Skip to product information
1 of 2

Usharavi

ಅಂತರಪಟ

ಅಂತರಪಟ

Publisher -

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 244

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಅಂತರಪಟ ನನ್ನ ಮೊದಲ ಕಾದಂಬರಿಯಾಗಿದ್ದರೂ, ಓದುಗ ಬಳಗದಲ್ಲಿ ಹೊಸ ಸಂಚಲನ ಮೂಡಿಸಿದ್ದು ಅಚ್ಚರಿಯ ಸಂಗತಿ. ಈ ಕೃತಿ ಬಹಳಷ್ಟು ಹೊಸ ಓದುಗರನ್ನು ಹುಟ್ಟಿ ಹಾಕಿದೆ. ಓದುಗ ಸಹೃದಯಿಗಳು ಮುಕ್ತ ಮನಸ್ಸಿನಿಂದ ಒಪ್ಪಿ ಅಪ್ಪಿದರ ಸಾಕ್ಷಿಯೇ ಈ ಕೃತಿ ಒಂದು ವರ್ಷದ ಅಂತರದಲ್ಲಿ ಮರಮುದ್ರಣಕ್ಕೆ ಸಿದ್ಧವಾಗಿರುವುದು.

ಸ್ವತಃ ನಾನು ನಿರೀಕ್ಷೆ ಮಾಡಿರಲಿಲ್ಲ, ಇದು ಓದುಗರ ಭಾವ ಹಾಗೂ ಬದುಕಿನಲ್ಲಿ ಪಲಣಾಮಕಾರಿ ಬದಲಾವಣೆ ತರುವುದೆಂದು. ಕಾದಂಬರಿ ಬಿಡುಗಡೆಯಾದ ಒಂದು ತಿಂಗಳಲ್ಲಿಯೇ ಕರೆಯೊಂದು ಬಂತು "ತುಂಬು ಹೃದಯದ ಧನ್ಯವಾದಗಳು ಮೇಡಂ" ಎಂದರು.

ನನಗೆ ಅಚ್ಚರಿ "ಏಕೆ?" ಎಂದೆ.

"ನನ್ನ ತಂಗಿಗೆ ಮದುವೆಯಾದ ಒಂದು ವರ್ಷದಲ್ಲಿ ನಮ್ಮ ಭಾವ ತೀರಿಹೋದರು. ಎಷ್ಟು ಒತ್ತಾಯಿಸಿದರು ನನ್ನ ತಂಗಿ ಮದುವೆಯಾಗಲು ಒಪ್ಪದೆ ಐದು ವರ್ಷಗಳ ಕಾಲ ಒಂಟಿತನವೆಂಬ ನರಕದಲ್ಲಿ ಬದುಕಿದಳು. ಅಂತರಪಟ ಓದಿದ ನನಗೆ, ಯಾವುದೋ ಭರವಸೆಯ ಕಿರಣ ಕಂಡಂತಾಗಿ ಅಂತರಪಟವನ್ನು ಓದುವಂತೆ, ಅವಳಿಗೆ ಸಲಹೆ ನೀಡಿದೆ. ಅವಳು ಓದಿದ ನಂತರ ಅವಳು ಮೌನಿಯಾದಳು, ಬಹುಶಃ ಅದು ಅವಳ ಮನಸ್ಸು ಹದಗೊಳ್ಳುತ್ತಿದ್ದ ಸಮಯವಿರಬೇಕು, ತದನಂತರ ಅವಳ ಮನಸ್ಸು ಪಲವರ್ತನೆಯಾಗಿ ಮದುವೆಗೆ ಒಪ್ಪಿದಳು ನೋವಿನ ಕಡಲಿನಲ್ಲಿದ್ದ ಕುಟುಂಬಕ್ಕೆ ಸಂತಸ ನೀಡಿದೆ ಈ ಕಾದಂಬರಿ" ಎಂಬ ಆಕೆಯ ಅಣ್ಣನ ಮಾತುಗಳನ್ನು ಕೇಳಿ ನಿಜಕ್ಕೂ ಸಾರ್ಥಕ ಭಾವ ಮೂಡಿತು.

ಈ ಒಂದು ಉದಾಹರಣೆ ಮಾತ್ರವಲ್ಲ ಕಾದಂಬರಿ ಓದಿದ ನಂತರ ಮುಲದ ತಮ್ಮ ಸಂಬಂಧಗಳನ್ನು ಬೆಸೆದ ಅಣ್ಣ ತಮ್ಮ, ಅಕ್ಕ ತಮ್ಮ, ಅಣ್ಣ ತಂಗಿಯರ ವಿಚಾರ ತಿಳಿದಾಗ ನನಗಲವಿಲ್ಲದೆ ಕಣ್ಣೀರು ಚಾಲದವು.

ಬದುಕು ಸಂಬಂಧಗಳ ಕೂಟ, ನಿರ್ವಹಿಸುವುದು ಕಷ್ಟ ಆದರೆ ಅಸಾಧ್ಯವಲ್ಲ. ಅವನತಿಯ ಅಂಚಿನಲ್ಲಿರುವ ಪ್ರಭೇದ "ಸಂಬಂಧ". ಅದರ ಉಳಿವಿಗಾಗಿ ಒಂದು ಪುಟ್ಟ ಪ್ರಯತ್ನವೇ "ಅಂತರಪಟ".

-ಉಷಾರವಿ

View full details