Skip to product information
1 of 2

Dr. Lakshman V A

ಟೇಕ್‌ ಇಟ್‌ ಈಜಿ಼

ಟೇಕ್‌ ಇಟ್‌ ಈಜಿ಼

Publisher - ಸಾವಣ್ಣ ಪ್ರಕಾಶನ

Regular price Rs. 220.00
Regular price Rs. 220.00 Sale price Rs. 220.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 172

Type - Paperback

Gift Wrap
Gift Wrap Rs. 15.00

The wound is place where light enters you.” – Rumi

ನಿಮಗೊಂದು ಗಾಯವಿರಲಿ. ಆ ಗಾಯದ ಗುರುತು ಎಲ್ಲರ ಕಣ್ಣಿಗೂ ಕಾಣುವಂತಿರಲಿ ಮತ್ತು ಗಾಯದ ನೋವೇ ನಿಮನ್ನು ಅನುಕ್ಷಣ ಒಲೆಯ ಮೇಲೆ ಕುದಿ ಎಸರು ಕುದಿವಂತೆ ನಿಮನ್ನು ತಳಮಳಿಸುವಂತೆ ಮಾಡಲಿ. ಆ ಗಾಯದ ಮೂಲಕವೇ ನಿಮ ದೇಹದೊಳಗೊಂದು ಸಣ್ಣ ಬೆಳಕಿನ ಕಿರಣ ಪ್ರವೇಶ ಪಡೆದು. ಆ ಬೆಳಕು ಬೆಂಕಿಯಾಗಿ ನಿಮ ದೇಹದ ಅಣು ಅಣುಕೋಶಗಳಲ್ಲಿ ಕೆಚ್ಚು ಆವೇಶ ಗೆಲ್ಲುವ ಹಠ ತುಂಬಲಿ.

ಬದುಕಿನಲ್ಲಿ ಗೆಲುವಿನ ಪ್ರೇರಣೆ ಹತ್ತು ಹಲವು ಕಡೆಯಿಂದ ದಕ್ಕಿರುತ್ತದೆ. ಬದ್ಧನಾಗುವ ಮೊದಲು ಸಿದ್ಧಾರ್ಥನಿಗೆ ಸಿಕ್ಕಿದ್ದು ರಾಜ ಬೀದಿಯಲ್ಲಿ. ಮಹಾತನಾಗುವ ಮೊದಲು ಮೋಹನದಾಸರಿಗೆ ದಕ್ಕಿದ್ದು ದಕ್ಷಿಣ ಆಫ್ರಿಕಾದ ಯಾವುದೋ ರೈಲು ನಿಲ್ದಾಣದ ್ಲಾಟ್ ಾರ್ಮಿನಲ್ಲಿ. ಮತ್ತು ನೆಲ್ಸನ್ ಮಂಡೇಲಾರಿಗೆ ಜೈಲಿನಲ್ಲಿ.

ಗೆಲುವೆಂಬುದು ಬಲು ಮಾಯಾವಿ. ಸಾವಿರ ಸಾವಿರ ಸಲ ಸೋತರೂ ಅವುಡುಗಚ್ಚಿ ನಿಲ್ಲುವ ಆತವಿಶ್ವಾಸ ನಿರೀಕ್ಷಿಸುತ್ತದೆ. ಅವಮಾನಗಳನ್ನು ಹಿಮೆಟ್ಟಿ ನಿಲ್ಲುವ ಎದೆಗಾರಿಕೆ ಕೇಳುತ್ತದೆ. ಬಿದ್ದಾಗಸೋತಾಗಜಗ ನುಡಿವ ಕೊಂಕು ನುಡಿಗಳನ್ನು ಜೀರ್ಣಿಸಿಕೊಳ್ಳುವ ಧೈರ್ಯ ಬೇಕಾಗುತ್ತದೆ. ಧೈರ್ಯವೆಂದರೆ ನಿರಂತರವಾಗಿ ಸಿಂಹದಂತೆ ಘರ್ಜಿಸುವುದಲ್ಲ. ಬದಲಿಗೆ ವಿನಯವಾಗಿಅಷ್ಟೇ ಶ್ರದ್ಧೆಯಿಂದನಿರಂತರ ಪ್ರಯತ್ನ ಜಾರಿಯಲ್ಲಿಡುವುದು. ಏಕೆಂದರೆ ಗೆಲುವಿಗೆ ಊರೆಲ್ಲಾ ನೆಂಟರಾದರೆ ಸೋಲು ಯಾವೊತ್ತಿಗೂ ಒಬ್ಬಂಟಿ.

ಸುಮನೆ ಯಶಸ್ವಿ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಗಮನವಿಟ್ಟು ಓದಿ:

ನಮಗೆ ನಿಮಗಿರುವ ಕಾಲದ ಮಿತಿಯಲ್ಲೇ ಅವರು ಸಮಯವನ್ನು ಭಿನ್ನವಾಗಿ ವಿಂಗಡಿಸಿ ಹೆಚ್ಚು ಹೆಚ್ಚು ಬೆವರು ಸುರಿಸಿರುತ್ತಾರೆ. ಒಬ್ಬ ಸಚಿನ್ ತೆಂಡುಲ್ಕರ್ ಆಗಲು ಉಳಿದ ಆಟಗಾರಗಿಂತ ಹೆಚ್ಚು ಹೊತ್ತು ನೆಟ್ನಲ್ಲಿ ತಯಾರಿ ನಡೆಸಿರುತ್ತಾರೆ. ವಿಶ್ವ ಚೆಸ್ನ ಗ್ರ್ಯಾಂಡ್ ಮಾಸ್ಟರ್ ಆನಂದ ತಾವು ಮಲಗಿದ್ದ ಕೋಣೆಯ ಬಿಳಿ ತಾರಸಿಯನ್ನೇ ದಿಟ್ಟಿಸುತ್ತ ಅದರಲ್ಲೇ ಚೆಸ್ನ ಮನೆಗಳನ್ನು ಕಲ್ಪಿಸಿಕೊಂಡು ತಮೊಂದಿಗೆ ತಾವೇ ಸ್ಪರ್ಧಿಗೆ ಬಿದ್ದು ಗೆದ್ದಿರುತ್ತಾರೆ. ಒಬ್ಬ ಮುತ್ತುರಾಜ್ ಡಾ. ರಾಜಕುಮಾರ ಆಗುವ ಮುಂಚೆ ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಎಷ್ಟೊಂದು ವರ್ಷ ನಟನೆಯ ತಾಲೀಮೆಂಬ ಮಣ್ಣು ಹೊತ್ತಿರುತ್ತಾರೆ. ಒಬ್ಬ ವಿಜಯ್ ಸಂಕೇಶ್ವರ ಯಶಸ್ವಿ ಉದ್ಯಮಿಯಾಗುವ ಮುಂಚೆ ಅವರು ಒಂದು ಲಾರಿ ಡ್ರೈವರ್ ಆಗಿದ್ದರು. ಒಂದು ಪತ್ರಿಕೆಯ ಮಾಲೀಕರಾಗುವ ಮುಂಚೆ ಕ್ಯಾಲೆಂಡರ್ ಛಾಪಿಸುವ ಪ್ರೆಸ್ನಲ್ಲಿ ಮೊಳೆ ಜೋಡಿಸುತ್ತಿದ್ದರು. ಒಬ್ಬ ಜಗಜೀತ್ ಸಿಂಗ್ ಖ್ಯಾತ ಗಾಯಕರಾಗಲು ಪ್ರತಿ ದಿನ ಕನಿಷ್ಠ ಎರಡು ಗಂಟೆ ರಿಯಾಜು ನಡೆಸಿರುತ್ತಾರೆ. ರಾಗಗಳೊಂದಿಗೆ ಜಗಳಕ್ಕೆ ಬಿದ್ದು ಒಂದು ದಿನ ಮುನಿದ ಪ್ರೇಯಸಿಯನ್ನು ಒಲಿಸಿಕೊಳ್ಳುವ ಹಾಗೆ ತನ್ನ ಗಂಟಲಿನಲ್ಲಿ ಅಮೃತದಂತಹ ದನಿಯ ಧರಿಸಿ ಜಗಕೆ ಗಜಲ್ನ ಜೋಗುಳ ಹಾಡಿ ಮಲಗಿಸಿ ತಾವು ಯಶಸ್ವಿ ಎನಿಸಿಕೊಳ್ಳುತ್ತಾರೆ.

-ಡಾ. ಲಕ್ಷ್ಮಣ  ವಿ.ಎ.

View full details