Skip to product information
1 of 1

B. M. Rohini

ವೇಶ್ಯಾವಾಟಿಕೆಯ ಕಥೆ - ವ್ಯಥೆ

ವೇಶ್ಯಾವಾಟಿಕೆಯ ಕಥೆ - ವ್ಯಥೆ

Publisher - ನವಕರ್ನಾಟಕ ಪ್ರಕಾಶನ

Regular price Rs. 275.00
Regular price Rs. 275.00 Sale price Rs. 275.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 240

Type - Paperback

Gift Wrap
Gift Wrap Rs. 15.00
ಈ ಅಧ್ಯಯನವನ್ನು ಕೈಗೊಳ್ಳಬೇಕೆಂದು ಯಾಕೆ ಮನಸ್ಸು ಮಾಡಿದೆ ಎಂಬುದಕ್ಕೂ ಕಾರಣವಿದೆ. ನನ್ನ ನೆರೆಮನೆಯಲ್ಲಿರುವ ನನಗೆ ತೀರಾ ಆತ್ಮೀಯರಾದ ಮಹಿಳೆಯೊಬ್ಬರು ಈ ವೃತ್ತಿಯಲ್ಲಿದ್ದುಕೊಂಡು ದೊಡ್ಡ ನಗರದಲ್ಲಿ ದಂಧೆ ನಡೆಸುತ್ತಿದ್ದರು. ವರ್ಷಕ್ಕೊಮ್ಮೆಯೋ ಎರಡು ವರ್ಷಕ್ಕೊಮ್ಮೆಯೋ ಊರಿಗೆ ಬಂದು ಮರಳುವಾಗ ಇಲ್ಲಿಂದ ಹೆಣ್ಣುಮಕ್ಕಳನ್ನು ಕರೆದೊಯ್ಯುತ್ತಿದ್ದರು. ಊರಿಗೆ ಬರುವಾಗ ಯಾವಾಗಲೂ ವಿಮಾನದಲ್ಲೇ, ಮರಳುವಾಗ ಕಾರಲ್ಲೇ ಅವರ ಪ್ರಯಾಣ. ಅಂತಹ ಒಂದು ಪ್ರಯಾಣದಲ್ಲಿ ಅವರು ಪೊಲೀಸರಿಗೆ ಸಿಕ್ಕಿಬಿದ್ದು, ಕೇಸ್‌ ಆಗಿ ಕೆಲವು ತಿಂಗಳುಗಳ ಕಾಲ ಬಂಧನದಲ್ಲಿದ್ದು ಹೊರ ಬಂದರು. ಆ ಸಮಯದಲ್ಲಿ ಅವರು ನನ್ನಲ್ಲಿ ಮನಬಿಚ್ಚಿ ಮಾತನಾಡಿದರು. ಅವರ ಕರುಣಕತೆಯನ್ನು ಹೇಳಿಕೊಂಡರು.

ಈಗ 2020ರಲ್ಲಿ ನಾನು ಮತ್ತೆ ಈ ವೃತ್ತಿನಿರತ ಮಹಿಳೆಯರ ಕುರಿತು ಅಧ್ಯಯನ ಮಾಡಿ ಒಂದಷ್ಟು ಮಾಹಿತಿಗಳನ್ನು ಸಂಗ್ರಹಿಸತೊಡಗಿದೆ.

ಪೊಲೀಸರಿಂದ ಈ ವೃತ್ತಿನಿರತರು ತುಂಬಾ ಹಿಂಸೆ ಅನುಭವಿಸುತ್ತಿದ್ದರು. ಕಾಲಿನ ಚೈನನ್ನೂ ಬಿಡದೆ ಸುಲಿಗೆ ಮಾಡಿದ ಕ್ರೌರ್ಯದ ಕತೆಯನ್ನು ಕಣ್ಣೀರು ತುಂಬಿಕೊಂಡು ಅವರು ಹೇಳಿದ್ದಕ್ಕೆ ನಾನು ಸಾಕ್ಷಿಯಾಗಿದ್ದೆ. ಕೆಲವು ಮಹಿಳೆಯರು ಹೇಳಿದ ಕತೆಗಳು ಹೃದಯವಿದ್ರಾವಕವಾಗಿದ್ದುವು. ಸಮಾಜ ತಮ್ಮವರೆಂದು ನಂಬಿದ ಬಂಧುಗಳು ಇಷ್ಟೊಂದು ಕ್ರೂರವಾಗಿ ನಡೆಸಿಕೊಳ್ಳಲು ಸಾಧ್ಯವೇ ಎಂದು ಆಶ್ಚರ್ಯ ಪಡುವಂತಾಗಿತ್ತು. ಈ ದಾರುಣಕತೆಗಳನ್ನು ಕೇಳಿ ಒಂದು ಕ್ಷಣ ಸ್ಪಂದಿಸುವ ಹೃದಯವಂತಿಕೆಯುಳ್ಳ ಸಮಾಜವನ್ನು ಈಗ ನಿರ್ಮಿಸಲು ಸಾಧ್ಯವೇ? ಕಳೆದ ಏಳೆಂಟು ವರ್ಷಗಳಿಂದೀಚೆಗೆ ನಾನು ಕೇಳಿದ ಈ ವೃತ್ತಿಯ ಕುರಿತಾದ ಸಂಗತಿಗಳು ಯೋಚಿಸುವಂತೆ ಮಾಡಿತು.

-ಬಿ.ಎಂ. ರೋಹಿಣಿ
View full details