Skip to product information
1 of 2

Vasumathi Udupa

ಅಂತಃಪುರ - ಸಾಮಾಜಿಕ ಕಾದಂಬರಿ

ಅಂತಃಪುರ - ಸಾಮಾಜಿಕ ಕಾದಂಬರಿ

Publisher - ಅಂಕಿತ ಪುಸ್ತಕ

Regular price Rs. 195.00
Regular price Rs. 195.00 Sale price Rs. 195.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 189

Type - Paperback

Gift Wrap
Gift Wrap Rs. 15.00
'ಸುಧಾ'ದಲ್ಲಿ 'ಅಂತಃಪುರ' ಧಾರಾವಾಹಿ ಓದಿದಾಗ ನನಗೆ ಹೀಗನ್ನಿಸಿತು... ಕೊರೊನಾ ಸಂದರ್ಭ ಸೃಷ್ಟಿಸಿದ ಸಂಕಷ್ಟದ ಸನ್ನಿವೇಶದಿಂದ ಪ್ರಾರಂಭವಾದ ಮಲೆನಾಡ ಪರಿಸರದ ಹಿನ್ನೆಲೆಯಲ್ಲಿ, ವೈವಿಧ್ಯಮಯ ಮಾನವ ಒಳತೋಟಿಗಳನ್ನು ಓದುಗರ ಅಂತಃಕರಣ ಮಿಡಿಯುತ್ತಲೇ ಪ್ರಸ್ತುತಪಡಿಸಿರುವ ರೀತಿ ವಿಶಿಷ್ಟವಾದುದು.

- ಕೆ.ಆರ್. ಉಮಾದೇವಿ ಉರಾಳ, ತೀರ್ಥಹಳ್ಳಿ
-ಜಿ: ಮೃತ್ಯುಂಜಯ, ಬೆಂಗಳೂರು

ಬಹುಶಃ ಇತ್ತೀಚಿನ ವರ್ಷಗಳಲ್ಲಿ ಬಂದ ಅತ್ಯಂತ ಹೃದಯಂಗಮ ಧಾರಾವಾಹಿ ಇದು. ಮಲೆನಾಡಿನ ಅದ್ಭುತ ಚಿತ್ರಣದೊಂದಿಗೆ ಮಾನವ ಸಹಜ ಆದರ್ಶಗಳು, ದೌರ್ಬಲ್ಯಗಳನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ. ಜನರೇಶನ್ ಗ್ಯಾಪ್ ಬಗ್ಗೆ ಸರಳವಾಗಿ ಹೇಳಿದ್ದಾರೆ. ಅಂತ್ಯ ಮಾತ್ರ ಯಾವುದೇ ಸಿನಿಮಾದ ಕೈಮ್ಯಾಕ್ಸ್‌ ಗಿಂತಲೂ ಹೆಚ್ಚು.

-ಬಿಲ್ಲೇಶ್ವರ ಅಚ್ಚು, ಹುಂಚ

ಹಿರಿಯ ಕಿರಿಯ ತಲೆಮಾರಿನ ಆಲೋಚನಾ ಲಹರಿ, ವರ್ತನೆಯಲ್ಲಿನ ವ್ಯತ್ಯಾಸವನ್ನು ಬಿಂಬಿಸುವುದರೊಂದಿಗೆ, ಇಂದಿನ ಸಮಾಜಕ್ಕೆ ಮಾದರಿಯಾಗುವಂತಹ ನಡೆಯೊಂದಿಗೆ ಧಾರಾವಾಹಿ ಸುಖಾಂತ್ಯವಾದುದನ್ನು ಕಂಡು ಸಮಾಧಾನ ವಾಯಿತು. ಮಲೆನಾಡಿನ ಭಾಷೆಯೊಂದಿಗೆ ಉತ್ತಮ ಧಾರಾವಾಹಿಯನ್ನು ನೀಡಿದ ಲೇಖಕಿಗೆ ಅಭಿನಂದನೆಗಳು.

- ಸತ್ಯವತಿ, ಕುಳಿಹಿತ್ತು.

ಧಾರಾವಾಹಿ ಮುಗಿದಾಗ ನನ್ನ ಕಣ್ಣುಗಳು ಒದ್ದೆಯಾದವು. ಜೀವನದ ಸತ್ಯಗಳು, ಮನುಷ್ಯನ ಅರಿಷಡ್ವರ್ಗಗಳ ಪರಿಚಯ ಮಾಡಿಸುವ ಚಿತ್ರಣ ಇದಾಗಿದೆ.

-ನಾಗರತ್ನ ಪಾಳ್ಯಂ, ಮೈಸೂರು
View full details