A. N. Prasanna
ಅದೊಂದು ದಿನ
ಅದೊಂದು ದಿನ
Publisher - ಅಂಕಿತ ಪುಸ್ತಕ
- Free Shipping Above ₹400
- Cash on Delivery (COD) Available*
Pages - 132
Type - Paperback
Couldn't load pickup availability
ಈ ಅತಿ ಸಣ್ಣಕಥೆಗಳ ಸಂಕಲನ ಓದುಗರನ್ನೂ ಕಥೆಗಾರರಾಗುವಂತೆ ಆಹ್ವಾನಿಸಿ ಪ್ರೋತ್ಸಾಹಿಸುವ ರೀತಿಯ ಕಥೆಗಳು. ಇವುಗಳಲ್ಲಿ ಹೆಚ್ಚಿನವು ಸಾಮಾನ್ಯ ವ್ಯಾಪ್ತಿಯವು, ಉಳಿದವು ಸ್ವಲ್ಪವೇ ದೊಡ್ಡವು.
ಇದರಲ್ಲಿನ ಬಹಳಷ್ಟು ಕಥೆಗಳು ವಾಸ್ತವ-ಕಲ್ಪನೆಗಳ ಅಂಚಿನಲ್ಲಿ ನಡೆಯುತ್ತವೆ. ಒಬ್ಬೊಬ್ಬರ ಬಾಳಿನ ನೂರಾರು ಕನಸುಗಳನ್ನು ಪುಡಿಗುಟ್ಟಿ ಕೊನೆಗೆ ಎಷ್ಟು ಹರಳು ಉಳಿಯುತ್ತವೋ ಅಷ್ಟೇ ಕನಸು ನಿಜವಾಗುತ್ತವೆಂದು ಹೇಳುವ ಬದುಕಿನ ಮಾಲ್ನ ಕಥೆಗಳು ಇವು. ಹಾಲ್ ಟಿಕೆಟ್ ಇಲ್ಲದೆ ಪರೀಕ್ಷಾ ಕೇಂದ್ರದ ದಾರಿ ತಪ್ಪಿ ಪರೀಕ್ಷೆ ತಪ್ಪಿಸಿಕೊಳ್ಳುವ 'ನೆಲೆ'ಯ ನಾಯಕ ಈ ಸಂಕಲನದ ಎಲ್ಲ ಪಾತ್ರಗಳ ಪ್ರತಿನಿಧಿಯಂತಿದ್ದಾನೆ.
ಡಿಜಿಟಲ್ ಯುಗ ತಂದಿರುವ ಸಂಕಟವನ್ನು ಚಿತ್ರಿಸುವ ಆಚೀಚೆ, ಕಾಲದ ನಿರ್ದಯ ಗತಿಯನ್ನು ತೆರೆದಿಡುವ ಮ್ಯಾಚ್, ಏನೆಲ್ಲವನ್ನೂ ಸಮರ್ಥಿಸಿಕೊಳ್ಳುವ ಮಾತುಗಾರನ ಮೂಲಕ ಭಾಷೆಯ ವಿರೋಧಾಭಾಸವನ್ನು ತೆರೆದಿಡುವ 'ಮಾತುಗಳು', ಜನರ ಬೇಸರಗಳನ್ನು ಹೊತ್ತೊಯ್ಯಲು ಬರುವ ಗೂಡ್ಸ್ ಗಾಗಿ ಕಾದಿರುವ ಚಿತ್ರಣದ 'ಲಗೇಜ್', ಬಯಕೆಗಳನ್ನೆಲ್ಲ ಪಟ್ಟಿ ಮಾಡಲು ಕೂತ ಜನಮೂಹದ 'ಅನಂತ', ಘೋಷಣೆಗಳ ಮೂಲಕ ಆಳುವ ದುರ್ಬಲ ನಿರ್ದಯಿ 'ನಾಯಕ', ಭ್ರಷ್ಟತೆಯ 'ಸಮೀಕ್ಷೆ', ಇಂಥ ರಚನೆಗಳು ಹದುಳವಿಲ್ಲದ ಬದುಕಿಗೆ ಕನ್ನಡಿ ಹಿಡಿಯುತ್ತವೆ.
ಬದುಕು ದಿಕ್ಕುಕೆಟ್ಟಿದೆ. ವ್ಯಕ್ತಿ, ಸಂಸಾರ, ಸಮಾಜ, ರಾಜಕೀಯ, ಭಾಷೆ, ತತ್ವಶಾಸ್ತ್ರ ಯಾವ ಊರುಗೋಲೂ ಇಲ್ಲ. ಇದು ಕನಸೋ ಎಚ್ಚರವೊ ತಿಳಿಯುತ್ತಿಲ್ಲ. 'ಮಿರುಗು' ಕಥೆಯಲ್ಲಿ ಮೇಲೆ ಚಿಮ್ಮಿದ ನಾಣ್ಯ ಹೇಗೆ ಬೀಳುವುದೊ ಎಂದು ಭವಿಷ್ಯದ ಬಗ್ಗೆ ಆತಂಕಿತರಾಗಿ ಕಾಯುವ ಜನರ ಚಿತ್ರವಿದೆ. ದೇಹದ ಸತ್ಯ ಮರೆತು ಆತ್ಮದ ಸತ್ಯದ ಬಗ್ಗೆ ಸುಳ್ಳು ಹೇಳುವ 'ದರ್ಶನ'ದ ತತ್ವಜ್ಞಾನವಲ್ಲ, ಎಲ್ಲವನ್ನೂ ಸಮರ್ಥಿಸಿಕೊಳ್ಳುವ 'ಪದಗಳು' ಸೃಷ್ಟಿಸುವ ಮಾತುಗಾರಿಕೆಯೂ ಅಲ್ಲ, ನಮ್ಮ ಸ್ಥಿತಿಯ ವಾಸ್ತವ ಇದು ಅನ್ನುವ ಅರಿವು ಮೂಡಿದರೆ ಅರೆಗನಸಿನಿಂದ ಎಚ್ಚರಕ್ಕೆ ಹೊರಳಿ ಪರಿಹಾರ 'ಮಿನುಗೀತು' ಎಂದು ಈ ಕಥೆಗಳು ಮೆಲುದನಿಯಲ್ಲಿ ಉಸಿರುತ್ತವೆ.
-ಓ.ಎಲ್. ನಾಗಭೂಷಣ ಸ್ವಾಮಿ
Share

Subscribe to our emails
Subscribe to our mailing list for insider news, product launches, and more.