Skip to product information
1 of 2

C. S. Sarvamangala, V. S. Sreedhara

ತಾರಾನಾದ

ತಾರಾನಾದ

Publisher - ಮನೋಹರ ಗ್ರಂಥಮಾಲಾ

Regular price Rs. 450.00
Regular price Rs. 450.00 Sale price Rs. 450.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 269

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ನಾವೇನೂ ಬುದ್ಧರಲ್ಲ, ಆದ್ರೆ ಬುದ್ಧತನ ನಮ್ಮಲ್ಲಿ ಸ್ವಲ್ಪ ಇರಬೇಕು. ನಾವ್ಯಾರೂ ಅಶೋಕರಲ್ಲ. ಆದರೆ ಅಶೋಕತನ ಇರಬೇಕು. ಅದೇ ನಮ್ಮನ್ನು ಮನುಷ್ಯರಾಗಿ ಮಾಡೋದು.

ನಮ್ಮ ಸಂಗೀತ ಮೂಲತಃ ಅಂತರ್ಮುಖಿ ಸ್ವರೂಪದ್ದು. ಶುದ್ಧಸ್ವರದ ಸಿದ್ದಿಯೇ ನಮ್ಮ ಸಂಗೀತದ ಧೈಯ. ಒಬ್ಬ ಸರೋದ್ ಬಾರಿಸುವಾಗ ಯಾವ ಅನುಭವದ ಸೃಷ್ಟಿಕ್ರಿಯೆಯಲ್ಲಿ ತೊಡಗುತ್ತಾನೆ? ಸಂಗೀತದ ಮೂಲಕ ಬೇರೊಂದು ಪ್ರಜ್ಞಾಸ್ತರದಲ್ಲಿ ಅನುಭವವನ್ನು ಸೃಷ್ಟಿಸಲಿಕ್ಕಲ್ಲ. ಸ್ವರವನ್ನು ಅದರ ಶುದ್ಧಸ್ಥಿತಿಯಲ್ಲಿ ಸೆರೆಹಿಡಿದಾಗ ಸಿಗುವ ಆತ್ಮಾನಂದಕ್ಕಾಗಿ. 

ಭೀಮದಾಸರಿಂದ ಭಕ್ತಿ ಸಂಗೀತದ ಸಂಸ್ಕಾರ ಪಡೆದ ಶ್ರೀಮತಿ ರಾಧಿಕಾ ಕಾಖಂಡಿಕಿ ಅವರು ತಮ್ಮ ಗುರುಗಳನ್ನು ಕುರಿತು ಚಿಕ್ಕ ಹಾಗೂ ಚೊಕ್ಕದಾದ ಕೃತಿಯೊಂದನ್ನು ರಚಿಸಿದ್ದಾರೆ. ಕಾಖಂಡಿಕಿ ಅವರ ಸಂಗೀತವನ್ನು ಆಸ್ವಾದಿಸುವ ಅನುಭವವನ್ನು ಈ ಕೃತಿ ನೀಡುತ್ತದೆ. ತಂಬೂರಿಯ ಶುದ್ಧ ಶೃತಿಯಂತೆ ಈ ಕೃತಿ ಇದೆ. ಇದರಲ್ಲಿರುವ ಇತಿಹಾಸ ಮತ್ತು ಘಟನೆಗಳು ಪ್ರಾಮಾಣಿಕತೆಯಿಂದ ಕೂಡಿವೆ. ವ್ಯಕ್ತಿಯ ಪರಿವರ್ತನೆಗೆ ಘಟನೆಯೊಂದು ಹೇಗೆ ಕಾರಣವಾಯಿತು, ಅದರಿಂದ ಆದ ಸತ್ಪರಿಣಾಮಗಳ ಅಚ್ಚುಕಟ್ಟಾದ ದಾಖಲೆ ಈ ಪುಸ್ತಕದಲ್ಲಿದೆ. ಅಥಣಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸ್ಥಾಪನೆ, ಅದರ ಬೆಳವಣಿಗೆ, ಅದರ ನಿರಂತರ ನಡೆಯುವದಕ್ಕೆ ರೂಪಿಸಿದ ಒಂದು ಪ್ರಾಮಾಣಿಕ ಪಂಚಾಂಗ, ನಡೆದು ಹೋದ ಪವಾಡಗಳು ಈ ಕೃತಿಯಲ್ಲಿವೆ.

ಭೀಮದಾಸರ ಜೀವನ ಚಕ್ರವ್ಯೂಹದ ಸುಳಿಗೆ ಸಿಕ್ಕಾಗ ಹೊಸ ತಿರುವು ನೀಡಿದ ಕಾಶೀಬಾಯಿ ಎಂಬ ಸ್ತ್ರೀ, 'ಕಾಶಿ' ಪುಣ್ಯ ಕ್ಷೇತ್ರದಂತೆ ಹೇಗಿದ್ದಳೆಂಬ ವಿಚಾರ ಈ ಕೃತಿಯಲ್ಲಿ ಮಹತ್ವ ಪಡೆದಿದೆ. ಲೇಖಕಿ ಎಲ್ಲಿಯೂ ಭಾವಾವೇಶಕ್ಕೆ ಒಳಗಾಗದೆ ಅತ್ಯಂತ ಪ್ರಾಮಾಣಿಕವಾಗಿ ಗುರು ಸ್ಮರಣೆ ಮಾಡಿದ್ದಾರೆ. ಗುರುವಿನ ಪ್ರಸಾದ ನನ್ನ ಸಂಗೀತ ಶಕ್ತಿಗೆ ಹೇಗೆ ಬಲ ನೀಡಿತು ಎಂಬುದನ್ನು ಲೇಖಕಿ ಕೃತಿಯಲ್ಲಿ ಉದಾಹರಣೆಗಳ ಮೂಲಕ ಧೃಡಪಡಿಸಿದ್ದಾರೆ. ಇದೊಂದು ಉತ್ತಮ ವ್ಯಕ್ತಿ ಚಿತ್ರವಾಗಿದೆ.

-ಡಾ. ಕೃಷ್ಣ ಕಟ್ಟಿ 

View full details

Talk about your brand

Share information about your brand with your customers. Describe a product, make announcements, or welcome customers to your store.