Skip to product information
1 of 1

Basavanneppa Kambara

ಆಟಿಕೆ

ಆಟಿಕೆ

Publisher - ಛಂದ ಪ್ರಕಾಶನ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type - Paperback

Gift Wrap
Gift Wrap Rs. 15.00
ಬಸವಣ್ಣೆಪ್ಪ ಕಂಬಾರರ ಈ ಕಥೆಗಳು ಉತ್ತರ ಕರ್ನಾಟಕದ ಗ್ರಾಮೀಣ ಬದುಕಿನ ಲಯಗಳನ್ನು ಧ್ವನಿಸುತ್ತವೆ. ಜಾತಿ ವ್ಯವಸ್ಥೆಯ ಕರಾಳ ಮುಖಗಳನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ: ಬೆಳಗಾವಿ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ದೇಸೀ ನುಡಿಗಟ್ಟನ್ನು ಅಮೂಲಾಗ್ರವಾಗಿ ಅರಗಿಸಿಕೊಂಡಿದ್ದಾರೆ.

ಅವರ ಕಥೆಗಳಲ್ಲಿರುವುದು ಸ್ಥಗಿತ ಚಿತ್ರಗಳಲ್ಲ. ತಮ್ಮ ಅನುಭವಗಳು ಸಾಂಸ್ಕೃತಿಕ ದಾಖಲೆ ಎಂಬಂತೆ ಅವರು ಚಿತ್ರಿಸುವುದಿಲ್ಲ. ಚಲನಶೀಲತೆ ಕಳೆದುಕೊಂಡಿರುವ ಹಳ್ಳಿಗಳಲ್ಲಿನ ಮೇಲು ಕೀಳು ತರತಮ ತಾಕಲಾಟಗಳನ್ನು ಹೃದಯವಿದ್ರಾವಕ ಎನ್ನುವಂತೆ ನಿರೂಪಿಸುವ ಕಥೆಗಳು ಬಸವಣ್ಣೆಪ್ಪ ಅವರವು, ಸೌಲಭ್ಯವಂಚಿತ ಗ್ರಾಮ ವ್ಯವಸ್ಥೆಯೊಳಗಿನ ತಿಕ್ಕಾಟ, ಗೋಳುಗಳನ್ನು ಅವರು ತಮ್ಮ ಪ್ರತಿಯೊಂದು ಕಥೆಯಲ್ಲಿ ಅನಾವರಣಗೊಳಿಸಿದ್ದಾರೆ. ಇಲ್ಲಿನ 'ಉರಿವ ಕೆಂಡದ ಮೇಲೆ' ಮತ್ತು 'ಬಹುಮಾನ ಕಥೆಗಳು ನಿಸ್ಸಂದೇಹವಾಗಿ ಕನ್ನಡದ ಒಳ್ಳೆಯ ಕಥೆಗಳ ಸಾಲಲ್ಲಿ ನಿಲ್ಲುತ್ತವೆ.

-ಕುಂವೀ
View full details