M. S. Sriram
ಅರ್ಥಾರ್ಥ
ಅರ್ಥಾರ್ಥ
Publisher - ಅಕ್ಷರ ಪ್ರಕಾಶನ
- Free Shipping Above ₹250
- Cash on Delivery (COD) Available
Pages -
Type -
ಸಾಹಿತ್ಯದ ಪ್ರಶ್ನೆಯಲ್ಲಿ ಒಬ್ಬ ಲೇಖಕ ಆರ್ಥಿಕ ವಿದ್ಯಮಾನಗಳನ್ನು ಕುರಿತು ಬರೆದರೆ ಎರಡು ಬಗೆಯ 'ಅರ್ಥ'ಗಳು ಒಟ್ಟಗೇ ಹುಟ್ಟುವುದು ಸಾಧ್ಯ - ಮೀನಿಂಗ್ ಎಂಬ ಅರ್ಥದ ಅರ್ಥ ಮತ್ತು ಫೈನಾನ್ಸ್ ಎಂಬ ಅರ್ಥದ ಅರ್ಥ, ಎಂ.ಎಸ್. ಶ್ರೀರಾಮ್ ಅವರು ಈ ಪುಸ್ತಕವನ್ನು ಅರ್ಥಾರ್ಥ ಎಂದು ಕರೆದಿರುವುದು ಇಂಥ ದ್ವಂದ್ಧೋದ್ದಿಶ್ಯದಿಂದ ಇರಬಹುದೆ? ಅವರ ಉದ್ದಿಶ್ಯ ಏನೇ ಇದ್ದಿರಲಿ, ಇಂಥ ಎರಡು ಅರ್ಥಗಳ ಕಸಿಯ ಪ್ರಯೋಗವು – ಈ ಬರಹಗಳ ಮೂಲಕ ಆಗಲಿಕ್ಕೆ ಆರಂಭವಾಗಿದೆ ಎನ್ನುವುದೇ ಈ ಪುಸ್ತಕದ ಪ್ರಮುಖ ಸಾಧನೆ. ಅರ್ಥಶಾಸ್ತ್ರವನ್ನು ಬೇಸರ ಹುಟ್ಟಸುವ ಅಂಕಿಅಂಶಗಳ ಕಂತೆಯಾಗಿಯೂ ಕಥನಕಲೆಯನ್ನು ಕೇವಲ ಭಾವೋದ್ದೀಪನೆಯ ಸಾಧನವಾಗಿಯೂ ಬಳಸಲು ಕಲಿತಿರುವ ಈ ಕಾಲಕ್ಕೆ ಇಂಥದೊಂದು ಅರ್ಥಮಿಶ್ರಣ ಖಂಡಿತವಾಗಿಯೂ ಬೇಕಿತ್ತು. ಇಂಥ ಪ್ರಯೋಗದ ಮುಂದಿನ ಹೆಜ್ಜೆಗಳಾಗಿ ಹುಟ್ಟಬಹುದಾದ ಕಥನಮಿಶ್ರಿತ ಅರ್ಥಶಾಸ್ತ್ರಜಿಜ್ಜಾಸೆಯೂ ಅರ್ಥಶಾಸ್ತ್ರದ ಜ್ಞಾನಯುಕ್ತವಾದ ಕಥನವೂ ಕನ್ನಡದಲ್ಲಿ ಹೊಸ ಬಾಗಿಲುಗಳನ್ನು ತೆರೆಸಬಲ್ಲ ಶಕ್ತಿ ಪಡೆದಿವೆ.
-ಅಕ್ಷರ. ಕೆ. ವಿ.
Share
Subscribe to our emails
Subscribe to our mailing list for insider news, product launches, and more.