Skip to product information
1 of 2

Dr. M. Annayya Kulal Ultoor

ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ - ಆವೃತ್ತಿ 02

ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ - ಆವೃತ್ತಿ 02

Publisher - ಹರಿವು ಬುಕ್ಸ್

Regular price Rs. 540.00
Regular price Sale price Rs. 540.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 440

Type - Hardcover

Gift Wrap
Gift Wrap Rs. 15.00

"ನಾಡಿನ ನಾಡಿಮಿಡಿತ ದಾಖಲಿಸುವ ಲೇಖನಗಳು: ಕನ್ನಡ ಸಾಹಿತ್ಯವು ವಿಪುಲ ಮತ್ತು ವಿಭಿನ್ನ ಹಿನ್ನೆಲೆಗಳುಳ್ಳ ಸಾಹಿತಿಗಳ ಕೊಡುಗೆಯಿಂದ ಶ್ರೀಮಂತವಾಗಿದೆ. ಇಲ್ಲಿ ದರ್ಬೆ ಹಿಡಿದವರು, ಕತ್ತಿ ಹಿಡಿದವರು, ತಕ್ಕಡಿ ತೂಗಿದವರು, ನೇಗಿಲು ಹಿಡಿದವರು, ಸೌಟು ಹಿಡಿದವರು, ತೇಪೆ ಹಿಡಿದವರು, ಕರಿ ಕೋಟು ಹಾಕಿದವರು, ಖಾಕಿ ಧರಿಸಿದವರು; ಆಳಿದವರು, ಆಳಿಸಿಕೊಂಡವರು, ತುಳಿಸಿಕೊಂಡವರು, ಸೋತವರು, ಗೆದ್ದವರು - ಎಲ್ಲರೂ ಪೆನ್ನನ್ನು ಹಿಡಿದು ಸಾಹಿತ್ಯವನ್ನು ರಚಿಸಿದ್ದಾರೆ. ಇನ್ನು ಸಿರೆಂಜು ಹಿಡಿದವರು ಪೆನ್ನು ಹಿಡಿಯದಿದ್ದರೆ ಬಹುತ್ವದ ಮಾತೆಲ್ಲಿ? ಜನರ ನಾಡಿ ನೋಡುವವರು ನುಡಿಯ ಕಟ್ಟದಿದ್ದರೆ ಅಂತಹ ಸಾಹಿತ್ಯ ಅಪೂರ್ಣವಾಗಿಯೇ ಉಳಿಯುತ್ತದೆ.

ಈ ಸುದೀರ್ಘ ಕೃತಿಯು ಹಲವು ಕಾರಣಕ್ಕೆ ಮಹತ್ವದ್ದಾಗಿದೆ. ಇಲ್ಲಿ ವೈದ್ಯರು ತಮ್ಮ ವೃತ್ತಿಯ ಖಾಸಗಿ ಅನುಭವಗಳನ್ನು ದಾಖಲಿಸಿದ್ದಾರೆ. ತಾವು ಚಿಕಿತ್ಸೆ ನೀಡಿದ ವಿಶೇಷ ರೋಗಿಗಳು, ಆಗ ಎದುರಿಸಿದ ಮಾನವೀಯ ಸನ್ನಿವೇಶಗಳು, ಮಿಂಚಿನಂತೆ ಜರುಗಿದ ಪವಾಡ ಸದೃಶ ಸಂಗತಿಗಳು - ಎಲ್ಲವೂ ಇಲ್ಲಿವೆ. ಯಾವುದೇ ಭಾಷಾ ಪಾಂಡಿತ್ಯದ ಗೊಡವೆಗೆ ಹೋಗದೆ ಸರಳಗನ್ನಡದಲ್ಲಿ ಇವನ್ನು ನಿರೂಪಿಸಿದ್ದಾರೆ. ಕೇವಲ ತಮ್ಮ ಯಶಸ್ಸುಗಳನ್ನು ಮಾತ್ರವಲ್ಲದೆ ತಮ್ಮ ಸೋಲುಗಳು, ಅಸಹಾಯಕತೆ, ತಾವು ಅನುಭವಿಸಿದ ಭಯಗಳು, ವಂಚನೆಗಳು, ತಮಾಷೆಗಳು - ಎಲ್ಲವೂ ಇಲ್ಲಿ ಬಂದಿವೆ. ನಾಡಿನ ಮೂಲೆಮೂಲೆಯಲ್ಲಿ ವೃತ್ತಿ ಮಾಡಿದ ಹಲವು ವಯೋಮಾನದ ವೈದ್ಯರು ಇಲ್ಲಿ ಲೇಖನಗಳನ್ನು ಬರೆದಿರುವುದರಿಂದ ಈ ಕೃತಿ ಒಟ್ಟಾರೆಯಾಗಿ ಕನ್ನಡ ನೆಲದ ಜನರ ಬದುಕಿನ ಕ್ರಮ, ಅವರ ಬವಣೆಗಳು, ಅವರ ವೇದನೆಗಳು, ಅವರ ನಂಬಿಕೆಗಳನ್ನು ಪ್ರತಿಫಲಿಸುತ್ತದೆ. ಜಾತಿ-ಧರ್ಮದ ತಾರತಮ್ಯ, ಬಡತನ-ಸಿರಿತನಗಳ ಅರ್ಭಟ, ಗಂಡು-ಹೆಣ್ಣಿನ ನಡುವಿನ ಒಡಕು - ಎಲ್ಲವನ್ನೂ ಇದು ದಾಖಲಿಸುತ್ತದೆ. ಇದನ್ನು ವೈದ್ಯಕೀಯ ಗ್ರಂಥವಾಗಿ ಓದದೆ, ಕನ್ನಡಿಗರ ಸಮಾಜಶಾಸ್ತ್ರದ ಪಠ್ಯವಾಗಿಯೂ ಓದಬಹುದಾಗಿದೆ. ಇಂತಹ ಲೇಖನಗಳನ್ನು ಬರೆಯುವಾಗ ವೈದ್ಯರು ತಮ್ಮ ವೈದ್ಯಕೀಯ ಅಹಂ ಬದಿಗಿಟ್ಟು, ಜನಸಾಮಾನ್ಯರಲ್ಲಿ ಒಂದಾಗಿ ಮತ್ತೊಬ್ಬ ವ್ಯಕ್ತಿಯ ಬದುಕನ್ನು ಕಾಣುವ ಪರಿಯೇ ಹೃದ್ಯವಾಗಿದೆ.

ಎಷ್ಟೇ ತಜ್ಞ ವೈದ್ಯನಾದರೂ ಅವನು ವಿಧಿಯನ್ನು ಮಣಿಸಲಾರ. ತನ್ನ ಕೈಲಾದ ಮಟ್ಟಿಗೆ ಮನುಷ್ಯರ ಒಳಿತಿಗಾಗಿ ಪ್ರಯತ್ನ ಪಡಬಲ್ಲನೇ ಹೊರತು ಪವಾಡ ಜರುಗಿಸಲಾರ. ಆದ್ದರಿಂದ ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ಜೀವವೊಂದು ಕೈಜಾರಿಹೋಗುವುದನ್ನು ನೋಡಬೇಕಾದ ವೈದ್ಯರ ಸಂಕಟಗಳು ಒಟ್ಟಾರೆ ಮನುಕುಲದ ಅಸಹಾಯಕತೆಯ ಕೂಗಿನಂತೆ ಕೇಳುತ್ತದೆ. ವೈದ್ಯರು ಮತ್ತು ಸಮಾಜದ ಕೊಡು-ಕೊಳ್ಳುವಿಕೆ ದ್ವಿಮುಖ ಚಲನೆಯನ್ನು ಹೊಂದಿರುವಂಥದ್ದು. ನಿಸ್ಸಂಶಯವಾಗಿ ವೈದ್ಯರ ಈ ಅನುಭವ ಲೇಖನಗಳಿಂದ ಜನಸಾಮಾನ್ಯರು ಕಲಿಯುವುದು ಸಾಕಷ್ಟಿದೆ. ಆದರೆ ಅಷ್ಟೇ ಸೂಕ್ಷ್ಮವಾಗಿ ವೈದ್ಯರಿಗೂ ಸಮಾಜದ ಹಲವು ಸಂಗತಿಗಳ ಪರಿಚಯವಾಗಿ ಅವರ ಮನಸ್ಸನ್ನು ವಿಸ್ತರಿಸಬಲ್ಲವಾಗಿವೆ. ಭಾರತದ ವೈದ್ಯರು ಬಿಡುವಿಲ್ಲದಂತೆ ದುಡಿಯುವವರು, ಸ್ವಂತ ಕುಟುಂಬಕ್ಕೂ ಸಮಯ ಕೊಡಲಾಗದೆ ಸಮಾಜದ ಆರೋಗ್ಯಕ್ಕಾಗಿ ಶ್ರಮಿಸುವವರು. ಅಂತಹ ಗಾಢ ವೃತ್ತಿಯ ಮಧ್ಯೆಯೂ ಬಿಡುವು ಮಾಡಿಕೊಂಡು ಈ ಲೇಖನಗಳ ಗುಚ್ಛವನ್ನು ಸಂಗ್ರಹಿಸಿ ಪ್ರಕಟಿಸುತ್ತಿರುವುದಕ್ಕೆ ಅವರೆಲ್ಲರನ್ನೂ ಅಭಿನಂದಿಸುತ್ತೇನೆ."

ವಸುಧೇಂದ್ರ (ಕನ್ನಡ ಕತೆಗಾರ)

View full details