Skip to product information
1 of 2

Dr. Naga H. Hubli

ವಿದ್ಯಾವಂತ ವೇಶ್ಯೆಯ ಆತ್ಮಕಥೆ

ವಿದ್ಯಾವಂತ ವೇಶ್ಯೆಯ ಆತ್ಮಕಥೆ

Publisher - ಛಂದ ಪ್ರಕಾಶನ

Regular price Rs. 240.00
Regular price Rs. 240.00 Sale price Rs. 240.00
Sale Sold out
Shipping calculated at checkout.

- Free Shipping Above ₹300

- Cash on Delivery (COD) Available

Pages - 186

Type - Paperback

ಈ ಆತ್ಮಕಥೆ ಓದುಗರನ್ನು ವಿಚಲಿತಗೊಳಿಸುತ್ತದೆ. ಸಿರಿವಂತ ಮನೆತನದ ಹುಡುಗಿ ಮಾನದಾ, ಬಾಳಿನ ವಿಚಿತ್ರ ಸನ್ನಿವೇಶದ ಸುಳಿಗೆ ಸಿಕ್ಕು ವೇಶ್ಯಾವೃತ್ತಿಗೆ ಇಳಿದ ಕಥನವಿದು. ಈಕೆಯ ಸಾರ್ವಜನಿಕ ಬದುಕು ಬೆಂಗಳೂರು ನಾಗರತ್ನಮ್ಮ ಅವರ ಧೀಮಂತ ಬದುಕನ್ನೂ, ಕಾರಂತರ 'ಮೈಮನಗಳ ಸುಳಿಯಲ್ಲಿ' ಕಾದಂಬರಿಯ ಮಂಜುಳೆಯ ವೈಯಕ್ತಿಕ ತೊಳಲಾಟದ ಬದುಕನ್ನೂ ನೆನಪಿಸುತ್ತದೆ. ಆದರೆ ಮಾನದಾ, ವೇಶ್ಯಾಜೀವನವು ನೈತಿಕವಾಗಿ ಶಪಿತ ಬದುಕೆಂದೂ ಅದರಿಂದ ಮಹಿಳೆಯರು ಹೊರಬರಬೇಕೆಂದೂ ಹೋರಾಡಿದವಳು; ಮಂಜುಳೆಯು ಗಂಡಾಳಿಕೆಯ ಕೌಟುಂಬಿಕ ವ್ಯವಸ್ಥೆಯಲ್ಲಿರುವ ಮಹಿಳೆ ಸ್ವಾತಂತ್ರ್ಯಹೀನ ಬದುಕು ನಡೆಸುತ್ತಿರುವುದನ್ನೂ ಕಾಣಿಸಬಲ್ಲವಳು. ಮಾನದಾಳ ವೈಯಕ್ತಿಕ ಬಾಳಿನ ಜತೆಗೆ ಹಲವು ಚಾರಿತ್ರಿಕ ಕಥನಗಳೂ ಹೆಣಿಗೆಗೊಂಡಿವೆ.

ಈಕೆ ಟ್ಯಾಗೋರ್, ಗಾಂಧಿ, ಚಿತ್ತರಂಜನ ದಾಸ್ ಮುಂತಾದ ರಾಷ್ಟ್ರನಾಯಕರ ಜತೆ ಪರೋಕ್ಷ ಒಡನಾಟವಿದ್ದ ಮಹಿಳೆ. ಇಲ್ಲಿ 20ನೇ ಶತಮಾನದ ಮೊದಲ ಘಟ್ಟದ ಬಂಗಾಳಿ ಕುಲೀನರ ಜೀವನಕ್ರಮ, ಅವರ ಪಾಶ್ಚಿಮಾತ್ಯ ಜೀವನಶೈಲಿಯ ಚಿತ್ರಣಗಳಿವೆ; ವೇಶ್ಯಾವೃತ್ತಿ ಪಾನನಿಷೇಧ ಮುಂತಾದ ಸಮಾಜ ಸುಧಾರಣ ಚಳವಳಿಗಳ ಚಿತ್ರಗಳಿವೆ; ಭಾರತದ ಸ್ವಾತಂತ್ರ್ಯ ಹೋರಾಟದ ಚಿತ್ರಗಳಿವೆ. ಈ ಎರಡೂ ಆಂದೋಲನಗಳು ಎಂತೆಂತಹ ಅಜ್ಞಾತ ಮತ್ತು ವೈರುದ್ಧ್ಯಕರ ಧಾರೆಗಳನ್ನು ಒಳಗೊಂಡಿದ್ದವು ಎಂಬುದರ ಚಿತ್ರಣವು ದಂಗುಬಡಿಸುತ್ತದೆ.

ಯಾವ ಸೋಗೂ ಇಲ್ಲದೆ ತನ್ನ ಮುಗ್ಧತೆ, ಕಾಮುಕತೆ, ಧೈರ್ಯ, ಚಾಲಾಕಿತನ, ಔದಾರ್ಯಗಳನ್ನು ಚಿತ್ರಿಸುವ ಈ ಕಥನವು ಓದುಗರಲ್ಲಿ ಏಕಕಾಲಕ್ಕೆ ಅನುಭೂತಿ, ಗೌರವ, ಸಂಕಟವನ್ನು ಹುಟ್ಟಿಸಬಲ್ಲದು. ಅದ್ಭುತ ಚಿತ್ರಕ ಶಕ್ತಿಯುಳ್ಳ ಇದನ್ನು ಟ್ಯಾಗೋರರ, ಶರಚ್ಚಂದ್ರರ ಕಾದಂಬರಿಗಳಂತೆ ಓದಬಹುದು. ಕನ್ನಡದಲ್ಲಿ ಇಂತಹ ಆತ್ಮಕಥೆಗಳಿಲ್ಲ.

-ಡಾ. ರಹಮತ್ ತರೀಕೆರೆ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)