Keshava Reddy Handrala
ಅಣು - ಕಾದಂಬರಿ
ಅಣು - ಕಾದಂಬರಿ
Publisher - ಅಂಕಿತ ಪುಸ್ತಕ
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ಮುಂಬಯಿಯ ಧಾರಾವಿ ಕೊಳಗೇರಿ ಮತ್ತು ಸೆಕ್ಸ್ ದಂಧೆಯ ಕೇಂದ್ರವಾದ ಕಾಮಾಟಿಪುರವನ್ನು ಕೇಂದ್ರವನ್ನಾಗಿಟ್ಟುಕೊಂಡು ರಚಿಸಿರುವ ಈ ಕಾದಂಬರಿಯಲ್ಲಿ ಕೇಶವರೆಡ್ಡಿ ಹಂದ್ರಾಳರು ಇಲ್ಲಿ ವಾಸಿಸುವ ಜನರ ಬದುಕನ್ನು ಎದೆ ಝಲ್ಲೆನ್ನುವಷ್ಟರ ಮಟ್ಟಿಗೆ ತೆರೆದಿಟ್ಟಿದ್ದಾರೆ. ಚರಂಡಿಗಳಲ್ಲಿ ಖುಷಿಯಾಗಿ ಪಿಸುಗುಡುವ ಹುಳುಗಳಂತೆ ಇಲ್ಲಿನ ಮಾನವ ಜೀವಿಗಳು ಅತ್ಯಂತ ಸಂಕಷ್ಟಗಳಲ್ಲೂ ಸಂಭ್ರಮದಿಂದ ಬದುಕುವ ಪರಿಯನ್ನು ಕೇಶವರೆಡ್ಡಿ ಹಂದ್ರಾಳರು ಅನಾವರಣಗೊಳಿಸಿರುವ ಪರಿ ಬಲು ವಿಶಿಷ್ಟವಾಗಿದೆ.
ಹಸಿವು ಮತ್ತು ಕಾಮಗಳೇ ಇಡೀ ಜೀವಸಂಕುಲದ ಅನಿವಾರ್ಯ ಮಹತ್ವದ ಸಂಗತಿಗಳೆಂಬುದನ್ನು ಕಾದಂಬರಿಕಾರರು ಬೆರಗಾಗುವಂತೆ ವಿಶ್ಲೇಷಿಸುತ್ತಾ, ವಾಸ್ತವದ ನೆಲೆಗಟ್ಟಿನಲ್ಲಿ ಹೇಗೆ ಹಸಿವು ಮತ್ತು ಕಾಮಗಳು ನೈತಿಕತೆಯ ಸುತ್ತಲೂ ಮನುಷ್ಯ ಹಾಕಿಕೊಂಡಿರುವ ಪರಿಮಿತಿಗಳನ್ನು ಯಾವ ಮುಲಾಜೂ ಇಲ್ಲದೆ ಕೆಡವಿ ಬಿಡುತ್ತವೆಂಬ ಸತ್ಯವನ್ನು ಮಾರ್ಮಿಕವಾಗಿ ಮತ್ತು ದೃಢವಾಗಿ ಪ್ರತಿಪಾದಿಸುವ ರೀತಿಯಂತೂ ಅನನ್ಯತೆಯನ್ನು ಪಡೆದುಕೊಂಡಿದೆ. ಜೀವಜಗತ್ತಿನಲ್ಲಿ ಸೃಷ್ಟಿಯಾಗಿ ಕಡೆಗೆ ಅವನತಿ ಕಾಣುವ ಮಾನವನಿಂದ ಹಿಡಿದು ಪ್ರತಿಯೊಂದು ಜೀವಿಯೂ ಖಂಡಿತವಾಗಿಯೂ ಪರಾವಲಂಬಿ ಎಂಬುದನ್ನು ಹಂದ್ರಾಳರು ಈ ಕಾದಂಬರಿಯಲ್ಲಿ ಅತ್ಯಂತ ತಾಳ್ಮೆಯಿಂದ ತಣ್ಣಗೆ ತೆರೆದಿಡುವ ಪರಿ ಬರವಣಿಗೆಗೇ ಒಂದು ಹೊಸ ಆಯಾಮವನ್ನು ಸೃಷ್ಟಿಸಿದಂತಿದೆ.
- ಡಾಕ್ಟರ್ ಚಂದ್ರಮ
ಪ್ರಕಾಶಕರು - ಅಂಕಿತ ಪುಸ್ತಕ
Share

Subscribe to our emails
Subscribe to our mailing list for insider news, product launches, and more.