Santosh Kumar Mehandele
ವಿಕ್ರಮಾದಿತ್ಯ
ವಿಕ್ರಮಾದಿತ್ಯ
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 384
Type - Paperback
Couldn't load pickup availability
'ಪಂಚೆ ಇಲ್ಲದೇ ಮಲಗಿಯೇನು; ಖಡ್ಗ ಇಲ್ಲದೇ ವಿಶ್ರಮಿಸಲಾರೆ' ಎನ್ನುವ ಮೇಘಚಾರ್ಯರ ಅದ್ವಿತೀಯ ಬದ್ಧತೆ, ರಾಜಕೀಯವನ್ನು, ನಮ್ಮ ಕಾಲಘಟದ ಗಮನಾರ್ಹ ಕಾದಂಬರಿಕಾರ ಸಂತೋಷಕುಮಾರ ಮೆಹೆಂದಳೆಯವರು ಕಟ್ಟಿಕೊಡುತ್ತಾರೆ. ಐತಿಹಾಸಿಕ ಕಾದಂಬರಿಯನ್ನು 'ಕಾಲಯಾನದ ಕಲೆ' ಸಿದ್ದಿಸಿದವರು ಮಾತ್ರ ಮನೋಜ್ಞವಾಗಿ, ವಸ್ತುನಿಷ್ಟವಾಗಿ, ವರ್ತಮಾನದಲ್ಲಿ ಕುಳಿತು ಭೂತವನ್ನು ಕರಾರುವಾಕ್ಕಾಗಿ ಕಲ್ಪಿಸಿಕೊಳ್ಳುತ್ತ ಆಗಿನ ಭೂಗೋಲ, ಶೈಲಿ, ಸಂಪರ್ಕ, ಯುದ್ಧಕಲೆ, ವ್ಯೂಹ ರಚನೆಗಳನ್ನೆಲ್ಲ ದಾಖಲಿಸುವುದು ನಿಖರ ಅಧ್ಯಯನಶೀಲತೆಯಿಂದ ಮಾತ್ರ ಸಾಧ್ಯ.
'ಅತ್ತ ಇತಿಹಾಸದಲ್ಲಿ ವಿಕ್ರಮಾದಿತ್ಯ ಜಯಭೇರಿ ಬಾರಿಸುತ್ತಾನೆ. ಇತ್ತ ವರ್ತಮಾನದಲ್ಲಿ ಸಂತೋಷಕುಮಾರ ಮೆಹೆಂದಳೆ ಗೆಲ್ಲುತ್ತಾರೆ' ಹಾಗಾಗೇ 'ಪುಸ್ತಕ ಇಷ್ಟವಾಗದಿದ್ದರೆ ಹಣ ಮರಳಿಸುವ ಘೋಷಣೆ ಮೆಹೆಂದಳೆಯವರದ್ದು'
ಡಾ. ಶಿವಾನಂದ ಕುಬಸದ
ಸಾಹಿತಿಗಳು ಮತ್ತು ಶಸ್ತ್ರ ಚಿಕಿತ್ಸಕರು
ವಾತಾಪಿಯ ಎರಡನೇ ಭಾಗ ವಿಕ್ರಮಾದಿತ್ಯನ ರೂಪದಲ್ಲಿ ಪ್ರಕಟಣಾಪೂರ್ವ ಓದಿಗೆ ಕೂಲಂಕಶವಾಗಿ ಓದಿಗೆ ದಕ್ಕಿತು. ಕೈತಪ್ಪಿದ್ದ ಸಾಮ್ರಾಜ್ಯವನ್ನು ಪುನಃ ಕಟ್ಟಿದ್ದು ಮಾತ್ರವಲ್ಲದೆ, ಮತ್ತೊಂದು ಉತ್ಕರ್ಷಕ್ಕೆ ಕೊಂಡೊಯ್ದ ಸಾಹಸಗಾಥೆ.
ಅನ್ವೇಷಣೆಯಲ್ಲಿ ಸಿಕ್ಕಿದ ವಿರಳ ಸಾಕ್ಷ್ಯಗಳನ್ನು ಬಳಸಿ ಕಲ್ಪನೆಯ ವಿಸ್ತಾರದಡಿಯಲ್ಲಿ ಬೆಳೆದ ವಿಕ್ರಮಾದಿತ್ಯನ ಪ್ರಯತ್ನ, ಸಾಫಲ್ಯದ ಕಥಾನಕವಿದು. ನೇರ ನಿರೂಪಣೆಯ ವಿಧಾನವನ್ನು ಅಳವಡಿಸಿರುವ ಕಾರಣ ಓದು ಸರಳವಾಗಿ ಮುಂದುವರೆಯುತ್ತದೆ.
ಡಾ. ಸುದರ್ಶನ ರಾವ್. ಕೆನಡಾ
ವೈಜಯಂತಿಪುರ, ವಾತಾಪಿ ಮುಂತಾದ ಯಶಸ್ವೀ ಕಾದಂಬರಿಗಳಂತೆ ಇನ್ನೊಂದು ಸೊಗಸಾದ ಚಾರಿತ್ರಿಕ ಕಾದಂಬರಿಯನ್ನು ಸಾಕಷ್ಟು ಅಧ್ಯಯನ, ಸಂಶೋಧನೆ ಮತ್ತು ಕ್ಷೇತ್ರಕಾರ್ಯಗಳ ಮೂಲಕ ಪುಲಕೇಶಿಯ ಪುತ್ರ ವಿಕ್ರಮಾದಿತ್ಯನ ಕುರಿತು ಬೆಳಕು ಚೆಲ್ಲುತ್ತಿದ್ದೀರಿ.
ಐತಿಹಾಸಿಕ ಕಾದಂಬರಿಗಳ ರಚನೆಯಲ್ಲಿ ಕುದುರಿದ ಕೈ ನಿಮ್ಮದು. ಕುತೂಹಲ ಹುಟ್ಟಿಸುತ್ತ ಸಾಗುವ ಕಾದಂಬರಿ, ಪೆರವಲನಲ್ಲೂರಿನ ಕದನದಲ್ಲಿ ವಿಕ್ರಮಾದಿತ್ಯನ ಸೈನ್ಯ ಪಲ್ಲವರ ಸಂಘಟಿತ ಸೈನ್ಯವನ್ನು ಸೋಲಿಸುವ ಮೂಲಕ ಮೂರು ಶರಧಿಗಳ ಒಡೆಯನಾಗುವ ಕಥನವನ್ನು ರೋಚಕವಾಗಿ ಕಟ್ಟಿ ಕೊಟ್ಟಿದ್ದೀರಿ. ಪ್ರತಿಭೆ, ಪರಿಶ್ರಮಗಳ ಈ ಪ್ರಯತ್ನಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ.
ಡಾ. ಗಜಾನನ ಶರ್ಮ
ಖ್ಯಾತ ಕಾದಂಬರಿಕಾರರು
Share

Subscribe to our emails
Subscribe to our mailing list for insider news, product launches, and more.