Skip to product information
1 of 2

K. Satyanarayana

ಗೃಹನ್ಯಾಯ

ಗೃಹನ್ಯಾಯ

Publisher - ವೀರಲೋಕ ಬುಕ್ಸ್

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 116

Type - Paperback

ಇಲ್ಲಿರುವ ಎಲ್ಲ ಕತೆಗಳು ತೀರಾ ಈಚೆಗೆ ಬರೆದಂಥವು. ಒಂದೆರಡು ಕತೆಗಳು ತೀರಾ ನಿನ್ನೆ ಮೊನ್ನೆ ನಡೆದಂಥವು. ಒಂದು ಕತೆಯಂತೂ ಇನ್ನೂ ನಡೆಯುತ್ತಿದೆ.. ಕತೆಗಳನ್ನು ಕತೆಗಾರನಾದವನು ಯಾವಾಗ ಬರೆಯಬೇಕು ಅಥವಾ ಕತೆ ಯಾವಾಗ ಬರೆಸಿಕೊಳ್ಳುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲ. ಕತೆ ಬರೆಯುವವನಿಗೂ ಉತ್ತರ ಗೊತ್ತಿರುವುದಿಲ್ಲ!

ಪ್ರತಿಯೊಂದು ಕತೆಗೂ ತನ್ನದೇ ಆದ ಹದ ಮತ್ತು ಧ್ವನಿ ಇರುತ್ತದೆ. ಕತೆಯೇನೋ ಕಾಣಿಸಿಕೊಳ್ಳುತ್ತದೆ, ಸಿಕ್ಕಿಬಿಡುತ್ತದೆ. ಆದರೆ, ಕತೆಯ ಹದ ಮತ್ತು ಧ್ವನಿ ಬರೆಯುವವನ ಕೈ ಹತ್ತುವುದು ಅಷ್ಟು ಸುಲಭವಲ್ಲ. ಕಾಯಬೇಕು, ಕಾಯಬಹುದು. ಆದರೆ ಹದ-ಧ್ವನಿಯೆಲ್ಲ ಕೈಗೂಡಿತೆ? ಎಂದು ತಿಳಿಯಬೇಕಾದರೆ, ಲೇಖನಿ ಹಿಡಿದು ಬರೆಯಲೇಬೇಕು. ಬರೆದೇ ಪರೀಕ್ಷೆ ಪಾಸು ಮಾಡಬೇಕು.

ಇಲ್ಲಿಯ ಕಥಾ ಜಗತ್ತಿನ ಹಿಂದೆ ಇರುವ ಇನ್ನೊಂದು ಜಗತ್ತು ತನಗೆ ಸಿಕ್ಕಿದೆಯೆನಿಸಿದಾಗ ಬರವಣಿಗೆ ತಾನೇ ತಾನಾಗಿ ರೂಪುಗೊಳ್ಳುತ್ತದೆ..

- ಕೆ. ಸತ್ಯನಾರಾಯಣ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)