Srinidhi Publications
Publisher -
Regular price
Rs. 225.00
Regular price
Rs. 225.00
Sale price
Rs. 225.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಪುರಾಣಗಳು ಭಾರತದ ಸರ್ವೋತ್ಕೃಷ್ಟ ನಿಧಿಗಳಾಗಿವೆ. ಪ್ರಾಚೀನ ಕಾಲದಿಂದಲೂ ಭಾರತವರ್ಷದಲ್ಲಿ ಪುರಾಣಗಳ ಬಹಳ ಆದರದ ಸಹಿತ ಪಠನ, ಶ್ರವಣ, ಮನನ ಮತ್ತು ಸಂಶೋಧನೆಗಳು ನಡೆಯುತ್ತಲೇ ಇವೆ. ಭಾರತೀಯರ ಮನಸ್ಸಿನಲ್ಲಿ ಭಗವದ್ಭಕ್ತಿ, ಜ್ಞಾನ, ವೈರಾಗ್ಯ, ಸದಾಚಾರ ಹಾಗೂ ಧರ್ಮಪರಾಯಣತೆಯನ್ನು ದೃಢತಾಪೂರ್ವಕವಾಗಿ ಪ್ರತಿಷ್ಠಿತಗೊಳಿಸಲು ಹಾಗೂ ಮಾನವ ಜೀವನದ ಅಂತಿಮ ಗುರಿ ಮೋಕ್ಷ ಸಾಧನದ ಕಡೆ ಪ್ರೇರೇಪಿಸುವ ಶ್ರೇಯಸ್ಸು ವಾಸ್ತವದಲ್ಲಿ ಪುರಾಣಗಳಿಗೆ ಸಲ್ಲುತ್ತದೆ. ವೇದಾದಿ ಶಾಸ್ತ್ರಗಳಲ್ಲಿನ ಗೂಢಾತಿಗೂಢ ಜ್ಞಾನ ತತ್ತ್ವಗಳು ಹಾಗೂ ರಹಸ್ಯಗಳನ್ನು ಸರಳ, ಸ್ವಾರಸ್ಯಕರ ಮತ್ತು ಮನೋಹರವಾದ ವರ್ಣನಾ ಶೈಲಿಯಲ್ಲಿ, ಸಾಮಾನ್ಯರಿಗೆ ದೊರೆಯುವಂತೆ ಮಾಡುವುದೇ ಪುರಾಣಗಳ ಅಪೂರ್ವ ವಿಶೇಷತೆ, ಆದ್ದರಿಂದಲೇ ಪುರಾಣಗಳಿಗೆ ಭಾರತೀಯ ಸಾಹಿತ್ಯದಲ್ಲಿ ವಿಶಿಷ್ಟ ಸನ್ಮಾನ ಹಾಗೂ ಲೋಕಪ್ರಿಯತೆ ದೊರೆತಿದೆ.
