Mohan Bhaskar Hegde
ಉತ್ತರೆ
ಉತ್ತರೆ
Publisher - ಸಾವಣ್ಣ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 168
Type - Paperback
Couldn't load pickup availability
ದ್ರೌಪದಿಯ ಛಲವಿಲ್ಲ, ಕುಂತಿಯ ಹಠವಿಲ್ಲ, ಗಾಂಧಾರಿಯ ಕಾಠಿಣ್ಯವಿಲ್ಲ.
ದುರಂತವಾಗಿಯೂ ದುರಂತವಲ್ಲದಂತಾದ ಪಾತ್ರ ಉತ್ತರೆ.
ಆರು ತಿಂಗಳ ದಾಂಪತ್ಯ ಆರಿಹೋದ ಮೇಲೆ ಗರ್ಭದಲ್ಲದ್ದಿ ಮಗುವೊಂದೇ ಕುರುಕುಲದ ಏಕೈಕ ವಾರೀಸುದಾರ. ಅದೂ ಶಾಪಿತ ಪಿಂಡ. ಅದನ್ನು ಹೊತ್ತುಕೊಂಡು ಬಂದ ಹಸ್ತಿನಾವತಿ ಶೋಕಸ್ಥ. ಕೃಷ್ಣನ ಕಾರುಣ್ಯದಿಂದ ಕುಲಕ್ಷಯದ ಹೊತ್ತಲ್ಲಿ ಬಂದ ಪರಿ ರಕ್ಷಿತ ಮಗ.
ಗೆಳೆಯ ಮೋಹನ ಹೆಗಡೆಯವರ ಚೊಚ್ಚಲ ಕಾದಂಬರಿ ಉತ್ತರೆ ಭಕ್ತಿಭಾವ, ಸಂಕೀರ್ತನೆ, ವೀರ, ವಿಷಾದ, ದುಃಖ ದುಮ್ಮಾನಗಳಿಲ್ಲದ ಯುದ್ಧೋತ್ತರ ಹಸ್ತಿನಾವತಿಯ ನಿರುಮ್ಮಳ ನಿರೂಪಣೆ.
ಉಪ್ಪರಿಗೆಯ ಮೇಲಿದ್ದಾಳೆ ಉತ್ತರೆ ಎಂದು ಆರಂಭವಾಗುವ ಕಾದಂಬರಿ ಉತ್ತರೆಯನ್ನು ಕಾದಂಬರಿಯದ್ದುಕ್ಕೂ ಬೇರೆಬೇರೆ ಪಾತ್ರಗಳ ಮೂಲಕ ನೋಡುತ್ತದೆ. ಕಾದಂಬರಿಯ ಕೊನೆಯಲ್ಲಿ ಕಣ್ಣು ಮುಚ್ಚಿ ಮಲಗದ್ದಿ ಉತ್ತರೆ ವಿರಾಟ ಭಾರತವನ್ನು ಕಾಣುತ್ತಾಳೆ. ಆ ವಿರಾಟಭಾರತದಲ್ಲಿ ಎಲ್ಲರೂ ನಾಶವಾದ ಅವಳ ತವರೂ ಇದೆ,ಅವಳಿರುವ ಕುರುಕುಲದ ಉತ್ತರೋತ್ತರತೆಯೂ ಇದೆ.
ಈ ಕಾದಂಬರಿ ಹಸ್ತಿನಾವತಿಯ ಅರಮನೆಗಳೊಳಗೆ ಸುತ್ತಾಡುತ್ತದೆ. ಕುಂತಿ, ದ್ರೌಪದಿ, ಉತ್ತರೆ ಎಂಬ ಮೂರು ತಲೆಮಾರಿನ ಹಸ್ತಿನಾವತಿಯ ಅಂತಃಪುರದ ಪಾತ್ರಗಳು ಇಲ್ಲಿ ಸಂಭಾಷಿಸುತ್ತವೆ. ಈ ಹೊತ್ತಿಗೆ ಎಲ್ಲವೂ ಮುಗಿದಿದೆ ಮತ್ತು ಹೊಸತೊಂದು ಆರಂಭವಾಗಿದೆ. ಮುಗಿದ ಕಾಲ ಮತ್ತು ಶುರುವಿಟ್ಟುಕೊಂಡ ಕಾಲಗಳ ಸಮಾಗಮದಲ್ಲಿ ಸಂಧಿಸುವ ಮೂರು ಪಾತ್ರಗಳು ಭೂತವನ್ನು ನಿಡುಸುಯ್ಯಲಿಂದ ನೋಡುತ್ತವೆ ಮತ್ತು ಭವಿಷ್ಯವನ್ನು ಬೆಳಕಿನಿಂದ ಕಾಣುತ್ತವೆ.
ಎಲೆಮನೆಗೂ ಅರಮನೆಗೂ ಸಂಕಟ ಸಂತೋಷ ಎರಡೂ ಒಂದೇ... ಎನ್ನುತ್ತದೆ ಕಾದಂಬರಿ. ಅದನ್ನು ತೋರಿಸುವಲ್ಲಿ ಕಾದಂಬರಿಕಾರ ಯಶಸ್ವಿಯಾಗಿದ್ದಾರೆ.
-ಗೋಪಾಲಕೃಷ್ಣ ಕುಂಟಿನಿ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.