Vasudhendra
ವರ್ಣಮಯ
ವರ್ಣಮಯ
Publisher - ಛಂದ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 188
Type - Paperback
Couldn't load pickup availability
ವರ್ಣಮಯ
ಬಹು ಆಸ್ತಿಕ ಮನೋಬಾವ ಹೊಂದಿರುವ ಗೌರಮ್ಮ ತನಗೆ ಏನೇ ಸಂಕಷ್ಟ ಎಂದರೂ ಯಾವುದೋ ದೇವರಿಗೆ ಹರಕೆ ಹೊತ್ತು ಬಿಡುತ್ತಾಳೆ. ಮಂತ್ರಾಲಯದ ರಾಘವೇಂದ್ರ, ಬಂಗಾರದ ಗುಡಿಯ ಲಕ್ಷ್ಮಿ, ಗುರುವಾಯೂರ ಕೃಷ್ಣ- ಯಾರಾದರೊಬ್ಬ ದೇವರು ಆಕೆಯ ಕಷ್ಟಕ್ಕೆ -ಸಹಾಯ ಮಾಡುತ್ತಾರೆ, ಒಂದಿಷ್ಟು ದಿನ "ಆ ದೇವರು ಬಹಳ ಸತ್ಯ ಅಣ್ಣ" ಎಂದು ಹೇಳುತ್ತಿರುತ್ತಾಳೆ. ಅನಂತರ ಬೇರೊಬ್ಬ ದೇವರಿಗೆ ಒಲಿಯುತ್ತಾಳೆ! ಒಮ್ಮೆಯಂತೂ ಸ್ವಾದಿಯ ವಾದಿರಾಜರ ಪೋಟೋ ಪೂಜೆ ಮಾಡಿದರೆ ಕಷ್ಟ ಪರಿಹಾರವಾಗುತ್ತದೆಂದು ಯಾರೋ ಆಕೆಗೆ ಹೇಳಿಬಿಟ್ಟಿದ್ದರು. ಈ ಯತಿಗಳ ಹೆಸರೇ ಆಕೆಗೆ ಗೊತ್ತಿಲ್ಲ ಉಚ್ಚರಿಸಲು ಪರಿಚಿತ ಹೆಸರೂ ಅಲ್ಲ "ತಲೆ ಮೇಲೆ ಪುಟ್ಟಿ ಇಟ್ಟುಗೊಂಡು ಕುದುರೆಗೆ ಏನೋ ತಿನ್ನಿಸ್ತಾರೆ ನೋಡಣ್ಣಾ, ಆ ದೇವರ ಪೋಟೋ ಬೇಕಿತ್ತು" ಅಂತ ನನಗೆ ವಿವರಿಸಿದ್ದಳು. ನಾನು ಗೂಗಲ್ಲಿನಲ್ಲಿ ಹುಡುಕಿ ವಾದಿರಾಜರ ಚಿತ್ರವನ್ನು ತೋರಿಸಿ "ಇದಾ?" ಎಂದು ಅಚ್ಚರಿಯಿಂದ ಕೇಳಿದ್ದೆ “ಹೌದು" ಎಂದು ಮುಖವರಳಿಸಿದ್ದಳು. "ಇದು ನಮ್ಮ ಜನರ ದೇವರು ನೀನು ಏನು ಮಾಡ್ತಿ ಗೌರಮ್ಮ?" ಎಂದರೆ, "ಯಾವ ಜನದ ದೇವರಾದ್ರೆ ಏನಣ್ಣ? ಒಳ್ಳೇದು ಮಾಡ್ತದೆ ಅಂದ್ರೆ ಆಯ್ತು, ಪೂಜೆ ಮಾಡಬಹುದು" ಎಂದು ಸೊಗಸಾದ ಮಾತನ್ನು ಹೇಳಿದ್ದಳು.
Share

Subscribe to our emails
Subscribe to our mailing list for insider news, product launches, and more.