Skip to product information
1 of 2

G. V. Nirmala, Dr. S. Sudha

ವಿಜ್ಞಾನ ಲೋಕದ ಧ್ರುವತಾರೆಗಳು

ವಿಜ್ಞಾನ ಲೋಕದ ಧ್ರುವತಾರೆಗಳು

Publisher - ಸ್ನೇಹ ಬುಕ್ ಹೌಸ್

Regular price Rs. 275.00
Regular price Rs. 275.00 Sale price Rs. 275.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 231

Type - Paperback

Gift Wrap
Gift Wrap Rs. 15.00

ಇದು ಕರ್ನಾಟಕದ ಮುವ್ವತ್ತಮೂರು ವಿಜ್ಞಾನಿಗಳ ಮಾಹಿತಿಗಳನ್ನುಳ್ಳ ಪುಸ್ತಕ. ಇವರೆಲ್ಲರೂ ದೇಶದ ಔದ್ಯಮಿಕ ಹಾಗೂ ವೈಜ್ಞಾನಿಕ ಕ್ಷೇತ್ರಗಳಿಗೆ ದೊಡ್ಡ ಕೊಡುಗೆಗಳನ್ನು ಕೊಟ್ಟಿದ್ದಾರೆ. ಅವರ ಕಾರ್ಯಗಳ, ಸಂಶೋಧನೆಗಳ ಬಗ್ಗೆ ನಾವು ತಿಳಿದುಕೊಂಡಾಗ ಧನ್ಯತಾಭಾವವು ಮೂಡುತ್ತದೆ.

ಈ ಪುಸ್ತಕವನ್ನು ಪರಿಶೀಲಿಸುವ ಹಿರಿಯರು ತಮ್ಮ ಮನೆಯಲ್ಲಿರುವ ಕಿರಿಯರ ಬಳಿ ಇದನ್ನು ಓದಿಸಲೇಬೇಕು. ಇದಕ್ಕೆ ಮೊದಲನೆಯ ಕಾರಣ: ಕಿರಿಯರಿಗೆ ತಾವೂ ಹೀಗೆ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂಬ ಪ್ರಭಾವವಾಗುವುದು. ಎರಡನೆಯದು: ಅಪ್ಪಟ ವಿಜ್ಞಾನದ ವಿಷಯಗಳಲ್ಲದೆ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಲಿತವರೂ ವೈಜ್ಞಾನಿಕ ಸಂಶೋಧನೆಗಳಲ್ಲಿ ತೊಡಗಬಹುದು ಎಂದೂ ಮನದಟ್ಟಾಗುವುದು.

ಔದ್ಯಮಿಕ ಕ್ಷೇತ್ರದಲ್ಲಿ ಪ್ರಪಂಚವೇ ನಿಬ್ಬೆರಗಾಗುವಂತೆ ದಾಪುಗಾಲು ಹಾಕುತ್ತಿರುವ ನಮ್ಮ ದೇಶದ ಆ ಕ್ಷೇತ್ರಕ್ಕೆ ಪೂರಕವಾಗಿ ಸಂಶೋಧನಾ ಕ್ಷೇತ್ರವು ಬಹಳಷ್ಟು ಬೆಳೆಯಬೇಕು. ಅಂದರೆ ಸಾವಿರಾರು ಸಂಖ್ಯೆಯ ಯುವವಿಜ್ಞಾನಿಗಳು ನಮಗೆ ಬೇಕು. ಅಂಥ ಅನೇಕರಿಗೆ ಈ ಪುಸ್ತಕವು ಉತ್ತೇಜನ ನೀಡುತ್ತದೆ.

ಇದರ ಲೇಖಕಿಯರಾದ ಶ್ರೀಮತಿ ಜಿ. ವಿ. ನಿರ್ಮಲ ಮತ್ತು ಡಾ. ಎಸ್. ಸುಧಾ ಅವರನ್ನು ನಾನು ಅಭಿನಂದಿಸುತ್ತೇನೆ.

-ಜಿ.ವಿ.ಅರುಣ
ಸಾಹಿತಿಗಳು
ವಿಶ್ರಾಂತ ಮಹಾ ಪ್ರಧಾನ ಪ್ರಬಂಧಕರು
ಮೆಕಾನ್ ಎಂಟೆಡ್

View full details