Kiran Upadhyaya
ಉಭಯದೇಶವಾಸಿ
ಉಭಯದೇಶವಾಸಿ
Publisher - ವಿಶ್ವವಾಣಿ ಪುಸ್ತಕ
- Free Shipping Above ₹350
- Cash on Delivery (COD) Available*
Pages - 200
Type - Paperback
Couldn't load pickup availability
ವಿದೇಶವಾಸಿ, ಪರದೇಶವಾಸಿ, ಹೊರದೇಶವಾಸಿ, ದೂರದೇಶವಾಸಿ... ಇದೀಗ 'ಉಭಯದೇಶವಾಸಿ'. ಕಿರಣ್ ಉಪಾಧ್ಯಾಯ ಅವರ ಮುಂದಿನ ಪುಸ್ತಕದ ಶೀರ್ಷಿಕೆ ಏನಿದ್ದಿರಬಹುದು? ನನಗೆ ಕುತೂಹಲವಿದೆ, ಇರಲಿ. ಬಹ್ಮನ್ ದೇಶದಲ್ಲಿ ನೆಲೆಸಿರುವ ಕಿರಣ್ ಮೂಲತಃ ಉದ್ಯಮಿ ಹಾಗೂ ಪ್ರವೃತ್ತಿಯಲ್ಲಿ ಅಂಕಣಕಾರರು. ಅವರ ಈ ಎಲ್ಲ ಕೃತಿಗಳೂ 'ವಿಶ್ವವಾಣಿ ಪುಸ್ತಕ' ದಿಂದ ಬೆಳಕು ಕಂಡಿವೆ ಎಂಬುದು ನನಗೆ ಸಂತಸದ ಸಂಗತಿ. ಕಿರಣ್ ಸದಾ ಸಕಾರಾತ್ಮಕ ಮತ್ತು ಕ್ರಿಯಾಶೀಲ. ಓದು, ಶೋಧ, ಅಧ್ಯಯನ, ಹರಟೆ, ಪ್ರವಾಸ ವೃತ್ತಿಯ ಆಚೆ ಕಿರಣ್ ಗೆ ತಾಕಿದ 'ಅಂಟುರೋಗ'ಗಳು. ವಿದೇಶದಲ್ಲಿದ್ದರೂ ನಾನೊಬ್ಬ ಭಾರತೀಯ ಪ್ರಜೆ ಎಂಬ ದೇಶಾಭಿಮಾನದಿಂದ ಪ್ರತಿ ಚುನಾವಣೆಗೂ ಲಕ್ಷಾಂತರ ಖರ್ಚು ಮಾಡಿಕೊಂಡು ಬಂದು ಮತ ಚಲಾಯಿಸುವ ಜವಾಬ್ದಾರಿ ಮತದಾರ! ಇನ್ನು 'ಉಭಯದೇಶವಾಸಿ' ಕೃತಿ ಬಗ್ಗೆ ಹೇಳುವುದಾದರೆ ಉಭಯ ಅಂದರೆ ಎರಡು. ವಿಜ್ಞಾನದ ಪ್ರಕಾರ ನೀರು, ನೆಲದಲ್ಲಿ ವಾಸಿಸುವ ಜೀವಿಗಳನ್ನು 'ಉಭಯವಾಸಿ' ಅಂತೀವಿ. ಆದರೆ ಕಿರಣ್ ದೇಶ-ವಿದೇಶದಲ್ಲಿ ವಾಸಿಸುತ್ತಲೇ ಎರಡೂ ದೇಶಗಳ ಕೊಂಡಿಯಂತೆ ಇಲ್ಲಿನ ಬರಹಗಳನ್ನು ರೂಪಿಸಿದ್ದಾರೆ. ವ್ಯಾಪಾರ, ವ್ಯವಹಾರ, ಸುತ್ತಾಟ, ಸಂಸಾರ... ಈ ಎಲ್ಲ ಜಂಜಾಟಗಳ ನಡುವೆಯೂ ಅಪ್ಪಟ ಅಕ್ಷರ ಪ್ರೀತಿಯನ್ನು ಇಟ್ಟುಕೊಂಡಿರುವುದಕ್ಕೆ ನಿದರ್ಶನ ಕಿರಣ್ ಅವರ 'ಉಭಯದೇಶವಾಸಿ' ಕೃತಿ. ವಿದೇಶದಲ್ಲಿದ್ದರೂ ತಾಯ್ಕೆಲದೊಂದಿಗೆ ತಾಯಿಬೇರಿನ ಕಕ್ಕುಲತೆ ಇಟ್ಟಿಕೊಂಡಿರುವ ಕಿರಣ್ ಅಭಿನಂದನಾರ್ಹರು.
-ವಿಶ್ವೇಶ್ವರ ಭಟ್
ಪ್ರಧಾನ ಸಂಪಾದಕ, ವಿಶ್ವವಾಣಿ
Share

Subscribe to our emails
Subscribe to our mailing list for insider news, product launches, and more.