Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
"ವಿಜಯಕ್ಕೆ ಐದು ಮೆಟ್ಟಿಲಿನಿಂದ', 'ಹರೆಯದ ಮಕ್ಕಳನ್ನು ಬೆಳೆಸುವುದು ಒಂದು ಕಲೆಯ'ವರೆಗೆ ನನ್ನ ವ್ಯಕ್ತಿತ್ರ ವಿಕಾಸ ಕೃತಿಗಳಲ್ಲಿ ವಿಷಯ ಚರ್ಚೆಯೊಂದಿಗೆ ನನ್ನ ಅನುಭವಗಳನ್ನೂ ಕಥೆಗಳನ್ನೂ ಬರೆಯುತ್ತ ಬಂದಿದ್ದೇನೆ. ಉಳಿದ ಲೇಖಕರ ಬರಹಗಳಿಗೂ, ನನ್ನ ಬರಹಗಳಿಗೂ ವ್ಯತ್ಯಾಸವೇ ಇದು ಎಂದುಕೊಂಡಿದ್ದೇನೆ.
ದುರದೃಷ್ಟವಶಾತ್, ಇಂತಹ ಪರ್ಸನಾಲಿಟಿ ಡೆವಲಪ್ ಮೆಂಟ್ ಪುಸ್ತಕಗಳನ್ನು ಮಕ್ಕಳು ಓದುವುದಿಲ್ಲ. ಆದರೆ, ಈ ಪುಸ್ತಕಗಳಲ್ಲಿನ ಕೆಲವು ಕತೆಗಳು ಮಕ್ಕಳಿಗೆ ಉತ್ಸಾಹವನ್ನು, ಉತ್ತೇಜನವನ್ನು ನೀಡುತ್ತವೆ. ಅಂತಹ ಎಲ್ಲ ಕತೆಗಳನ್ನೂ ಕ್ರೋಢೀಕರಿಸಿ ಒಂದು ಕಡೆ ಸೇರಿಸಿದರೆ, ಅವನ್ನು ಮಕ್ಕಳು ಓದಿಕೊಳ್ಳುವ ಅವಕಾಶ ಇರುವುದೆಂಬ ಆಲೋಚನೆಯೇ ಈ ಪುಸ್ತಕ.
ವ್ಯಕ್ತಿತ್ವ ವಿಕಾಸ ಕುರಿತಾದ ನನ್ನ ಪುಸ್ತಕಗಳಿಂದ ಆಯ್ದು ಪೋಣಿಸಿದ ಕತೆಗಳ ಮಾಲೆ ಇದು. ಇದರಲ್ಲಿ ಕೆಲವು ವಿದೇಶಗಳ ಪುರಾತನ ಗಾಥೆಗಳು. ಮತ್ತೆ ಕೆಲವು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳಿಂದ, ಇನ್ನೂ ಕೆಲವು ಅಂತರ್ಜಾಲದಿಂದ ಸ್ವೀಕರಿಸಿದಂಥವು. ಹೆಚ್ಚಿನ ಕತೆಗಳು ನನ್ನವೇ.
ಮಲಗುವಾಗ ಮಕ್ಕಳಿಗೆ ಕತೆ ಹೇಳುವ ವಾಡಿಕೆ ಹಿರಿಯರಲ್ಲಿ ಕಡಿಮೆಯಾಗಿದೆ.
'ನಮಗೆ ಗೊತ್ತಿದ್ದರೆ ತಾನೇ ಮಕ್ಕಳಿಗೆ ಹೇಳುವುದು' ಎನ್ನುತ್ತಾರೆ ಕೆಲವರು. ಈ ಕೃತಿಯು ಆ ಕೊರತೆಯನ್ನು ತುಂಬುವುದೆಂಬ ಸಣ್ಣ ಆಸೆಯೇ ಈ 'ಬೆಳಕು ಬೆಳದಿಂಗಳ ದೀಪಗಳು'.
-ಯಂಡಮೂರಿ ವೀರೇಂದ್ರನಾಥ್
Be the first to know about new collections and special offers.