Dr. K. N. Ganeshaiah
ತಾರುಮಾರು
ತಾರುಮಾರು
Publisher - ಅಂಕಿತ ಪುಸ್ತಕ
- Free Shipping Above ₹350
- Cash on Delivery (COD) Available
Pages - 100
Type - Paperback
Couldn't load pickup availability
ನಾವೆಲ್ಲರೂ ಅನುಭವಿಸುವ ಘಟನೆಗಳು ಕಾಲದ ಆಯಾಮದಲ್ಲಿ ಒಂದರ ನಂತರ ಮತ್ತೊಂದರಂತೆ ಒಂದು ಮಾಲಿಕೆಯ ರೂಪದಲ್ಲಿ ಬಂದರೂ ಅವು ಘಟಿಸುವ ಪಾಳಿಯಲ್ಲಿ ಯಾವುದೇ ನಿರ್ದಿಷ್ಟ ಪ್ರಕಾರವಿರಲು ಸಾಧ್ಯವಿಲ್ಲ. ಅವು ಘಟಿಸುವುದೆ ತಾರುಮಾರಾಗಿ, ಅಂತೆಯೇ ನಮ್ಮಲ್ಲಿ ಚಿಂತನೆಗಳು ಬೆಳೆಯುವುದೂ ಸಹ ತಾರುಮಾರಾಗಿ, ಅಂದರೆ ಒಂದು ರೀತಿಯಲ್ಲಿ 'random' ಆಗಿ. ಈ ಹೊತ್ತಿಗೆಯಲ್ಲಿನ ವಿಚಾರಗಳು ಅಂತಹ ತಾರುಮಾರು ಚಿಂತನೆಗಳ ಒಂದು ಮಾಲಿಕೆ. ಇಲ್ಲಿನ ವಿಚಾರಗಳು ಯಾವುದೋ ಯಾತ್ರೆಯಲ್ಲಿ ನಾವು ಕಂಡ ಮನಕರಗಿಸುವ ಘಟನೆಯಿಂದಲೋ (ಬಿಕ್ಕುಗಳ ಒಂದು ಊಟೋತ್ಸವದ ಸುತ್ತ), ಬೇಸತ್ತ ಮನಸ್ಸಿನಲ್ಲಿ ಮೂಡಿದ ಹತಾಶೆಯಿಂದಲೋ (ಮಾನವೀಯತೆಯನ್ನು ಕಾನೂನೀಕರಣಗೊಳಿಸಿದಾಗ), ಗತಿಸಿ ಚರಿತ್ರೆಯಾದ ಮಹಾನ್ ವ್ಯಕ್ತಿತ್ವಗಳಿಗೆ ಗೌರವ ಸಲ್ಲಿಸುವ ಜವಾಬ್ದಾರಿಯಿಂದಲೋ (ಬಿ.ಜಿ.ಎಲ್.ಸ್ವಾಮಿ), ಬೇರೂರಿರುವ ಅಪ್ರಸ್ತುತ ರೂಡಿಗಳು ಬದಲಾಗಬೇಕೆಂಬ ಕಾಳಜಿಯಿಂದಲೋ (ವನ್ಯ ಸಂರಕ್ಷಣೆ, ಕತೆ-ರೋಚಕತೆ), ಅಥವಾ ಬದುಕಿನ ಬವಣೆ ಕಂಡೋ (ಕೋಲಾರ) ಮೂಡಿದ ಚಿಂತನಾ-ಚಿತ್ರಗಳು. ಹಾಗೆಂದೇ ಇವು. ಯಾವುದೇ ಪಾಳಿಯಿಲ್ಲದ ತಾರುಮಾರು ವಿಚಾರಗಳು, ಹಲವು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿದ್ದರೂ, ಓದುಗರಿಗೆ ಒಂದು ಗುಚ್ಚದಲ್ಲಿ ನೀಡುವ ನಿಟ್ಟಿನಲ್ಲಿ ಕಲೆಹಾಕಿದ, ಒಂದಕ್ಕೊಂದು ಬೆಸುಗೆ ಇಲ್ಲದ ಬರಹಗಳು ಇಲ್ಲಿವೆ.
Share


Subscribe to our emails
Subscribe to our mailing list for insider news, product launches, and more.