Skip to product information
1 of 2

Kamnaadiga Narayana

ಅಸೀಮರೂಪಿ

ಅಸೀಮರೂಪಿ

Publisher - ಸಪ್ನ ಬುಕ್ ಹೌಸ್

Regular price Rs. 110.00
Regular price Rs. 110.00 Sale price Rs. 110.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 118

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

'ಅಸೀಮರೂಪಿ' ಎಂಬುದು ಈ ಕಥಾಸಂಕಲನದಲ್ಲಿನ ಕಥೆಯೊಂದರ ಹೆಸರಾದರೂ ಅದು ಈ ಸಂಕಲನದ ಅತ್ಯಂತ ಮಹತ್ವಾಕಾಂಕ್ಷೆಯ ಕಥೆಯೆಂದೇನೂ ಭಾವಿಸಬೇಕಾಗಿಲ್ಲ; ಆ ಕಾರಣಕ್ಕಾಗಿ ಈ ಹೆಸರನ್ನೇನೂ ಇಟ್ಟಿಲ್ಲ. ಕೆಲವರು ಶೀರ್ಷಿಕೆಯ ಕಥೆಯೊಂದನ್ನೇ ಓದಿ ಇಡೀ ಸಂಕಲನದ ಮೌಲ್ಯವನ್ನು ಅಳೆದುಬಿಡುವ ಅಪಾಯವಿರುವುದರಿಂದ ಈ ಮಾತನ್ನು ಮೊದಲೇ ಹೇಳುತ್ತಿದ್ದೇನೆ. ಹಾಗೆ ನೋಡಿದರೆ, ಉಳಿದೆಲ್ಲಾ ಕಥೆಗಳು ಇದಕ್ಕಿಂತಲೂ ಉತ್ತಮ ಕಥೆಗಳೆಂಬುದೇ ನನ್ನ ನಂಬಿಕೆ. ಏಕೆಂದರೆ, ಹಿಂದಿನ ಸಂಕಲನ ಮಾಡುವಾಗ ಈ ಕಥೆಯನ್ನು ಸಂಕಲನದಿಂದಲೇ ಕೈಬಿಟ್ಟಿದ್ದೆ. 'ಇಹದ ಪರಿಮಳ'ವೆಂಬ ಆ ಕಥಾಸಂಕಲನದ ಎಲ್ಲಾ ಕಥೆಗಳಲ್ಲೂ ಒಂದಲ್ಲಾ ಒಂದು ಪರಿಮಳವನ್ನು ಬೀರುವ ಕಥೆಗಳನ್ನೇ ಕಾಣಬಹುದಾಗಿತ್ತು. ಅಂತೆಯೇ ಅದರ ಹಿಂದಿನ ಸಂಕಲನ 'ತಲ್ಲಣದ ಆ ಕ್ಷಣ'ದಲ್ಲಿನ ಎಲ್ಲಾ ಕಥೆಗಳಲ್ಲೂ ಒಂದಲ್ಲಾ ಒಂದು ರೀತಿಯ ತಲ್ಲಣ, ತಳಮಳಗಳು ಇದ್ದವು. ಅದೇ ರೀತಿ ಈ ಸಂಕಲನದ ಒಂದೊಂದು ಕಥೆಗಳೂ ಒಂದೊಂದು ಭಿನ್ನ ಕಥಾವಸ್ತುವನ್ನು ಹೊಂದಿದ್ದರೂ, ಎಲ್ಲ ಕಥೆಗಳಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ 'ಅಸೀಮರೂಪಿ'ಯಾದ ಸಾವಿನ ಅಪರಂಪಾರ ವಿರಾಟ್‌ ಸ್ವರೂಪವೇ ಹಾಗೂ ಅದರ ಮಧ್ಯೆಯೂ ಸ್ಫುರಿಸುವ ಬದುಕಿನ ಜೀವನೋತ್ಸಾಹವೇ ಮೈದಳೆದಿರುವ ಕಾರಣಕ್ಕೆ ಈ ಹೆಸರನ್ನು ಆರಿಸಿಕೊಂಡಿದ್ದೇನೆ.

-ಕಂನಾಡಿಗಾ ನಾರಾಯಣ

View full details

Talk about your brand

Share information about your brand with your customers. Describe a product, make announcements, or welcome customers to your store.