Skip to product information
1 of 2

Dr. M. Venkataswamy

ಟೈಟಾನಿಕ್

ಟೈಟಾನಿಕ್

Publisher - ವೀರಲೋಕ ಬುಕ್ಸ್

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹300

- Cash on Delivery (COD) Available

Pages - 120

Type - Paperback

ಕೆಲವರು ತಪ್ಪಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಮಾಡದೇ ತಮ್ಮ ತಮ್ಮ ಕ್ಯಾಬಿನ್‌ಗಳಲ್ಲಿ ಮತ್ತು ಅಲ್ಲಲ್ಲಿ ನಿಂತುಕೊಂಡು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇನ್ನೂ ಕೆಲವು ಪ್ರಯಾಣಿಕರು ಟ್ರಂಕುಗಳು ಮತ್ತು ಉಳಿದ ವಸ್ತುಗಳನ್ನು ಹಿಡಿದುಕೊಂಡು ಡೆಕ್ ಗಳಲ್ಲಿ ನಿಂತುಕೊಂಡು ಯಾರಾದರು ಬಂದು ತಮ್ಮನ್ನ ಕರೆದುಕೊಂಡು ಹೋಗುವರೆಂದು ಕಾಯುತ್ತಿದ್ದರು.

ಮನಶಾಸ್ತ್ರಜ್ಞ ವೈನ್ ಕ್ರೇಗ್ ವೇಡ್ ಇದನ್ನು ಸಾಮಾಜಿಕ ಮೇಲಾಧಿಕಾರಿಗಳ ಪೀಳಿಗೆಗಳಿಂದ ಉತ್ಪತ್ತಿಯಾಗುವ Stoic Passitivity ಎಂದು ಹೇಳುತ್ತಾರೆ. ಇವರಲ್ಲಿ ಹೆಚ್ಚಿನವರು ಬದುಕುಳಿಯಲು ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ನೂರಾರು ಜನರು ಸಭಾಂಗಣಗಳಲ್ಲಿ ಬೋಧಕರೊಂದಿಗೆ ನಿಂತುಕೊಂಡು ಪ್ರಾರ್ಥಿಸುತ್ತಿದ್ದರು, ದೇವರು ಮತ್ತು ಮೇರಿ ಅವರಿಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಿದ್ದರು. ಕೆಲವರು ಅಲ್ಲಿಯೇ ಮಲಗಿಕೊಂಡು ಚೀರಾಡುತ್ತಿದ್ದರು, ಅವರು ತಮ್ಮ ಸ್ವಂತ ಇಚ್ಛಾಶಕ್ತಿಯನ್ನು ಕಳೆದುಕೊಂಡಿದ್ದರು ಮತ್ತು ದೇವರೇ ಎಲ್ಲಾ ಕೆಲಸಗಳನ್ನು ಮಾಡಬೇಕೆಂದು ನಿರೀಕ್ಷಿಸುತ್ತಿದ್ದರು. 

ಟೈಟಾನಿಕ್ ದುರಂತ ಸಾಗರ ಇತಿಹಾಸದಲ್ಲಿ ಮೈ ನವಿರೇಳಿಸುವ ಮತ್ತು ಕೇಳಲಾರದ ವಿದ್ರಾವಕ ಸತ್ಯಕತೆಯಾಗಿದೆ. ಸಹಸ್ರಮಾನಗಳ ಇತಿಹಾಸದಲ್ಲಿ ಇಂತಹ ನರಕಸದೃಶ ದುರಂತ ಹಿಂದೆ ಎಂದೂ ನಡೆದಿರಲಿಲ್ಲ. ಈ ದುರಂತದ ನಂತರ ಸಾಗರ ಕಾನೂನುಗಳನ್ನು ಬದಲಿಸಬೇಕಾಯಿತು ಮತ್ತು ಅನೇಕ ಕಟ್ಟೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಯಿತು. ಇದರಿಂದ ಇಡೀ ಜಗತ್ತು ಸಾಗರಲೋಕದಲ್ಲಿ ಒಂದು ಹೊಸ ಪಾಠವನ್ನೇ ಕಲಿತುಕೊಂಡಿತು. ನಂತರದ ಕಾಲದಲ್ಲಿ ಯಾವುದೇ ದೊಡ್ಡ ದುರಂತಗಳು ನಡೆಯಲಿಲ್ಲ. ಈ ದುರಂತದಲ್ಲಿ ಮಡಿದವರ ಸಂಖ್ಯೆ ಗೊಂದಲಗಳಿಂದ ಕೂಡಿದ್ದು ಸುಮಾರು 1,490 ರಿಂದ 1635ರ ಎನ್ನಲಾಗಿದೆ. ಇನ್ನು ಸಮುದ್ರದಿಂದ ಸಂಗ್ರಹಿಸಿದ ಮೃತದೇಹಗಳ ಸಂಖ್ಯೆ ಕೇವಲ 333. ಒಟ್ಟಿನಲ್ಲಿ ಈ ಟೈಟಾನಿಕ್ ಹಡಗಿನ ಕತೆಯ ವ್ಯಥೆಯನ್ನು ಓದಿಯೇ ತಿಳಿಯಬೇಕು.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)