Dr. B. M. Puttaiah
Publisher -
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ವಡ್ಡಾರಾಧನೆ ನಮ್ಮ ಪ್ರಾಚೀನ ಗದ್ಯ ಪ್ರಕಾರದ ಕಥಾಪರಂಪರೆಯಲ್ಲಿ ಬಹಳ ಮುಖ್ಯವಾದುದದ್ದು. ಸಂಸ್ಕೃತದ ಯಾಜಮಾನ್ಯದ ವಿರುದ್ಧ ಪಾಲಿ, ಪ್ರಾಕೃತ ಮುಂತಾದ ಭಾಷೆಗಳಿಂದ ಪ್ರೇರಣೆ ಪಡೆದು ಕನ್ನಡದ ಸೊಗಡಿನಲ್ಲಿ ಕಟ್ಟಿದ ಮೊದಲ ಕಥಾಗುಚ್ಛ. ಜೈನಧರ್ಮದ ಆಳ ಅಗಲಗಳನ್ನು ಹಾಗೂ ಶಕ್ತಿ ಮತ್ತು ಮಿತಿಗಳನ್ನು ಪರಿಚಯಿಸುತ್ತ, ರಾಜರ, ವಣಿಕ ವರ್ಗದ ಮತ್ತು ಜನಸಾಮಾನ್ಯರ ಬದುಕಿನ ಒಳಹೊರಗನ್ನು ಅತ್ಯಂತ ಸೂಕ್ಷ್ಮವಾಗಿ ಗದ್ಯದಲ್ಲಿ ಮೂಡಿಸಿದ ಮುಖ್ಯ ಕೃತಿ. ಜೈನಧರ್ಮದ ಜನ್ಮಾಂತರಗಳ ನಂಬಿಕೆಯನ್ನು ಭವಾವಳಿಗಳ ಮೂಲಕ ಚಿತ್ರಿಸುತ್ತಾ ಜೀವನದ ಏಳುಬೀಳುಗಳನ್ನು ಕಟ್ಟಿಕೊಟ್ಟಿದೆ. ಈ ಮಹತ್ವದ ಕೃತಿಯನ್ನು ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ. ಪ್ರಸ್ತುತ ಇಲ್ಲಿ ಸಂಕಲಿಸಿರುವ ಲೇಖನಗಳು ವಡ್ಡಾರಾಧನೆಯನ್ನು ಆಧುನಿಕ ಮನೋಧರ್ಮದ ವಿವಿಧ ಜ್ಞಾನಶಿಸ್ತುಗಳ ಮೂಲಕ ಅಧ್ಯಯನ ಮಾಡಿವೆ.
