Dr. Viroopaksha Devaramane
ಸ್ವಲ್ಪ ಮಾತಾಡಿ ಪ್ಲೀಸ್
ಸ್ವಲ್ಪ ಮಾತಾಡಿ ಪ್ಲೀಸ್
Publisher - ಸಾವಣ್ಣ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 164
Type - Paperback
ಒಂದು ಸಂಬಂಧ ಬೆಳದು ಗಟ್ಟಿಗೊಳ್ಳಬೇಕಾದ್ರೆ ವರ್ಷಗಳೇ ಹಿಡಿಯುತ್ತೆ. ಆದರೂ ಅದು ಉಳಿದು ಇನ್ನಷ್ಟು ಸಧೃಡವಾಗಬೇಕಾದ್ರೆ ನಿರಂತರ ಪ್ರೀತಿ, ವಿಶ್ವಾಸ, ಮುಖ್ಯವಾಗಿ ಮಾತುಗಳು ಬೇಕು. ಎಲ್ಲ ಸಂಬಂಧಗಳನ್ನು ಜೀವಂತವಾಗಿಡಬಲ್ಲ ದಿವ್ಯಶಕ್ತಿ ಇರುವುದು ಈ ಮಾತುಗಳಿಗೆ ಮಾತ್ರ. ಅಂಥಹ ಮಾತುಗಳೇ ಇರದ ಬರಡು ವಾತಾವರಣದಲ್ಲಿ ಸಂಬಂಧಗಳ ಕೊಂಡಿಗಳು ಶಿಥಿಲಗೊಂಡು ಒಂದೊಂದಾಗಿ ಕಳಚಿಕೊಳ್ಳುತ್ತಾ ಒಂದು ದಿನ ನಾವು ಅಕ್ಷರಶಃ ಒಂಟಿಯಾಗಿ ಬಿಡುತ್ತೇವೆ. ಸಮಸ್ಯೆಗಳ ಕಾರಣಗಳು ಏನೇ ಇರಲಿ, ಆದರೆ ಪರಿಹಾರ ಒದಗಿಸುವ ಬೀಜಮಂತ್ರ ಒಂದೇ. ಅದು ಮಾತು. ಮಾತು ಮನೆ ಕೆಡಸೀತು ಅಂತಾರೆ. ಆದರೆ ಮಾತೇ ಆಡದಿದ್ದರೆ ನಾವೀ ಪ್ರೀತಿಯಿಂದ ಕಟ್ಟಿದ ಸಂಬಂಧಗಳ ಸೌಧಗಳು ನಮ್ಮ ಕಣ್ಣೆದುರಲ್ಲೇ ಕುಸಿದು ಹೋಗುವುದು ನಿಶ್ಚಿತ. ಮಾತಿನ ಮಹಿಮೆ ಏನೆಂದು ತಿಳಿಸಿಕೊಡುವುದೇ ಈ ಪುಸ್ತಕದ ಉದ್ದೇಶ.
ಈ ಪುಸ್ತಕ ಓದಿ ಕೆಳಗಿಡುವಷ್ಟರಲ್ಲಿ ನಿಮ್ಮೆಲ್ಲಾ ಸಂಬಂಧಗಳಲ್ಲಿ ಚೈತನ್ಯ ತುಂಬಿ ನಿಮ್ಮಲ್ಲಿ ನವ ಜೀವನೋತ್ಸಾಹ ತುಂಬುವುದು ಗ್ಯಾರಂಟಿ. ಇಟ್ಸ್ ಮೈ ಪ್ರಾಮಿಸ್. ನಿಮ್ಮೆಲ್ಲಾ ಸಂತಸಗಳಿಗೆ ಕಾರಣವಾಗಬಲ್ಲ ಸಂಬಂಧಗಳ ಕೊಂಡಿಗಳು ಕಳಚುವ ಮುನ್ನ.. ಸ್ವಲ್ಪ ಮಾತಾಡಿ ಪ್ಲೀಸ್.
- ವಿರೂಪಾಕ್ಷ ದೇವರಮನೆ
Share
ಕೆಲವೊಮ್ಮೆ ಹಲವು ಸಂಬಂಧಗಳು ಮಾತಾಡಿ ಹಾಳಾದ್ರೆ ಕೆಲವೊಂದು ಸೂಕ್ಷ್ಮ ಸಂಬಂಧಗಳು ಮಾತಾಡದೇ ಬಿದ್ದು ಹೋಗುತ್ತವೆ ಆ ಸ್ಥಿತ ಪ್ರಜ್ಞತ್ವವನ್ನು ಕಾಪಾಡಿಕೊಂಡು ಮನಸು ಮುಕ್ತವಾಗಿ ಮಾತಾಡಿ ಎನ್ನುವ ಘಟನೆಗಳನ್ನು ಡಾ.ತುಂಬಾ ಮನೋಜ್ಞವಾಗಿ ತಿಳಿಸಿದ್ದಾರೆ ನನಗೂ ಒಮ್ಮೆ ಡಾ.ಭೇಟಿಯಾಗುವ ಕುತೂಹಲ ಹೆಚ್ಚಾಗಿದೆ....ಅಭಿನಂದನೆಗಳು ಹಾಗು ಧನ್ಯವಾದಗಳು ಡಾಕ್ಟ್ರೇ ಹಾಗು ಅರಿವು ಮೂಡಿಸುವ ಪುಸ್ತಕಗಳನ್ನು ತಲುಪಿಸುವ ಹರಿವಿಗೂ ಕೂಡ ಧನ್ಯವಾದಗಳು
Subscribe to our emails
Subscribe to our mailing list for insider news, product launches, and more.