Kuvempu
Publisher - ಪುಸ್ತಕ ಪ್ರಕಾಶನ
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಈ ಜನಪ್ರಿಯ ರಾಮಾಯಣದ ಪ್ರಕಟಣೆ ಮಹಾತ್ಮಾ ಗಾಂಧೀಜಿಗೆ ನಿಜವಾಗಿಯೂ ಪ್ರೀತಿಯಾಗುವಂತೆ ಸಲ್ಲಿಸುವ ಶ್ರೇಷ್ಠವಾದ ಕಾಣಿಕೆ. ವಿದ್ಯಾದಾನದಿಂದ ಮನುಷ್ಯಚೇತನಕ್ಕೆ ಒಂದು ಹೊಸ ನಾಲಗೆ ಸೃಷ್ಟಿಯಾಗುತ್ತದೆ; ಅವನ ಬಾಳಿಗೊಂದು ಹೊಸ ಹುಮ್ಮಸ್ಸು ಹುಟ್ಟುತ್ತದೆ. ಆ ಹೊಸ ನಾಲಗೆಯಿಂದ ಅವನು ಅದುವರೆಗೂ ಕಾಣದಿದ್ದ, ಕಾಣಲಾರದಿದ್ದ, ಒಂದು ಹೊಸ ರುಚಿಯನ್ನು ಅನುಭವಿಸಲು ಸಮರ್ಥನಾಗುತ್ತಾನೆ. ಮನಸ್ಸಿನ ಆ ಹೊಸ ಹಸಿವೆ ಒಂದು ಹೊಸ ಆಹಾರವನ್ನು ಅಪೇಕ್ಷಿಸುತ್ತದೆ. ಅನ್ನಮಯದ ಹೊಟ್ಟೆ ಅನ್ನವನ್ನು ಬಯಸುವಂತೆ, ಮನಸ್ಸಿನ ಹಸಿವು ಮನೋಮಯ ಆಹಾರವನ್ನು ಹುಡುಕುತ್ತದೆ. ಹೊಸ ರುಚಿಯನ್ನೂ, ಹೊಸ ಹಸಿವನ್ನೂ ಹುಟ್ಟಿಸುವಾತನು, ಅದಕ್ಕೆ ಅರ್ಹವಾದ ರಸವನ್ನೂ ಅನ್ನವನ್ನೂ ಒದಗಿಸದಿದ್ದರೆ ಲೇಸನಿಸಗಲು ಹೋಗಿ ಕೇಡು ಮಾಡಿದಂತಾಗುತ್ತದೆ. ಏಕೆಂದರೆ ಸವಿಯಬಾರದುದನ್ನು ಸವಿದು, ತಿನ್ನಬಾರದುದನ್ನು ತಿಂದು, ಹೊಸದಾಗಿ ಸಾಕ್ಷರವಾದವನ ಚೇತನ ಮೇಲಕ್ಕೇರುವ ಬದಲು ಕೆಳಕ್ಕಿಳಿದು, ನಾಶವಾಗುವುದರ ಜತೆಗೆ ವಿನಾಶಕರವೂ ಆಗಿ, ರಾಕ್ಷಸವಾಗುವ ಸಂಭವವುಂಟು. ಆದ್ದರಿಂದ ಅಕ್ಷರಪ್ರಚಾರದಷ್ಟೇ ಸಂಸ್ಕೃತಿಯ ಕಲಿಕೆಯು ಮುಖ್ಯವಾಗುತ್ತದೆ. ಆ ದಿಸೆಯಲ್ಲಿ ಅವಶ್ಯಕವೂ, ಅರ್ಹವೂ, ಅನ್ವಿತವೂ, ಆರೋಗ್ಯಕರವೂ ಆಗಿರುವ ಸಾಹಿತ್ಯಸೃಷ್ಟಿ ಕುವೆಂಪು ಅವರಿಂದ ತಮ್ಮ ಮುಂದೆ.
