K. C. Raghu
Publisher - ಸಾವಣ್ಣ ಪ್ರಕಾಶನ
- Free Shipping
- Cash on Delivery (COD) Available
Couldn't load pickup availability
ಕೆ.ಸಿ.ರಘುರವರ ಈ ಪುಸ್ತಕ 'ತುತ್ತು-ತತ್ತ್ವ", ಅವರ ದೇಶ-ವಿದೇಶ ಪ್ರವಾಸದ, ನಿರಂತರ ಪಠನದಿಂದ ಬಸಿದ ಸತ್ವ, ಆಹಾರ ಜ್ಞಾನ-ವಿಚಾರಗಳ ಬಗ್ಗೆ ಟಿವಿ ವಾಹಿನಿಗಳಲ್ಲಿ ಜನ ಸಾಮಾನ್ಯರಿಗೆ ತಿಳಿಯುವಂತೆ ಸರಳವಾಗಿ ಸುಲಲಿತವಾಗಿ ಕನ್ನಡ ಹಾಗು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ವಿವರಿಸುವ ರಘು ಕರ್ನಾಟಕದ ಜನರಿಗೆ ಚಿರಪರಿಚಿತರು, ಮುನ್ನುಡಿಯಲ್ಲಿ ಸುಗತ ಶ್ರೀನಿವಾಸರಾಜುರವರು ಹೇಳುವಂತೆ ಆಹಾರ ಶಾಸ್ತ್ರ ಸಂಶೋಧನೆ ಸಾರಗಳ ಬಗ್ಗೆ ಓದಿ ತಿಳಿಯಲು ಆಂಗ್ಲ ಭಾಷೆಯ ಪುಸ್ತಕಗಳನ್ನು ಅವಲಂಬಿಸುವುದನ್ನು ರಘುರವರ ಅಂಕಣಗಳು, ಲೇಖನಗಳು ತಪ್ಪಿಸಿವೆ. ರಘುರವರ ಖಾಸಗಿ ಗ್ರಂಥಾಲಯ ಹೊಕ್ಕರೆ ಸುಮಾರು 50 ಸಾವಿರಕ್ಕೂ ಹೆಚ್ಚು ಕನ್ನಡ-ಇಂಗ್ಲಿಷ್ ಹೊತ್ತಿಗೆಗಳು ಧಾರ್ಮಿಕ, ಆರ್ಥಿಕ, ಸಾಮಾಜಿಕ, ರಾಜಕೀಯ, ವೈಚಾರಿಕತೆ, ಆಧ್ಯಾತ್ಮ ಇತಿಹಾಸ, ವೇದ-ಪುರಾಣ, ಮಾನವ ಶಾಸ್ತ್ರ, ತತ್ವ ಶಾಸ್ತ್ರ, ಕಗ್ಗದಿಂದ ಕಾರ್ಲ್‌ಮಾರ್ಕ್ಸವರೆಗೆ ಕಾಣಸಿಗುತ್ತವೆ.
ಆಧುನಿಕ ಆಹಾರದ ಅವತಾರಗಳ ಪೊಟ್ಟಣಗಳ ಮರ್ಮಗಳನ್ನು ಸಾಮಾನ್ಯ ಜನರಿಗೆ ಅನಾವರಣ ಮಾಡುವ ವಿಧ್ವತ್ತು ರಘುರವರ ಮಾತು ಮತ್ತು ಕೃತಿ ಎರಡರಲ್ಲೂ ಅಡಗಿದೆ. ಆಹಾರ ಸಂಸ್ಕೃತಿ, ಉತ್ಪಾದನೆ, ಸಂಸ್ಕರಣೆ, ರಕ್ಷಣೆ, ಅದರಲ್ಲೂ ಸಾವಯವ ಪದ್ಧತಿ ಬಗ್ಗೆ ಅಪಾರ ಜ್ಞಾನ ಹೊಂದಿರುವ ರಘುರವರ ಲೇಖನಗಳು ಅಂತರಾಷ್ಟ್ರೀಯ ಸಮಾವೇಷಗಳಲ್ಲಿ, ಜರಲಗಳಲ್ಲಿ ಮನ್ನಣೆ ಪಡೆದಿವೆ. ಆರೋಗ್ಯವಂತ ಜೀವನಕ್ಕೆ ಆಹಾರವೇ ಮದ್ದಾಗಬೇಕು ಎಂಬುದು ರಘುರವರ ಸಲಹೆ. ವಿಶ್ವದ ಜೊತೆಗೆ ನಮ್ಮ ದೇಶವನ್ನು ಕಾಡುತ್ತಿರುವ ಅಪೌಷ್ಟಿಕತೆಗೆ ಮೂಲ ಯಾವುದು, ಬೆಳಿಗ್ಗೆ ಎದ್ದ ಕೂಡಲೇ ಏನು ಕುಡಿಯಬೇಕು, ತಿನ್ನಬೇಕು, ರಾತ್ರಿ ಮಲಗುವ ಮುನ್ನ ಮಡದಿಯ ಜೊತೆ ಏನು ಸೇವಿಸಬೇಕು ಎಂಬುದನ್ನು ತಿಳಿಯಲು ರಘುರವರನ್ನು ಕೇಳಬೇಕು ಅಥವಾ ಈ ಪುಸ್ತಕ ಓದಬೇಕು.
ಸಾಗ್ಗೆರೆ ರಾಮಸ್ವಾಮಿ ಲೇಖಕ-ಪತ್ರಕರ್ತ
ಸಾವಣ್ಣ ಪ್ರಕಾಶನ
