Purushothama Das Heggade,
ಯಾಯಾತಿ
ಯಾಯಾತಿ
Publisher - ವಂಶಿ ಪಬ್ಲಿಕೇಷನ್ಸ್
- Free Shipping Above ₹350
- Cash on Delivery (COD) Available*
Pages - 312
Type - Hardcover
Couldn't load pickup availability
ಯಯಾತಿಯ ಕಥನದ ಪಾತ್ರಗಳಾದ ಯತಿ, ಯಯಾತಿ, ಕಚ, ದೇವಯಾನಿ, ಶರ್ಮಿಷ್ಠೆ, ಪುರು, ಮುಂತಾದವರ ವ್ಯಕ್ತಿತ್ವಗಳು ಮಾನವನ ವರ್ತನಾ ವ್ಯಕ್ತಿತ್ವ ಹಾಗೂ ಮೂಲಭೂತ ಸ್ವಭಾವಗಳನ್ನು ಪರಿಚಯಿಸಲಿದ್ದು ಸಾರ್ವಕಾಲಿಕವಾಗಿರುತ್ತವೆ. ಪ್ರತಿಯೊಬ್ಬ ವ್ಯಕ್ತಿಯು ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸಿ ಮೈಲಿಗಲ್ಲುಗಳನ್ನು ಮುಟ್ಟಲು ಜೀವನಪೂರ್ತಿ ಹೆಣಗಾಡುತ್ತಾನೆ. ಜೀವನ ಜಂಜಾಟದಿಂದ ವ್ಯಸ್ತಗೊಂಡ ಮನಸ್ಸು ಸುಖ-ಭೋಗಗಳ ಕಡೆಗೆ ಹೊರಳುತ್ತದೆ. ಸೃಷ್ಟಿಕ್ರಿಯೆಗೆ ಕಾಮವು ಅತ್ಯವಶ್ಯವಾದರೂ ಅತಿಕಾಮವು ಮನಸ್ಸಿನ ಅಸ್ವಸ್ಥತೆಗೂ ಕಾರಣವಾಗುವುದು ಎನ್ನುವುದನ್ನು ಮರೆಯಬಾರದು. ಲೌಕಿಕ ಸುಖಗಳು ಆತ್ಮಸುಖವನ್ನು ತರಲಾರದು ಎಂಬ ಸತ್ಯವು ಗೋಚರಿಸುವ ವೇಳೆಗೆ ಸಮಯವು ಮೀರಿರುತ್ತದೆ.
ಪ್ರಸಿದ್ಧ ತತ್ವಶಾಸ್ತ್ರಜ್ಞರು-ಮನಃಶಾಸ್ತ್ರಜ್ಞರು-ನರವಿಜ್ಞಾನಿ-ಜೀವವಿಜ್ಞಾನಿಗಳು ಪ್ರತಿಪಾದಿಸಿರುವ ಮಾನವನ ವರ್ತನಾ ವ್ಯಕ್ತಿತ್ವಗಳು-ಮೂಲಭೂತ ಸ್ವಭಾವಗಳು ಮುಂತಾದ ಮನೋವೈಜ್ಞಾನಿಕ ಕಾರಣಗಳ ಹಿನ್ನಲೆಯಲ್ಲಿ ಕಾದಂಬರಿಯಲ್ಲಿ ಬರುವ ಪಾತ್ರಗಳ ವ್ಯಕ್ತಿತ್ವವನ್ನು ಪರಿಚಯಿಸಲಾಗಿದೆ.
ಅವಕಾಶವಾದಿಯೂ ಕುಟಿಲ ನೀತಿಯವನೂ ಆದ ಕಚ, ಸ್ವಾರ್ಥಿಯೂ ಅಹಂಕಾರಿಯೂ ಆದ ದೇವಯಾನಿ, ಆಶಾವಾದಿಯೂ ಭಾವನಾತ್ಮಕಜೀವಿಯೂ ಆದ ಶರ್ಮಿಷ್ಠೆ, ಅತಿಕಾಮಿಯೂ ಮನೋವಿಕಾರಿಯೂ ಆದ ಯಯಾತಿ, ಯೋಗಿ ಯತಿ, ಯೋಗಿಣಿ ಮಾಧವಿ, ಅನೈತಿಕ ವ್ಯಕ್ತಿಗಳಾದ ಗಾಲವ ಸುಪರ್ಣರು, ಅನುರೂಪವಾದಿಯಾದ ಪುರು, ಮುಂತಾದ ಪಾತ್ರಗಳ ವ್ಯಕ್ತಿತ್ವವನ್ನು ಕಾಣಬಹುದಾಗಿದೆ.
ಮಹಾಭಾರತ ಹಾಗೂ ಪುರಾಣಗಳ ಎಳೆಯನ್ನು ಆಧರಿಸಿದ್ದರೂ ಎಲ್ಲಾ ಕಾಲಕ್ಕೂ ಅನ್ವಯಿಸುವ ಸಂಪೂರ್ಣ ಸ್ವತಂತ್ರ ಮನೋವೈಜ್ಞಾನಿಕ ಕಾದಂಬರಿಯು ಇದಾಗಿದೆ.
Share

Subscribe to our emails
Subscribe to our mailing list for insider news, product launches, and more.