Yandamoori Veerendranath | Kannada: Yatiraj Veerambudhi
ಅಷ್ಟಾವಕ್ರ
ಅಷ್ಟಾವಕ್ರ
Publisher - Sahithya Prakashana
- Free Shipping Above ₹400
- Cash on Delivery (COD) Available*
Pages - 280
Type - Paperback
Couldn't load pickup availability
ದಟ್ಟವಾಗಿ ಪೇರಿಕೊಂಡಿದ್ದ ಒಣಗಿದ ಎಲೆಗಳ ಕೆಳಗೆ ನಿಶ್ಯಬ್ದವನ್ನು ಸೀಳುತ್ತಾ ಯಾರೋ ನಿದ್ರೆಯಿಂದೆದ್ದು ಸೋಮಾರಿತನದಿಂದ ನಿಟ್ಟುಸಿರಿಟ್ಟ ವೇಳೆ! ಆನಂದನೃತ್ಯದ ಆಟ!! ಕತ್ತಲ ಪ್ರಪಂಚದ ಗಣಾಧಿಪತಿಗಳ ಕಾಮ್ಮೋರಾ ಅಂಶದೊಂದಿಗೆ ಪ್ರಪಂಚವನ್ನು ಆಳಲು ಬರುತ್ತಿದ್ದಾನೆ 'ಅಷ್ಟಾವಕ್ರ', ಅವನ ಆಗಮನಕ್ಕೆ ಸೂಚನೆಯಾಗಿ ಆಗಲೇ ಏಳು ವಿಕೃತ ಶಿಶುಗಳು ಆ ಗ್ರಾಮದಲ್ಲಿ ಜನಿಸಿದವು. ದೇಶದ ದೃಷ್ಟಿಯೆಲ್ಲಾ ಆ ಗ್ರಾಮದ ಮೇಲೆ ಬಿದ್ದಿತು.
ಎಂಟನೆಯವನು ಕೇದಾರಗೌರಿಯ ಗರ್ಭವನ್ನು ಪ್ರವೇಶಿಸಿದ. ಅವನ ಹುಟ್ಟನ್ನು ಯಾರು ತಡೆಯಬಲ್ಲರು? ಯಕ್ಷಿಣಿಗಾರ ಪಾಡೋ... ಡಾಕ್ಟರ್ ರಂಗಪ್ರಸಾದ್... ಸ್ವಾಮಿ ಶಿವಾನಂದ...
.. But ended up in terror.
ಕೆಲವು ಸಾವಿರ ವರ್ಷಗಳ ಹಿಂದೆ ಶಿಶುವು ಜನಿಸಿದೊಡನೆ ಶರೀರಕ್ಕೆಲ್ಲಾ ಉಪ್ಪು ಚೆಲ್ಲಿ ಬ್ಯಾಂಡೇಜ್ನಿಂದ ಕಟ್ಟಿಬಿಡುತ್ತಿದ್ದರಂತೆ.
ಇಂತಹ ಅನಾಗರಿಕವಾದ ಸ್ಥಿತಿಯಿಂದ ಮನುಷ್ಯ ಅಭಿವೃದ್ಧಿ ಹೊಂದಿದ. ಮ್ಯುಟೇಷನ್ಸ್ ರಹಸ್ಯವನ್ನು ಶೋಧಿಸಿದ. ಕ್ಲೋನಿಂಗ್ ಪ್ರಯೋಗದಲ್ಲಿ ಯಶಸ್ಸು ಸಾಧಿಸಿದ. ಆದರೆ ಇದೆಲ್ಲವೂ ಹೋಗಿ ಎಲ್ಲಿ ಸೇರುತ್ತದೆ?
ಸಾಮಾನ್ಯರು ಕನಸಿನಲ್ಲಿ ಕೂಡ ಊಹಿಸದ ಸ್ಥಳಕ್ಕೆ ಲೇಖಕ ನಿಮ್ಮನ್ನು ಕರೆದೊಯ್ಯುತ್ತಾರೆ.
ಜೆನೆಟಿಕ್ಸ್ ವಿಜ್ಞಾನದ ಪರಿಜ್ಞಾನವನ್ನು ಬೆಳೆಸಿಕೊಳ್ಳುವುದಕ್ಕಾಗಿ ಈ ಕಾದಂಬರಿ... ಮನುಷ್ಯನ 'ಜನನ'ದಲ್ಲಿ ಆಗುತ್ತಿರುವ ಪರಿಣಾಮಗಳ ಭೂತ, ಭವಿಷ್ಯತ್, ವರ್ತಮಾನಗಳ ಸೈನ್ಸ್-ಸಸ್ಪೆನ್ಸ್ಗಳ ಮತ್ತೊಂದು ವಿಶಿಷ್ಟ ಮಾಲೆ ಈ ಕಾದಂಬರಿ...
Share

Subscribe to our emails
Subscribe to our mailing list for insider news, product launches, and more.