Skip to product information
1 of 2

Mahesh Putturu

ವರ್ಣ

ವರ್ಣ

Publisher -

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 124

Type - Paperback

ಗ್ರಾಮದ ಬಹುಪಾಲು ಗಂಡಸರು, ಹೆಂಗಸರು, ತರುಣ - ತರುಣಿಯರು, ಮಕ್ಕಳು ಇವರ ವಿದ್ಯಾರ್ಥಿಗಳೇ, ಹಾಗಾಗಿ ಇಡೀ ಗ್ರಾಮಕ್ಕೆ ಇವರು ರಾಜಗುರುವಿನಂತೆ, ಒಂದರ್ಥದಲ್ಲಿ ಸ್ವರ್ಗಕ್ಕೆ ಬೃಹಸ್ಪತಿಗಳು ಇದ್ದಂತೆ. ಅದೆಷ್ಟೋ ಆಣೆ ಪ್ರಮಾಣಗಳು, ಜಗಳ ಕಾದಾಟಗಳು, ದಾಯಾದಿ ಭೂಮಿ ವೈಷಮ್ಯಗಳು 'ಅಣ್ಣೆರ್‌'ನ ಅಂಗಳದಲ್ಲಿ ಸುಖಾಂತ್ಯ ಕಂಡದ್ದಿದೆ.

ಭೋಜ ಮೊಬೈಲ್ ತೆಗೆದು ಕಿಸೆಯಲ್ಲಿರಿಸಿ, ಬೈಕ್ ಸ್ಟಾರ್ಟ್ ಮಾಡಿ ಭಟ್ರ ಮನೆ 'ಜಪ್ಪ ತೋಟದ' ಕಡೆ ಬೈಕ್ ಚಲಾಯಿಸಿದ. ಬೆಳಗಿನ ತಿಂಡಿ ಮಾಡಲಿಲ್ಲವೆಂಬುದೂ ತಿಳಿಯದಷ್ಟು ಯೋಚನಾ ಮಗ್ನನಾದ, ಮುಖ ಕಳೆಗುಂದಿತು, ಹಣೆಯಲ್ಲಿ ಚಿಂತೆಯ ಗೆರೆ. ಏನೋ ಭ್ರಾಂತಿಗೆ ಒಳಗಾದವನಂತೆ, ಯಾಂತ್ರಿಕವಾಗಿ ಬೈಕ್ ಹೊಡೆಯುತ್ತಿದ್ದ. ಭಟ್ರ ಮನೆಯ ಮರ ಹೋದದಕ್ಕೆ ಇವನಿಗೆ ಇಷ್ಟೊಂದು ಚಿಂತೆ ಯಾಕೋ ದೇವರೇ ಬಲ್ಲ....

ಅಷ್ಟರಲ್ಲಿ ಓರ್ವಾತ ಪ್ರಾಂಶುಪಾಲರನ್ನು ಕಂಡು "ಪ್ರಿನ್ಸಿಪಾಲ್..... ಪ್ರಿನ್ಸಿಪಾಲ್" ಎನ್ನುತ್ತಾ ಹೊರಗೆ ಓಡಿಬಂದ. ಆತನ ಓಟ ಕಂಡು ಗಲಭೆ ನಿರತ ಎಲ್ಲರೂ ಕಾಲೇಜಿನಿಂದ ಹೊರಗೆ ಓಟಕಿತ್ತರು. ಪ್ರಾಂಶುಪಾಲರು ಹೊರಗೆ ಬರುತ್ತಲೇ ದೂರದಲ್ಲಿ ಕೆಲವರು ಓಡುವುದಷ್ಟೇ ಕಾಣುತ್ತಿತ್ತು. ರಣಾಂಗಣದಲ್ಲಿ ಕೇವಲ ಆರು ಜನರಷ್ಟೇ ಉಳಿದಿದ್ದರು ಅದರಲ್ಲಿ ಒಬ್ಬ ಶೇಷ, ಪ್ರಾಂಶುಪಾಲರು ದಿಗ್ಬ್ರಮೆಗೆ ಒಳಗಾಗಿದ್ದಾರೆ ಎಲ್ಲವೂ ಛಿದ್ರ ಛಿದ್ರವಾಗಿದೆ. 

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)