Skip to product information
1 of 2

Dr. K. S. Narayanacharya

ವನವಾಸಾಂತ್ಯ

ವನವಾಸಾಂತ್ಯ

Publisher - Sahithya Prakashana

Regular price Rs. 430.00
Regular price Rs. 430.00 Sale price Rs. 430.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 400

Type - Hardcover

Gift Wrap
Gift Wrap Rs. 15.00
Gift Box
Gift Box Rs. 225.00

"ಕೆಲವರು ನಾನು ಬರೆಯುತ್ತಿರುವುದು 'ಕಾದಂಬರಿಯೇ ಅಲ್ಲ' ಎಂದು ಹೇಳುತ್ತಿದ್ದಾರೆ! ಹಾಗೇ ಆಗಲಿ, ಮೂಲಕೃತಿಯನ್ನು ರೋಚಕ ಕಥಾನಕ ರೂಪದಲ್ಲಿ ಹೀಗೆ ಬಿಡಿಸಿ, ಬಡಿಸಿದರೆ ಓದುಗರಿಗೆ ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಶ್ರದ್ಧೆಯೂ, ಮೂಲ ಗ್ರಂಥಗಳ 'ತಿರುಚದ' (Matter of fact) ರೀತಿಯ ಜೀವನ ಚಿತ್ರಣವೂ ದೊರೆಯಲಿ ಎಂಬುದು ಆಶಯ. ವ್ಯಾಸರು ಎಲ್ಲಿ ಏನೇನನ್ನು ನನ್ನಂಥವರ ಕಲ್ಪನೆಗೆ, ವಿನ್ಯಾಸಕ್ಕೆ ಬಿಟ್ಟಿದ್ದಾರೆಯೋ, ಅಲ್ಲಿ ನಾನು ಕಲ್ಪನೆಯ ಕೊಂಡಿಗಳನ್ನು ಜೋಡಿಸಿದ್ದೇನೆ. ಮೂಲವನ್ನು ಓದದವರಿಗೆ ಇವು ಗೋಚರಿಸುವುದಿಲ್ಲ. ನಾನು ಭಾಷಾಂತರಕಾರನೋ, ವಿಕೃತ ಮನಸ್ಸಿನ ಅತಿರೇಕಿಯೋ, ಭಾರತೀಯ ಸಂಸ್ಕೃತಿಯಲ್ಲಿ ಪೂರ್ವಾಗ್ರಹವುಳ್ಳವನೋ ಅಲ್ಲ. ಪ್ರಾಮಾಣಿಕವಾಗಿ ವ್ಯಾಸಹೃದಯಕ್ಕೆ ಕನ್ನಡಿ ಹಿಡಿಯುವ ಯತ್ನ ಇಲ್ಲಿದೆ.

'ಸಾಹಿತಿ' ಎಂಬ ಶಬ್ದಕ್ಕೆ ಇಂದು ಸೇರಿರುವ ವ್ಯಾಖ್ಯೆ, ವ್ಯಾಪ್ತಿ, ಕಲ್ಪನೆಗಳನ್ನು ನೋಡಿದರೆ ನನ್ನನ್ನು ಈ ಸಾಹಿತಿಗಳ ವರ್ಗಕ್ಕೆ ಸೇರಿಸದಿರುವುದೇ ಕ್ಷೇಮ ಎಂದು ವಿನಂತಿ! If you read carefully, you will see overtones, undertones of comments or interpretations on our modern situations. ಇದು ವ್ಯಾಸರ ಹಿರಿಮೆ. ಅಲ್ಲಿ ಸಾರ್ವಕಾಲಿಕ ಕಣ್ಣು ಇದೆ. ಆ ಕಣ್ಣಿನಲ್ಲಿ ಇಂದಿನ ಶಕುನಿ, ಕರ್ಣ, ದುರ್ಯೋಧನ, ಭೀಷ್ಮಾದಿಗಳನ್ನು ನೀವು ಗುರುತಿಸಲು ಇಲ್ಲಿ ಪ್ರಚೋದನೆ, ಪ್ರೋತ್ಸಾಹ (Orientation of mind) ದೊರೆತರೆ ನಾನು ಬರೆದುದು ಸಾರ್ಥಕ. ಬರೀ ಬೋಳು ಕಥೆಯಲ್ಲ ಮೂಲ ಮಹಾಭಾರತ; ಅದು ನಿತ್ಯಗ್ರಂಥ, ಸತ್ಯಗ್ರಂಥ, ದರ್ಶನಗ್ರಂಥ, ಧರ್ಮಗ್ರಂಥ. ಈ ಎಲ್ಲ ಆಯಾಮಗಳಿಗೂ ಅಪಚಾರವಾಗದಂತೆ, ನನಗೆ ಸಾಧ್ಯವಾದಷ್ಟು ಮೂಲ ರಹಸ್ಯಗಳನ್ನು ಇಲ್ಲಿ ಬಿಚ್ಚಿಟ್ಟಿದ್ದನ್ನು ನೀವು ಮನಗಂಡರೆ ಅದೇ ನನಗೆ ತೃಪ್ತಿ ಎಂದು ನಿವೇದಿಸುತ್ತೇನೆ."

 

- ಕೆ. ಎಸ್. ನಾರಾಯಣಾಚಾರ್ಯ (ಬಿನ್ನಹದಿಂದ)

View full details