದೆ ಜೊತೆಗೆ ಬಾಳುವುದು ಸಾಮಾನ್ಯ ಎನಿಸಿಕೊಂಡ ದಿನಗಳಲ್ಲಿ ಕೂಡ ಅವರ ಮನೋವ್ಯಾಪಾರಗಳ ಬಗ್ಗೆ ಬರೆಯುವುದು ಕಷ್ಟವೇ. ದಶಕಗಳ ಹಿಂದೆ ಇಂತಹ ವಿಷಯ ಆರಿಸಿಕೊಂಡು ಬರೆದದ್ದು ಸಾಹಸವೇ ಸರಿ. ಲಿವ್ ಇನ್ ಇರುವ ಇನ್ನೊಂದು ಕಾದಂಬರಿ ನೆನಪಾಗುವುದು ಭೈರಪ್ಪರ 'ನೆಲೆ'.
ಇದರಲ್ಲಿ ಗಂಡು ಹೆಣ್ಣು ಇವರೀರ್ವರ ತುಡಿತ ಹಾಗೂ ಆಲೋಚನಾ ಧಾಟಿಯ ವಿವರಣೆ ಓದುವಾಗ ತಟ್ಟನೆ ನೆನಪಿಗೆ ಬರುವುದು ದಾಸ್ತೋವಸ್ಕಿ. ಅವನ ಕಾದಂಬರಿಗಳಲ್ಲಿ ಸಾಮಾನ್ಯವಾಗಿ ಕಾಣುವ ಮನಸಿನ ಆಳದ ಭಾವನೆಗಳ ವಿವರಣೆ ಇದರಲ್ಲೂ ಕಾಣಬಹುದು.
ಕಾದಂಬರಿ ಓದುವಾಗ ಅತೃಪ್ತಿ ಅನಿಸಿದ ಅಂಶ..ಕಥಾನಾಯಕಿ ಇಷ್ಟು ವಿಷಯವಾಸನೆಗೆ ಪಕ್ಕಾದವಳೇ. ಇದರಿಂದ ಅವಳ ನೈತಿಕ ನೆಲೆಗಟ್ಟು ಅಲುಗಾಡುತ್ತದೆ. ಅವಳನ್ನು ದಿಟ್ಟ ಹೆಣ್ಣು ಎಂಬ ನೋಟದಿಂದ ನೋಡುವ ಬದಲು ಬೇರೆಯ ನೋಟ ಕಾಣತೊಡಗುತ್ತದೆ.
ಕನ್ನಡದಲ್ಲಿ ಆ ಕಾಲದಲ್ಲೇ ಈ ಪ್ರಯೋಗ ನಡೆದಿತ್ತು ಎನ್ನುವುದು ಅಚ್ಚರಿಯ ಸಂಗತಿ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.