Dr. D. L. Narasimhachar
Publisher -
- Free Shipping
- Cash on Delivery (COD) Available
Couldn't load pickup availability
ಈ ಮೂಲದಲ್ಲಿರುವ ಕಥೆಗಳು ಒಂದೊಂದೇ ಗಾಹೆಯಲ್ಲಿ ನಿರೂಪಿತವಾಗಿದೆ. ಅವು ಅತಿ ಸಂಕ್ಷಿಪ್ತವಾಗಿದೆ ; ಕಥೆಗಳ ಯಾವ ವಿವರಗಳೂ ಅಲ್ಲಿ ದೊರೆಯುವುದಿಲ್ಲ. ಹರಿಷೇಣನೂ ಕೋಗಳಿಯ ಶಿವಕೋಟಿಯೂ ಈ ಕಥೆಗಳನ್ನು ಸವಿಸ್ತರವಾಗಿಯೂ ಸಾಲಂಕಾರವಾಗಿಯೂ ನಿರೂಪಿಸಿದ್ದಾರೆ. ಹಷೇಣನಿಗಿಂತ ಶಿವಕೋಟಿಯು ಹೆಚ್ಚು ವಿವರಗಳನ್ನು ಕೊಡುತ್ತಾನೆ. ಹರಿಷೇಣನು 'ಅಭಿನಂದನಮುನಿ ಕಥಾನಕ'ವನ್ನು ಅತಿ ಸಂಗ್ರಹವಾಗಿ ೮ ಶ್ಲೋಕಗಳಲ್ಲಿ ಯಾವ ವರ್ಣನೆಗೂ ಹೋಗದ ಸುದ್ದಿಯನ್ನು ತಿಳಿಸುವ ವರದಿಗಾರನಂತೆ ಹೇಳಿದ್ದಾನ. ಇದೇ ಕಥೆ 'ವಡ್ಡಾರಾಧನೆ'ಯಲ್ಲಿ “ಮಹೇಂದ್ರದತ್ತಾಚಾರುಅರ್ ಮೊದಲಾದ ಅಯ್ನೂರ್ವರ್ ರಿಸಿಯರ್ಕಳ ಕಥೆ" ಎಂಬ ಹೆಸರಿನಿಂದ ಸಪರಿಕರವಾಗಿ, ಸರಸವಾಗಿ, ಕುತೂಹಲಕಾರಕವಾಗಿ ಹೃದ್ಯವಾದ ಗದ್ಯದಲ್ಲಿ ಐದು ಪುಟಗಳಲ್ಲಿ ನಿರೂಪಿತವಾಗಿದೆ. ಆದ್ದರಿಂದ ಈ ಇಬ್ಬರು ಕವಿಗಳು ತಮಗೆ ಸಿಕ್ಕ ಮೂಲ ಸಾಮಗ್ರಿಯನ್ನು ತಮಗೆ ಇಷ್ಟ ಬಂದ ಹಾಗೆ ಬಳಸಿಕೊಂಡಿದ್ದಾರೆಂದು ಭಾವಿಸ ಬಹುದು. ಇವರಿಬ್ಬರಿಗೆ ಸಮಾನ ಮೂಲವೊಂದು ಇದ್ದಿತೆಂದೂ ಅದು 'ಭಗವತೀ ಆರಾಧನಾ' ಗ್ರಂಥಕ್ಕೆ ಇದ್ದಿರಬಹುದಾದ ಯಾವುದೋ ಪ್ರಾಕೃತ ವ್ಯಾಖ್ಯಾನವೆಂದೂ ಡಾ. ಆ. ನೇ. ಉಪಾಧ್ಯೆಯವರು ಕೆಲವು ಆಧಾರಗಳ ಮೇಲೆ ಊಹಿಸಿದ್ದಾರೆ. ಇದು ಅತ್ಯಂತ ಸಂಭವನೀಯವೆಂದೂ ಪರಿಗ್ರಾಹೃಯೋಗ್ಯವೆಂದೂ ತೋರುತ್ತದೆ. ಈ ಮೂಲದಲ್ಲಿ ಒಂದೊಂದು ಗಾಹೆಯಲ್ಲೇ ಸೂಚಿತವಾಗಿದ್ದ ಕಥೆಗಳನ್ನು ವ್ಯಾಖ್ಯಾನ ದಲ್ಲಿ ವಿಸ್ತರಿಸಿ ನಿರೂಪಣೆ ಮಾಡಿದ್ದಿತೆಂದು ಹೇಳಬಹುದು. ಈ ವಿಶ್ವತ ಕಥೆಗಳನ್ನು ಕವಿಯ ದೃಷ್ಟಿಯಿಂದ ಹರಿಷೇಣನೂ ಶಿವಕೋಟಿಯೂ ನೋಡಿ ಅವುಗಳ ನಿರೂಪಣೆಯಲ್ಲಿ ತಮ್ಮ ಕೌಶಲ್ಯವನ್ನೂ ಪ್ರತಿಭೆಯನ್ನೂ ಪ್ರಕಾಶಪಡಿಸಿರುವರೆಂದು ತಿಳಿಯ ಬಹುದು. 'ವಡ್ಡಾರಾಧನೆ'ಯ ನಿರೂಪಣೆ, ಸಂನಿವೇಶ ನಿರ್ಮಾಣ, ಪಾತ್ರರಚನೆ, ರಸಾವಿಷ್ಕರಣ, ಗದ್ಯದ ರಮಣೀಯತ, ವಾಕ್ಯಗಳ ವೈವಿಧ್ಯ, ಧ್ವನಿ-ಇವೆಲ್ಲ ಹರಿಷೇಣನ ಕೃತಿಯಲ್ಲಿ ಇರುವುದಕ್ಕಿಂತ ಅಧಿಕ ಪ್ರಮಾಣದಲ್ಲೂ ಗುಣದಲ್ಲೂ 'ವಡ್ಡಾರಾಧನೆ'ಯಲ್ಲಿ ಇವೆಯೆಂದು ಸ್ಥಾಪಿಸಲು ಸಾಧ್ಯವಾಗುತ್ತದೆ. ಈ ತೋಲನಾತ್ಮಕ ದೃಷ್ಟಿಯಿಂದಲೇ ಈ ಕೃತಿಯ ಮೌಲ್ಯವಿಚಾರ ನಡೆಯಬೇಕಾಗಿದೆ.
– ಡಿ ಎಲ್. ನರಸಿಂಹಾಚಾರ್
ಡಿ.ವಿ.ಕೆ. ಮೂರ್ತಿ ಪ್ರಕಾಶನ :: ಮೈಸೂರು
