D S Chougale
ವಾರಸಾ
ವಾರಸಾ
Publisher -
- Free Shipping Above ₹400
- Cash on Delivery (COD) Available*
Pages - 100
Type - Paperback
Couldn't load pickup availability
"ಕತೆಗಾರ ಡಿ.ಎಸ್. ಚೌಗಲೆಯವರ ಕಥಾಸಂಕಲನದೊಳಗಿನ ಕತೆಗಳು, 'ಕಥೆ' ಎಂಬ ಸಾಹಿತ್ಯ ಪ್ರಕಾರದ ಮೂಲ ಸಂರಚನೆಯನ್ನು ಜತನ ಮಾಡುವಂತೆ ಕಾಣುತ್ತವೆ. ಕತೆ ಕಟ್ಟುವಾಗ ಪ್ರಯೋಗ, ಆಧುನಿಕತೆ, ಉತ್ತರ ಆಧುನಿಕತೆ, ಜಾಗತೀಕರಣದಿಂದ ಉದ್ಭವಿಸಿದ ಖಚಿತ ವಾಸ್ತವದಂಥ ಯಾವುದೇ ಒತ್ತಡಕ್ಕೆ ಈಡಾದಂತೆ ಕಾಣುವುದಿಲ್ಲ. ಆಶಯ ಹಾಗೂ ಅದರ ಅಂಗವಾಗಿ ವಿಸ್ತಾರಗೊಳ್ಳುವ ಕಥಾ ಅಂತರ್ಗತ ಆಶಯ — ಇವೆರಡೂ ಬದಿಗಳನ್ನು ಅವರು ನಿಭಾಯಿಸುತ್ತಾ, ತಮ್ಮ ಕತೆಗಳ ವಿನ್ಯಾಸ (Crafting)ವನ್ನು ಕರಾರುವಕ್ಕಾಗಿ ಪೂರ್ಣಗೊಳಿಸುವಂತೆ ಕಾಣುತ್ತಾರೆ.
ಅವರ ಕತೆಗಳಲ್ಲಿ ಅವತರಿಸುವ ಭೂತಕಾಲವು ಇದು ಸ್ವಕಥನೆಗಾಗಿ ಬಾರದೆ, ನವ ಅರ್ಥವ್ಯವಸ್ಥೆಯನ್ನು ಎದುರುಗೊಳ್ಳುವ, ಇದೇ ಮೌಲ್ಯ ವ್ಯವಸ್ಥೆಯು ತಿರಸ್ಕಾರ ಮಾಡಿರುವುದರಿಂದ ಕ್ಷೀಣಿಸುತ್ತ ಸಾಗಿದ 'ಬೇಡರಪ್ಪೋ' ಎಂಬ ನಿರಾಕರಿಸಲ್ಪಟ್ಟ ಜನರ ವರ್ಗದ ಸಮರ್ಥನೆಗೆ ಬರುತ್ತದೆ. ಇಲ್ಲಿ ಕಾಲ್ಪನಿಕ ಸ್ಮರಣೆಗೆ ಕಿಂಚಿತ್ತು ಜಾಗವಿಲ್ಲ. ಚೌಗಲೆಯವರು ಕನ್ನಡದಲ್ಲಿ ಕತೆಗಳನ್ನು ರಚಿಸುತ್ತಿದ್ದರೂ, ಅವರೊಳಗಿನ ಗಡಿಭಾಗದ ವಾಸ್ತವವನ್ನು ಹೇಳುವ ಶೈಲಿಯು ಪ್ರಾಂತೀಯ ಭಾಷಾ ರಚನೆಯ ಸಂದರ್ಭವನ್ನು ಮೀರಿ, ಅದು ಮೂಲ ಬೇರಿಗೆ ಇಳಿಯಲು ಅವಕಾಶ ಕೊಡದಂತೆ ಇರುತ್ತದೆ.
ಕತೆಗಳು ಕನ್ನಡದಲ್ಲಿದ್ದರೂ ಅದರ ಅಂತಿಮ ಸ್ವರವು ಮರಾಠಿಗೆ ಆ ದೃಷ್ಟಿಯಿಂದ ಸರಿಯಾಗಿ ಬಂದು ವಿಸರ್ಜಿತಗೊಳ್ಳುತ್ತದೆ; ಅವರ ಈ ಭಾವನೆಯು ಮಾನವ ಸಮೂಹವನ್ನು ಸಮಗ್ರ ದೃಷ್ಟಿಯಿಂದ ಕಾಣುವಂತಿದೆ. ಈ ದೃಷ್ಟಿಕೋನದಿಂದ ಈ ಕತೆಗಳ ಪರಿಸರವನ್ನು ನೋಡಬಹುದು. ಅದು ಬೆಳಗಾವಿಯಿಂದ ಆರಂಭಗೊಂಡರೂ ಈಚಲಕರಂಜಿ, ಮೀರಜ್, ಜಯಸಿಂಗಪುರದಿಂದ ನೇರ ಮುಂಬೈನ ಕಾಮಾಟಿಪುರಕ್ಕೆ ಬಂದು ತಲುಪುತ್ತದೆ.
ಕನ್ನಡ ಹಾಗೂ ಮರಾಠಿಯ ಅನುಸಂಧಾನದ ಸೇತುವನ್ನು ಪ್ರಜ್ಞಾಪೂರ್ವಕವಾಗಿ ಅಸ್ತಿತ್ವದಲ್ಲಿಡುವ ಡಿ.ಎಸ್. ಚೌಗಲೆಯವರ ಸಾಹಿತ್ಯದ ಪಯಣ ಅತ್ಯಂತ ಗತಿಶೀಲವಾಗಿರಬೇಕು; ಇಂಥ ಉತ್ತೇಜಕ ಇಚ್ಛೆಯನ್ನು ಇಟ್ಟುಕೊಳ್ಳಲು ಯಾವ ಅಭ್ಯಂತರವಿಲ್ಲ."
- ಜಿ.ಕೆ. ಐನಾಪುರೆ (ಮರಾಠಿಯ ಪ್ರಸಿದ್ಧ ಕತೆಗಾರ, ಕಾದಂಬರಿಕಾರ ಹಾಗೂ ವಿಮರ್ಶಕ) ('ಕಾಳಾಚ್ಯಾ ಪಾವುಲ ಖುಣಾ' ಕಥಾಸಂಕಲನಕ್ಕೆ ಬರೆದ ಬೆನ್ನುಡಿಯ ಆಯ್ದ ಭಾಗ)
Share

Subscribe to our emails
Subscribe to our mailing list for insider news, product launches, and more.