Skip to product information
1 of 2

Yandamoori Veerendranath | Kannada: M A Subramanya

ಯಶಸ್ಸಿನ ರಹಸ್ಯಗಳು - ಪಾಲಕರಿಗೆ ಗೊತ್ತಿಲ್ಲ , ಶಿಕ್ಷಕರು ಹೇಳಲ್ಲ

ಯಶಸ್ಸಿನ ರಹಸ್ಯಗಳು - ಪಾಲಕರಿಗೆ ಗೊತ್ತಿಲ್ಲ , ಶಿಕ್ಷಕರು ಹೇಳಲ್ಲ

Publisher - Sahithya Prakashana

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 200

Type - Paperback

Gift Wrap
Gift Wrap Rs. 15.00

'ಕೀಳರಿಮೆ'ಯಿಂದ ನೀವು ಒದ್ದಾಡುತ್ತಿರುವಿರಿ... ಓದುವಾಗ ನಿಮಗೆ 'ಏಕಾಗ್ರತೆ' ಕುದುರುತ್ತಿಲ್ಲ. ನೆನಪಿಡಬೇಕೆಂಬುದನ್ನು 'ಮರೆತು ಬಿಡುತ್ತೀರಿ'..

'ಸಿಟ್ಟನ್ನು' ನಿಯಂತ್ರಿಸಿಕೊಳ್ಳಬೇಕು; ನಿಮಗದು ಸಾಧ್ಯವೇ ಆಗುತ್ತಿಲ್ಲ... ಪರೀಕ್ಷೆಯ ಸಮಯದಲ್ಲಿ ತುಂಬ 'ಟೆನ್ನನ್' ಮಾಡಿಕೊಳ್ಳುತ್ತೀರಿ... ವೇದಿಕೆಯೇರಿ 'ಭಾಷಣ ಮಾಡಲು' ನಿಮಗೆ ತುಂಬ ಭಯ... ಭವಿಷ್ಯದ ಬಗೆಗೆ ನಿಮಗೇಕೊ 'ಅಭದ್ರತೆಯ ಭಾವನೆ.'

ಈ ಪುಸ್ತಕವು ನಿಮ್ಮ ದೌರ್ಬಲ್ಯಗಳನ್ನು ವಿಶ್ಲೇಷಿಸುತ್ತದೆ, ಮಾತ್ರವಲ್ಲ; ಸಮಸ್ಯೆಗಳೊಂದಿಗೆ ಹೋರಾಡುವ ವಿವಿಧ ವರಸೆಗಳನ್ನು ಕಲಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ನಿಮ್ಮ ಪಾಲಕರಿಗೆ ಗೊತ್ತಿರದ ಹಲವಾರು ಉಪಯುಕ್ತ ಕಿವಿಮಾತುಗಳನ್ನು ತಿಳಿಸಿಕೊಡುತ್ತದೆ.

ಒಬ್ಬ ಚಾರ್ಟಡ್್ರ ಅಕೌಂಟೆಂಟ್ ಆಗಿಯೂ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜನಪ್ರಿಯ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ವಿದ್ಯಾರ್ಥಿಗಳನ್ನು ಹುರಿದುಂಬಿಸಿ, ಅವರಲ್ಲಡಗಿರುವ ಪ್ರಚಂಡ ಪ್ರತಿಭೆಯನ್ನು ಹೊರಗೆಡವುವ ಅದ್ಭುತ ಕಲೆಗಾರರಾಗಿ ಈ ಕೃತಿಯನ್ನು ಹೊರತಂದಿದ್ದಾರೆ. ನಿಮ್ಮ ವ್ಯಕ್ತಿತ್ವವನ್ನು ಗುರುತಿಸುವ, ಚಾರಿತ್ರ್ಯವನ್ನು ಹೆಚ್ಚಿಸುವ, ಚಾತುರ್ಯವನ್ನು ಮೊನಚುಗೊಳಿಸುವ, ಸೃಜನಶೀಲತೆಯನ್ನು ವೃದ್ಧಿಗೊಳಿಸುವ, ಕ್ರಿಯಾತ್ಮಕವಾಗಿರಿಸಿ ಅನುಭೂತಿಯನ್ನುಂಟು ಮಾಡುವ ಎಷ್ಟೋ ರಹಸ್ಯಗಳು ಈ ಕೃತಿಯಲ್ಲಿ ಮಾತ್ರ ನೀವು ಕಾಣುತ್ತೀರೇ ಹೊರತು ಈ ಮೊದಲು ನಿಮ್ಮ ಪಾಠದಲ್ಲಾಗಲೀ, ಶಿಕ್ಷಕರ ಬಾಯಲ್ಲಾಗಲಿ ಕೇಳಿಯೇ ಇಲ್ಲ.

ಪಾಲಕರು ತಮ್ಮ ಮಕ್ಕಳಿಗೆ ಕೊಡಬಹುದಾದ ಉತ್ಕೃಷ್ಟ ಕಾಣಿಕೆ ಈ ಕೃತಿ. ಹಾಗೆಯೆ ಮಕ್ಕಳೂ ಕೂಡ ತಮ್ಮ ತಂದೆ ತಾಯಿಗಳಿಗೆ ಕೊಡಬೇಕಾದ ಅರ್ಥಪೂರ್ಣ ಕಾಣಿಕೆಯೂ ಹೌದು.

View full details