Skip to product information
1 of 1

ಡಾ. ಲಕ್ಷ್ಮೀಶ್ ಸೋಂದಾ

ಅನುರಾಯ ಶಾಲ್ಮಲೆ

ಅನುರಾಯ ಶಾಲ್ಮಲೆ

Publisher:

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.
ಲಕ್ಷ್ಮೀ‌ ಹೆಗಡೆ ಸೋಂದಾ, ಇತಿಹಾಸಕಾರರಾಗಿ, ವಾಗ್ಮಿಗಳಾಗಿ ನಾಡಿನ ಚಿರಪರಿಚಿತ ಹೆಸರು. ಕಳೆದ 15 ವರ್ಷಗಳಿಂದ ಇತಿಹಾಸ ಸಂಶೋಧನೆಯಲ್ಲಿ ಸಕ್ರಿಯರಾಗಿ ಹಲವಾರು ಶಾಸನಗಳು, ವೀರಗಲ್ಲುಗಳು, ಐತಿಹಾಸಿಕ ಕುರುಹುಗಳನ್ನು ಸಂಶೋಧಿಸಿ ಅವುಗಳನ್ನ ಅಭ್ಯಸಿಸಿ ಸಮಾಜಕ್ಕೆ ಪರಿಚಯಿಸಿರುತ್ತಾರೆ. ಇದುವರೆಗೂ 14 ಕೃತಿಗಳು, 400ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಸಂಶೋಧನೆಗಾಗಿ 2013ರಲ್ಲಿ ಬಸವರಾಜ ಕಟ್ಟಿಮನಿ ರಾಜ್ಯ ಪ್ರಶಸ್ತಿ ಮತ್ತು 2016ರಲ್ಲಿ ಕದಂಬ ಸೇವಾರತ್ನ ರಾಜ್ಯ ಪ್ರಶಸ್ತಿ, 2022ರಲ್ಲಿ ರವಿದಾತಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿ ವರ್ಷ ಇವರ ಸಂಚಾಲಕತ್ವದಲ್ಲಿ ನಡೆಯುವ ಸೋಂದಾ ಇತಿಹಾಸೋತ್ಸವ ನಾಡಿನಲ್ಲಿ ಪ್ರಸಿದ್ಧಿ ಪಡೆದಿದೆ. ಯುವ ಜನತೆಯಲ್ಲಿ ಸ್ಥಳೀಯ ಇತಿಹಾಸದ ಕುರಿತು ಆಸಕ್ತಿ ಮೂಡಿಸಲು ಕಳೆದ 6 ವರ್ಷಗಳಿಂದ ಇವರು ನಡೆಸಿಕೊಂಡು ಬರುತ್ತಿರುವ ಉತ್ತರ ಕನ್ನಡ ಜಿಲ್ಲಾ ಚರಿತ್ರಾ ಅಭಿಯಾನ' ಆದರ್ಶ ಸಮಾಜದ ಸ್ಥಾಪನೆಗೊಂದು ಮಾದರಿ ಯೋಜನೆಯಾಗಿದೆ.

"ಅನುರಾಯ ಶಾಲ್ಮಲೆ" ಎಂಬ ಈ ಐತಿಹಾಸಿಕ ಕಾದಂಬರಿಯ ಮೂಲವಸ್ತು ಸದಾಶಿವರಾಯ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋದೆ ಎಂಬ ಪ್ರದೇಶವನ್ನು ಕ್ರಿಶ 1678ರಿಂದ 1718ರ ವರೆಗೆ ಆಳ್ವಿಕೆ ಮಾಡಿದ ಪರಾಕ್ರಮಿ, ಸಾಹಿತಿ, ಸಂಗೀತ ತಜ್ಞ ಅರಸ. ಈತನ ಶ್ರೇಷ್ಠ ಸಾಧನೆಯೆಂದರೆ ಕ್ರಿಶ 1680ರಲ್ಲೇ ಭಾರತದಲ್ಲಿ ಮೊದಲ ಬಾರಿಗೆ ಬ್ರಿಟಿಷರನ್ನು ಸೋಲಿಸಿದ ಮಹೋನ್ನತ ಶ್ರೇಯ. ಈತನನ್ನೆ ಕಥಾವಸ್ತುವನ್ನಾಗಿಸಿಕೊಂಡು
ಕೃತಿಕಾರರು ಈ ಕಾದಂಬರಿಯನ್ನು ರಚಿಸಿದ್ದಾರೆ.

ಈ ಐತಿಹಾಸಿಕ ಕಿರು ಕಾದಂಬರಿಯನ್ನು ಓದುಗರು ಸ್ವಾಗತಿಸುವರೆಂದು ನಂಬಿದ್ದೇನೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)