Skip to product information
1 of 1

Palahalli Vishwanath

ಯಾಮಿನಿಯ ಯಾತ್ರಿಕರು

ಯಾಮಿನಿಯ ಯಾತ್ರಿಕರು

Publisher -

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಪಾಲಹಳ್ಳಿ ವಿಶ್ವನಾಥ್‌ (ಡಾ.ಪಿ.ಆರ್. ವಿಶ್ವನಾಥ್) ಬೆಂಗಳೂರಿನ ಸಾಂಸ್ಕೃತಿಕ ಮತ್ತು ರಾಜಕೀಯ ಪರಿಸರದಲ್ಲಿ ಬೆಳೆದ ಖ್ಯಾತ ವಿಜ್ಞಾನಿ ಮತ್ತು ಉತ್ತಮ ವಿಜ್ಞಾನ ಸಂವಹನಕಾರ, ನ್ಯಾಷನಲ್ ಕಾಲೇಜು, ಸೆಂಟ್ರಲ್ ಕಾಲೇಜುಗಳಲ್ಲಿ ಭೌತವಿಜ್ಞಾನ ಶಿಕ್ಷಣ ಪಡೆದ ಅವರು ಅಮೆರಿಕದ ಮಿಶಿಗನ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ. ನಂತರ ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಅವರು ಸಲ್ಲಿಸಿದ ಸೇವೆ ಗಣನೀಯ, ಅಮೆರಿಕದ ಮೇರಿಲ್ಯಾಂಡ್ ಮತ್ತು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯಗಳಲ್ಲಿ ಕಾಸ್ಟಿಕ್ ಕಿರಣಗಳು, ಕಣಭೌತ ವಿಜ್ಞಾನ, ಖಭೌತ ವಿಜ್ಞಾನಗಳ ಹಲವಾರು ಗಮನಾರ್ಹ ಪ್ರಯೋಗಗಳಲ್ಲಿ ಅವರು ಪಾಲ್ಗೊಂಡಿದ್ದಾರೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಂಸ್ಥೆಯಲ್ಲಿಯೂ ಅವರು ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಹಿಮಾಲಯದ ಲಡಾಖ್‌ನಲ್ಲಿ ಗ್ಯಾಮಾರೇ ವೀಕ್ಷಣಾಲಯವನ್ನು ಸ್ಥಾಪಿಸಿದ್ದು ಅವರ ಇತ್ತೀಚಿನ ಯೋಜನೆಯಾಗಿತ್ತು.
 ಕನ್ನಡ ಭಾಷೆಯಲ್ಲಿ ವಿಜ್ಞಾನ ಸಂವಹನದ ಅಗತ್ಯದ ಪ್ರತಿಪಾದಕರಾದ ಡಾ. ವಿಶ್ವನಾಥ್, ಕಳೆದ ಎರಡು ದಶಕಗಳಿಂದ ಪತ್ರಿಕಾ ಲೇಖನಗಳು ಮತ್ತು ಟಿವಿ ಕಾರ್ಯಕ್ರಮಗಳ ಮೂಲಕ ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವ ಪ್ರಸಾರದಲ್ಲಿ ನಿರತರಾಗಿದ್ದಾರೆ. ಭೂಮಿಯಿಂದ ಬಾನಿನತ್ತ, ವಿಶ್ವದ ವೈವಿಧ್ಯ, ಕಣ ಕಣ ದೇವಕಣ, ಶತಮಾನ ಪುರುಷ ಐನ್‌ಸ್ಟೈನ್ ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ. ತಮ್ಮ ಹೆತ್ತವರಾದ, 'ತಾಯಿನಾಡು' ಪತ್ರಿಕೆಯ ಸ್ಥಾಪಕರಾದ ಪಿ.ಆರ್. ರಾಮಯ್ಯ ಮತ್ತು ಸಮಾಜ ಸೇವಕಿ- ರಾಜಕೀಯ ನಾಯಕಿ ಪಿ.ಆರ್. ಜಯಲಕ್ಷಮ್ಮ ಅವರ ಬದುಕಿನ ಸಾಧನೆಗಳನ್ನು ಹೇಳುವ ಡಾ. ವಿಶ್ವನಾಥ್ ಅವರ ಇತ್ತೀಚಿನ ಪುಸ್ತಕ 'ಹೀಗೊಂದು ಕುಟುಂಬದ ಕಥೆ', ಆ ಕಾಲಮಾನದ ಒಳ್ಳೆಯ ಚಾರಿತ್ರಿಕ ದಾಖಲೆಯೂ ಆಗಿದೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)