D. N. Belagali
ಅಕ್ರಮ ಸಂತಾನ
ಅಕ್ರಮ ಸಂತಾನ
Publisher - ನವಕರ್ನಾಟಕ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 152
Type - Paperback
Couldn't load pickup availability
ನಾನು ಅಪ್ಪನನ್ನು ವಿಚಾರಿಸುತ್ತಿದ್ದೆ. ಅಪ್ಪನ ಹೆಸರನ್ನು ಏನೆಂದು ಹೇಳಲಿ? ಅಪ್ಪ ಎಲ್ಲಿರುತ್ತಾನೆ? ಮಾಡುತ್ತಾನೆ? ನನ್ನ ಕಡೆಗೆ ಏಕೆ ಬರುವುದಿಲ್ಲ? ಮತ್ತು ಕಾಕಾ ನನಗೆ ಯಾರು? ನಾಗಿ, ನಿರಮಿ ಯಾರವರು? ನಾನು ಅವರಿಗೆ ಯಾರು?
ಅವ್ವ ಕುಂತಿಯಂತೆ ಮೌನ ಧರಿಸುತ್ತಿದ್ದಳು. ಇಂಥ ಸಮಯದಲ್ಲಿ ಕರ್ಣ ಹತ್ತಿರದವನಾಗಿ ಕಾಣುತ್ತಿದ್ದ. ಒಮ್ಮೊಮ್ಮೆ ನಾನು ಕರ್ಣನಾಗುತ್ತಿದ್ದೆ. ನದಿಯಲ್ಲಿ ಹರಿದುಹೋಗುತ್ತಿದ್ದೆ. ದೂರ ದೂರ ಕೆಳಗೆ ಕೆಳಗೆ.
'ಅಕ್ರಮ ಸಂತಾನ'ದ ಮಾನಸಿಕ ತುಮುಲವನ್ನು ಸಿಟ್ಟು ಸೆಡವನ್ನು ವ್ಯಕ್ತಪಡಿಸುವ ಮೇಲಿನ ನುಡಿಗಳು ಓದುಗರ ಮನಸ್ಸನ್ನು ಸ್ಪರ್ಶಿಸದೆ ಇರುವುದಿಲ್ಲ.
ತಮ್ಮ ಮೊದಲ ಕೃತಿಯಿಂದಲೇ ಸಾಕಷ್ಟು ಖ್ಯಾತರಾದ ಶ್ರೀ ಶರಣಕುಮಾರ ಲಿಂಬಾಳೆ ಮರಾಠಿ ಭಾಷೆಯಲ್ಲಿ ಬರೆಯುತ್ತಿರುವ ದಲಿತ ಲೇಖಕ, 'ಅಕ್ರಮ ಸಂತಾನ' ತಮ್ಮದೇ ಆತ್ಮಕತೆ ಎಂದು, ಇದರಿಂದ ತಮ್ಮ ಬಂಧು ಬಳಗದವರ ಆಕ್ಷೇಪಕ್ಕೆ ಪಾತ್ರನಾಗಬೇಕಾಯಿತೆಂದು ಅವರು ಹೇಳಿಕೊಂಡಿದ್ದಾರೆ. ಅವರ 'ಹಿಂದೂ', 'ನರವಾನರ' 'ಬಹುಜನ', 'ಸನಾತನ' ಮತ್ತು 'ರೊಚ್ಚು' ಕೃತಿಗಳನ್ನೂ ನವಕರ್ನಾಟಕ ಪ್ರಕಟಿಸಿದೆ.
'ಅಕ್ರಮ ಸಂತಾನ'ವನ್ನು ಸಮರ್ಥ ರೀತಿಯಲ್ಲಿ ಕನ್ನಡಕ್ಕೆ ಅನುವಾದ ಮಾಡಿದವರು ದು. ನಿಂ. ಬೆಳಗಲಿಯವರು.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.