Koundinya
ಬೆಳವಡಿ ಮಲ್ಲಮ್ಮ
ಬೆಳವಡಿ ಮಲ್ಲಮ್ಮ
Publisher - ವೀರಲೋಕ ಬುಕ್ಸ್
- Free Shipping Above ₹250
- Cash on Delivery (COD) Available
Pages - 168
Type - Paperback
ಭಾರತ ಮಾತ್ರವಲ್ಲ, ಇಡೀ ವಿಶ್ವದಲ್ಲೇ ಯಾರೂ ಮಾಡಿರದ, ವಿಶೇಷವಾದ ಸಾಧನೆಯನ್ನು, ಹಠ ಮತ್ತು ನಿರಂತರ ಪ್ರಯತ್ನ, ಪರಿಶ್ರಮದಿಂದ ಸಾಧಿಸಿ, ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿ ಮಾಡಿದವಳು, ಈ ನಾಡಿನ ಹೆಮ್ಮೆಯ ವೀರವನಿತೆ ಬೆಳವಡಿ ಮಲ್ಲಮ್ಮ. ಆ ಕಾಲದಲ್ಲಿ ಮೂರು ಸಾವಿರ ಮಹಿಳೆಯರಿಗೆ ಯುದ್ಧದ ತರಬೇತಿ ನೀಡಿ, ಮಹಿಳಾ ಸೈನ್ಯವನ್ನು ಸಂಘಟಿಸಿ, ಬಲು ಅಪರೂಪ ಎನ್ನಬಹುದಾದ ಮತ್ತು ಅಸಾಧ್ಯ ಎನ್ನುವಂತ ಸಾಹಸವನ್ನು ಬೇರೆ ಯಾರೂ ಮಾಡಿರಲಿಲ್ಲ. ಸಕಲ ಕ್ಷತ್ರಿಯ ವಿದ್ಯೆಯನ್ನು ಕಲಿತು, ಖಡ್ಗ ಹಿಡಿದು, ಕುದುರೆ ಸವಾರಿ ಮಾಡುತ್ತಾ ರಣಾಂಗಣದಲ್ಲಿ ಶತ್ರುಗಳ ರುಂಡಗಳನ್ನು ಚೆಂಡಾಡುತ್ತಿದ್ದಳು ರಣಚಂಡಿಯಂತೆ! ಈ ವೀರರಾಣಿಗೆ ಸಮಸ್ಯೆ ಎದುರಾಗಿದ್ದು ಮರಾಠರ ಸೈನ್ಯದಿಂದ. ಆ ಸಮಸ್ಯೆ ಏನು? ಶಿವಾಜಿ ಮಹಾರಾಜರ೦ತ ಪ್ರಚ೦ಡ ಪರಾಕ್ರಮಿ ಯುದ್ಧಭೂಮಿಯಲ್ಲಿ ಮುಖಾ-ಮುಖಿಯಾದಾಗ ಏನಾಯಿತು? ಸೋತವರು ಯಾರು? ಕರುನಾಡ ಸಿಡಿಲು ಮಲ್ಲಮ್ಮನೇ? ಅಥವಾ ವೀರಕ್ಷತ್ರಿಯ ಶಿವಾಜಿ ಮಹಾರಾಜರೇ? ಈ ಕುತೂಹಲಕಾರಿ ಸನ್ನಿವೇಶಗಳಿಗೆ ಉತ್ತರ ಈ ಕೃತಿಯಲ್ಲಿದೆ..
-ಕೌಂಡಿನ್ಯ
Share
Subscribe to our emails
Subscribe to our mailing list for insider news, product launches, and more.