Subscribe to our emails
Be the first to know about new collections and special offers.
ಪೂರ್ಣತೆಯನ್ನು ಅರಿಯಲು ಆಯ್ದ ಅಪೂರ್ಣತೆಯ ಹಾದಿ. ಕೊನೆ-ಮೊದಲು ಎರಡೂ ಇಲ್ಲದ, ಒಂದರೊಳಗೊಂದು ಸಂಯೋಗಗೊಂಡ ಹಾದಿ. ಮೊದಲಿಗನೂ ಅಲ್ಲದ, ಕೊನೆಯವನೂ ಅಲ್ಲದ ಪ್ರತಿ ವ್ಯಕ್ತಿಯೂ ಹುಡುಕಿಕೊಂಡು ಹೋಗುವ ಹಾದಿ. ಆದರೆ, ಆತನ ಮಟ್ಟಿಗೆ ಇದು ಹೊಚ್ಚ ಹೊಸತಾದ ಹಾದಿ! ನುಡಿ ಹುಟ್ಟಿ, ಪದಗಳು ಸಾಲುಗಳಾಗಿ, ಮೌನ ಕೊನೆಗೊಳ್ಳುವ ಹಾದಿ.
ಅಂಗದ ಧರೆ, ಕಟ್ಟುವಿಕೆ, ಕೆಡಹುವಿಕೆ, ರಚನೆ- ವಿಸರ್ಜನೆ, ಕಾರ್ಯ-ಕಾರಣ ಮತ್ತು ಪರಿಣಾಮಗಳ ಬಹುಮುಖ್ಯ ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತದೆ. ಈ ಕ್ರಿಯೆಗಳಲ್ಲಿ ತಾನೇ ಕೇಂದ್ರವೆಂದು ಭಾವಿಸುವ ಹುಲುಮಾನವರ ಪಾತ್ರವೇನು? ಎಂದು ಅರಿಯಲು ಯತ್ನಿಸುತ್ತದೆ.
Be the first to know about new collections and special offers.