Sudhakara Ramayya
ವಿಂಟರ್ಸ್ ಆಫ್ ಲಯನ್ ಗಾರ್ಟನ್
ವಿಂಟರ್ಸ್ ಆಫ್ ಲಯನ್ ಗಾರ್ಟನ್
Publisher -
- Free Shipping Above ₹250
- Cash on Delivery (COD) Available
Pages - 184
Type - Paperback
ಭಾರತದ ಕರಾವಳಿ, ದಕ್ಷಿಣ ಆಫ್ರಿಕಾ, ಜರ್ಮನಿ, ಪೋರ್ಚುಗಲ್, ಸ್ಪೇನ್ ಮತ್ತು ಬೆಳ್ಳಿಯಂನಲ್ಲಿ ನಡೆಯುವ ಈ ಕಾದಂಬರಿಯ ಪ್ರತಿಯೊಂದು ಘಟನೆ ಮತ್ತು ಪ್ರತಿ ಪಾತ್ರದ ನಡುವೆಯೂ ಕುತೂಹಲಕಾರಿಯಾದ ಕೊಂಡಿಯಿದೆ. ಈ ಕಾದಂಬರಿಯನ್ನು ಯಾವುದೋ ಒಂದೇ ಪ್ರಕಾರಕ್ಕೆ ಸೀಮಿತಗೊಳಿಸಲು ಬಾರದು. ಯಾಕೆಂದರೆ ಪ್ರೇಮಿಗಳ ನಡುವಿನ ಪ್ರಣಯ, ಪ್ರಖ್ಯಾತ ಕಳ್ಳನ ಮುಗ್ಧತೆ, ಅಮಾಯಕನೊಬ್ಬನ ಅಪ್ರತಿಮ ಸಾಹಸ. ವಿಕೃತ ಸೇನಾಧಿಕಾರಿ, ಸರ್ಕಾರಿ ಮಾನ್ಯತೆ ಪಡೆದ ವೇಶ್ಯಾಗೃಹಗಳ ಮಾದಕತೆ ಮತ್ತು ಇವೆಲ್ಲಾವನ್ನು ನಿಯಂತ್ರಿಸುತ್ತಿರುವ ಮೊದಲ ಮತ್ತು ಎರಡನೆ ಮಹಾ ಯುದ್ಧಗಳು, ಕರಾವಳಿಯ ಸಂಸ್ಕೃತಿ, ಭಾರತದ ಸ್ವಾತಂತ್ರ್ಯ ಹೋರಾಟ, ವಾಸ್ಕೋಡಗಾಮ, ಕೊಲಂಬಸ್ ಎಲ್ಲಾವನ್ನು ಒಂದೇ ಕಾದಂಬರಿಯಲ್ಲಿ ತನ್ನೊಳಗೆ ಹಿಡಿದಿಡುವ ಈ ಪುಸ್ತಕವನ್ನು ಯಾವುದೊ ಒಂದು ಪ್ರಕಾರಕ್ಕೆ ಸೀಮಿತಗೊಳಿಸಿದರೆ ಅದು ಪಕ್ಷಪಾತವಾಗುತ್ತದೆ. ಈ ಪುಸ್ತಕ ಓದಿದ ಓದುಗರು ಈ ಮಾತಿಗೆ ಸಾಕ್ಷಿಯಾಗುತ್ತಾರೆ.
ಅಂದ ಹಾಗೆ ಮಮತೆಯನ್ನು ಸ್ಪುರಿಸುವ ಕಾಸರಗೋಡಿನ ರೈಗಳ ಪಾತ್ರ ನನಗೆ ತುಂಬಾ ಹಿಡಿಸಿತು. ಲೇಖಕರ ಮೊದಲ ಪುಸ್ತಕವಿದು. ಶುಭವಾಗಲಿ!
ಸತ್ಪತೆ ಕೌಸಲ್ಯಪುತ್ರ
ಏರೋನಾಟಿಕಲ್ ಇಂಜಿನಿಯರ್ (ಮೆಲ್ಬೋರ್ನ್, ಆಸ್ಟ್ರೇಲಿಯಾ)
ಲೇಖಕರೊಂದಿಗೆ ಮಾತುಕತೆ: https://youtu.be/ws9M-8d1_lY
Share
Subscribe to our emails
Subscribe to our mailing list for insider news, product launches, and more.