Nithyananda B Shetty
ಅಳವು ಅರಿಯದ ಭಾಷೆ - ಕಲೆ, ಸಮಾಜ, ಇತಿಹಾಸ
ಅಳವು ಅರಿಯದ ಭಾಷೆ - ಕಲೆ, ಸಮಾಜ, ಇತಿಹಾಸ
Publisher -
- Free Shipping Above ₹400
- Cash on Delivery (COD) Available*
Pages - 352
Type - Paperback
Couldn't load pickup availability
ಯಾವ ಕಾಲವನ್ನು ನಾವು ಸಂಕಟಗಳಿಲ್ಲದ ನೆಮ್ಮದಿಯ ಕಾಲವೆಂದು ಭ್ರಮಿಸಿರುತ್ತೇವೋ, ಆ ಕಾಲದಲ್ಲಿ ಜಾಗೃತಿ, ಹೊಸಮಾತು, ತಳಮಳ ಇತ್ಯಾದಿಗಳು ಹುಟ್ಟುವ ಸಾಧ್ಯತೆ ಕಡಿಮೆ. ಬ್ರಿಟಿಷರು ನಮ್ಮನ್ನಾಳುತ್ತಿರುವಾಗ 'ನಾನು' ಎಂಬ ಹಳೆಯ ಪದ ಹೊಸ ಅರ್ಥದಲ್ಲಿ ಮರುಹುಟ್ಟು ಪಡೆಯಿತು. ಆಗ ಸ್ವಾತಂತ್ರ್ಯ, ಸಮಾನತೆ, ಪ್ರಜಾತಂತ್ರ ಎಂಬ ಆಧುನಿಕ ನುಡಿಗಟ್ಟುಗಳ ಅರ್ಥ ನಮ್ಮ ಅನುಭವಕ್ಕೆ ಬಂತು. ಅಂದರೆ ವಿಷಮ ಪರಿಸ್ಥಿತಿಯಲ್ಲಷ್ಟೇ ವಿಶೇಷ ಜಾಗೃತಿಯೂ ಮೂಡುತ್ತದೆ. ಈ ಪುಸ್ತಕವು ಅಂತಹ ಎಚ್ಚರವನ್ನು ಹುಟ್ಟಿಸುತ್ತದೆ. ಇದು ಯಾವ ಬಗೆಯ ಕಾಲ ಎಂಬ ಪ್ರಶ್ನೆಯನ್ನು ಓದುಗರೇ ಕೇಳುವಂತೆ, ಅವರಾಗಿಯೇ ಉತ್ತರ ಕಂಡುಕೊಳ್ಳುವಂತೆ ಅನುವು ಮಾಡಿಕೊಡುತ್ತದೆ.
ಕಳೆದ ನೂರೈವತ್ತು ವರ್ಷಗಳ ಕರಾವಳಿಯ ಮತ್ತು ಯಕ್ಷಗಾನದ ಸಾಮಾಜಿಕ ಇತಿಹಾಸವನ್ನು ಇಲ್ಲಿ ಹೆಣೆಯಲಾಗಿದೆ. ಕಲೆ ಮತ್ತು ಸಮಾಜದ ನಿಬಿಡ-ನಿಗೂಢ ಗತಕಾಲದತ್ತ ಬೆಳಕು ಬೀರುವ ಈ ಕೃತಿ ಅಲ್ಲಿಯ ಪಲ್ಲಟ ಮತ್ತು ತಲ್ಲಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ವಿಶ್ಲೇಷಿಸುತ್ತದೆ. ಕವಿ-ಕಲಾವಿದರು 'ಮಾರೀಚ'ರಾಗಬೇಕೆ ಅಥವಾ 'ಪುರುಷಮೃಗ'ಗಳಾಗಬೇಕೆ ಎಂಬ ಮೂಲಭೂತ ಪ್ರಶ್ನೆಯನ್ನು ಇದಿರುಗೊಳ್ಳುತ್ತದೆ. ಹಾಗೆಯೇ ಕಲೆ ಮತ್ತು ಕೇಡಿನ ಸ್ವರೂಪವೇನು ಎಂಬ ಗಹನವಾದ ಪ್ರಶ್ನೆಯನ್ನು ತನ್ನ ಜೀವನ್ಮರಣದ ಸಮಸ್ಯೆ ಎಂಬಷ್ಟು ಉತ್ಕಟವಾಗಿ ಪರಿಭಾವಿಸುತ್ತದೆ. ಅಂತೆಯೇ ಕಲಾಮೀಮಾಂಸೆಯನ್ನು ಲೋಕಮೀಮಾಂಸೆಯ ಅವಿಚ್ಛಿನ್ನ ಭಾಗವಾಗಿ ಕಾಣುತ್ತದೆ.
ತನ್ನ ನಿರೂಪಣೆಯನ್ನು ಎಂಟು ಮಂದಿ ತಜ್ಞರ ಪರಿಶೀಲನೆಗೆ ಒಳಪಡಿಸಿ ಅವರೆಲ್ಲರ ಮಾತುಗಳನ್ನು ಒಳಗೊಂಡಿರುವ ಈ ಹೊತ್ತಗೆ, ತನ್ನ ಸ್ವರೂಪದಲ್ಲೇ ಹೊಸದಾರಿಯನ್ನು ಹುಡುಕುತ್ತ ಹೊರಟಿರುವ ಒಂದು ಪ್ರಯೋಗ.
Share

Subscribe to our emails
Subscribe to our mailing list for insider news, product launches, and more.