Skip to product information
1 of 2

B. Jeyamohan, To Kannada : Shanti. K. Appanna

ತಳಾತಳ

ತಳಾತಳ

Publisher - ಛಂದ ಪ್ರಕಾಶನ

Regular price Rs. 295.00
Regular price Rs. 295.00 Sale price Rs. 295.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 252

Type - Paperback

Gift Wrap
Gift Wrap Rs. 15.00

ಜೆಯಮೋಹನ್ ಭಾರತದ, ಅಷ್ಟೇ ಅಲ್ಲ ಜಗತ್ತಿನ ಒಬ್ಬ ಅಪ್ರತಿಮ ಕತೆಗಾರ. ಅವರು ಬರೆದಿದ್ದನ್ನು ಓದಿ ಹುಚ್ಚು ಹಿಡಿದವನಂತೆ ಅಲೆದಿದ್ದೆ. ಒಂದೋ ಅವರಂತೆಯೇ ಬರೆಯಬೇಕು, ಇಲ್ಲವೇ ಅವರನ್ನು ಕೊಂದು ಬಿಡಬೇಕು ಎಂದು ಯೋಚಿಸಿದ್ದೆ.

-ಕಮಲಹಾಸನ್

ಜೆಯಮೋಹನ್ ಅವರು ಸತ್ಯಕ್ಕೆ ಮುಸುಕೆಳೆಯದೆ, ಅದರ ಉಗ್ರ ಸ್ವರೂಪವನ್ನು ಹಸಿಯಾಗಿಯೇ ನಮ್ಮಮುಂದಿಡುತ್ತಾರೆ. ಅವರ ಕೃತಿಗಳನ್ನು ಓದದಿದ್ದರೆ ಸಮಕಾಲೀನ ಭಾರತವನ್ನು ಕುರಿತ ನಮ್ಮ ಅರಿವು ಅಪೂರ್ಣವಾಗಿ ಉಳಿಯುತ್ತದೆ.

-ವಿವೇಕ ಶಾನಭಾಗ

ಮನುಷ್ಯ ವರ್ತನೆಯ ತಳಾತಳವನ್ನು ದರ್ಶಿಸುವ ಕಾದಂಬರಿ ಇದು. ಪ್ರತಿ ಪಾತ್ರವೂ ಬಾಹ್ಯದಲ್ಲಿ ನಮ್ಮನಿಮ್ಮೊಂದಿಗೆ ಸುಳಿದಾಡುವ ವ್ಯಕ್ತಿಗಳಂತೆ ಕಂಡರೂ ಅವರ ಭಾವಲೋಕವು ಮಾತ್ರ ನಮ್ಮ ಊಹೆಗೂ ದಕ್ಕದ ಪಾತಾಳಲೋಕದಲ್ಲಿರುತ್ತದೆ. ಅಲ್ಲಿ ಕತ್ತಲೆಗೂ ಬೆಳಕಿಗೂ ಹೇಳಿಕೊಳ್ಳುವ ವ್ಯತ್ಯಾಸವಿಲ್ಲ, ಹಾಗೇ ಬದುಕಿಗೂ ಸಾವಿಗೂ. ಈ ಪಾತ್ರಗಳನ್ನು ಸ್ವೀಕರಿಸುವ ಬಗೆ ಹೇಗೆ?

ಬಲು ಭಿನ್ನವಸ್ತುವಿನ ತೀಕ್ಷ್ಯನಿರೂಪಣೆಯ ಕಾದಂಬರಿ ಇದು. ಕನ್ನಡ ಓದುಗರು ಗಮನಿಸಲೇಬೇಕಾದ ಕೃತಿಯಿದು.

-ಎಂ.ಆರ್. ದತ್ತಾತ್ರಿ

View full details