Srujan Ganesh Hegade
ಉತ್ಕಟ
ಉತ್ಕಟ
Publisher - ವಂಶಿ ಪಬ್ಲಿಕೇಷನ್ಸ್
- Free Shipping Above ₹400
- Cash on Delivery (COD) Available*
Pages - 98
Type - Paperback
Couldn't load pickup availability
ಭವದ ಆಕರ್ಷಣೆಯನ್ನು ನಿರ್ಲಕ್ಷಿಸಿ ಭಾವದ ಮೋಹಕತೆಗೆ ಮನಸೋತವರು ಕಲಾವಿದರಾಗುತ್ತಾರೆ. ರೂಢಿಯ ಮಾಯೆಗೆ ಬೆನ್ನುಹಾಕಿ ನಡೆಯುವುದರಿಂದಲೇ ಅವರಿಗೆ ನೈತಿಕ ಶಕ್ತಿ ಹೆಚ್ಚು. ಅಂತಹ ಮೋಹನರಾಗಕ್ಕೆ ಮನಸೋತ ಯಕ್ಷಗಾನ ಕಲಾವಿದನೊಬ್ಬನ ಬದುಕಿನ ವೃತ್ತಾಂತವೊಂದು ಈ ಕಾದಂಬರಿಯಲ್ಲಿ ದಾಖಲಾಗಿದೆ.
ಯಕ್ಷಗಾನದ ಆವರಣದೊಳಗಿಂದಲೇ ನೋಡಿ ಬರೆದ ಕಥನವಿದಾದ್ದರಿಂದ, ಸಂಶಯವಿಲ್ಲದ ಖಚಿತತೆ ಈ ಕೃತಿಯ ನಿರೂಪಣೆಗೆ ದಕ್ಕಿದೆ. ಇನ್ನೂ 25 ವರ್ಷವೂ ದಾಟಿರದ ಸೃಜನ್ ಗಣೇಶ್ ಬಳಸುವ ಭಾಷೆಯ ಮೋಡಿಯನ್ನು ಕಂಡು ಬೆರಗಾಗಿದ್ದೇನೆ. ಪದಗಳೊಡನೆ ಆಟವಾಡುವ, ಶ್ಲೇಷೆಯನ್ನು ನಿರಾಯಾಸವಾಗಿ ಹಿಡಿದುಕೊಡುವ, ಭಾವುಕ ಕ್ಷಣಗಳಲ್ಲಿ ತಲ್ಲೀನವಾಗುವ, ಬದುಕಿನ ಕಟುಸತ್ಯಗಳನ್ನು ತಣ್ಣಗೆ ಹೇಳುವ ಪ್ರಬುದ್ಧತೆಯನ್ನು ಈ ವಯಸ್ಸಿಗೇ ಕಾದಂಬರಿಕಾರ ದಕ್ಕಿಸಿಕೊಂಡಿದ್ದಾನೆ. ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯಕ್ಕಿಂತಲೂ ಆಲಾಪನೆಯ ಆವೇಶ ಇಷ್ಟವಾಗುವಂತೆ, ಇಲ್ಲಿ ಕಥಾರಸಕ್ಕಿಂತಲೂ ಭಾಷಾರಸವೇ ಮೋಡಿ ಮಾಡಿದೆ.
ನಿರೂಪಣೆಯ ಒಂದು ಉತ್ಕಟ ಗಳಿಗೆಯಲ್ಲಿ 'ಒಂದು ದೇಶಕ್ಕೆ ಆ ದೇಶವನ್ನು ರಕ್ಷಿಸುವ ಸೈನಿಕನೆಷ್ಟು ಮುಖ್ಯವೋ, ಅಷ್ಟೇ ಮುಖ್ಯ ಆ ದೇಶದಲ್ಲಿನ ಕಲಾವಿದ' ಎನ್ನುವ ಬೀಜದ ಮಾತು ಬರುತ್ತದೆ. ಇದೊಂದು ಪರಮಸತ್ಯದ ವಾಕ್ಕಾಗಿದೆ. ಕೆಲವೊಮ್ಮೆ ಆಧುನಿಕ ಆಯುಧಗಳನ್ನು ಬಳಸಿಯೂ ಸೈನಿಕನಿಗೆ ಶತ್ರುಗಳನ್ನು ಗೆಲ್ಲಲಾಗದೇ ಹೋಗಬಹುದು; ಆದರೆ ನಿರಾಯುಧನಾಗಿ ಕಲಾವಿದನೊಬ್ಬ ಎಂತಹ ಶತ್ರುಗಳ ಹೃದಯವನ್ನೂ ಗೆಲ್ಲಬಲ್ಲವನಾಗಿರುತ್ತಾನೆ. ಆ ಕಾರಣಕ್ಕಾಗಿಯೇ ಕಲಾವಿದ ಅನಾಯಾಸವಾಗಿ ಗಡಿಗಳನ್ನು ದಾಟುವಷ್ಟು ಸುಲಭವಾಗಿ ಸೈನಿಕ ದಾಟಲಾರ.
ಭಾವದ ಮೋಡಿ ಒಲಿಸಿಕೊಂಡಂತೆಯೇ ಸೃಜನ್ ಭವವನ್ನೂ ಗೌರವದಿಂದ ನೋಡುವ ಅಗತ್ಯವಿದೆ. ಆಗ ಅವನ ಬರವಣಿಗೆಗೆ ಭಾಷಾರಸದ ಜೊತೆಗೆ ಕಥಾರಸವೂ ದಕ್ಕುತ್ತದೆ. ಅದೇನೂ ಅಂತಹ ಕಠಿಣ ಸವಾಲು ಅವನಿಗಾಗಲಿಕ್ಕಿಲ್ಲ ಎಂಬುದು ಈ ಕೃತಿಯಲ್ಲಿ ಆಗಲೇ ದಾಖಲಾಗಿದೆ."
- ವಸುಧೇಂದ್ರ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.